ಬೆಂಗಳೂರು: ಮಲ್ಲೇಶ್ವರಂನ ಕೇಂದ್ರಿಯ ವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 2024-25ರ ಶೈಕ್ಷಣಿಕ ವರ್ಷದ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಯಲಿದೆ. ಈ ಹುದ್ದೆಗೆ ಸಂದರ್ಶನದ ಮೂಲಕ ಆಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಹುದ್ದೆ ವಿವರ: ಕೇಂದ್ರಿಯ ವಿದ್ಯಾಲಯ ಮಲ್ಲೇಶ್ವರನಲ್ಲಿ ವಿವಿಧ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಹುದ್ದೆ ನಿರ್ದಿಷ್ಟ ಸಂಖ್ಯೆಗಳನ್ನು ತಿಳಿಸಿಲ್ಲ.
ಪಿಜಿಟಿ, ಜಿಟಿಟಿ, ಪ್ರಾಥಮಿಕ ಶಿಕ್ಷಕರು, ಕಂಪ್ಯೂಟರ್ ಇನ್ಸ್ಟ್ರಕ್ಟರ್, ಸ್ಪೋರ್ಟ್ ಕೋಚ್, ಯೋಗ ಟೀಚರ್, ಕನ್ನಡ ಇನ್ಸ್ಟ್ರಕ್ಟರ್, ಶಿಕ್ಷಣ ಸಮಾಲೋಚಕರು, ವಿಶೇಷ ಶಿಕ್ಷಕರು, ವೈದ್ಯರು, ನರ್ಸ್ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ:
- ಪಿಜಿಟಿ: ಎಂಎಸ್ಸಿ, ಬಿಇ, ಬಿಟೆಕ್
- ಜಿಟಿಟಿ: ಬಿಸಿಎ, ಬಿಎಸ್ಸಿ, ಎಂಸಿಎ, ಎಂಕಾಂ
- ಪ್ರಾಥಮಿಕ ಶಿಕ್ಷಕರು: ಪದವಿ, ಬಿ.ಇಡಿ
- ಕಂಪ್ಯೂಟರ್ ಇನ್ಸ್ಟ್ರಕ್ಟರ್: ಬಿಇ, ಬಿಟೆಕ್, ಬಿಸಿಎ, ಎಂಸಿಎ, ಎಂಎಸ್ಸಿ, ಸ್ನಾತಕೋತ್ತರ ಪದವಿ
- ಸ್ಪೋರ್ಟ್ ಕೋಚ್: ಪದವಿ
- ಯೋಗ ಟೀಚರ್: ಪದವಿ
- ಕನ್ನಡ ಇನ್ಸ್ಟ್ರಕ್ಟರ್: ಪದವಿ, ಬ. ಇಡಿ
- ಶಿಕ್ಷಣ ಸಮಾಲೋಚಕರು: ಬಿಎ, ಬಿಎಸ್ಸಿ, ಡಿಪ್ಲೊಮಾ ಪದವಿ
- ವಿಶೇಷ ಶಿಕ್ಷಕರು: 12ನೇ ತರಗತಿ, ಡಿಎಡ್, ಡಿಪ್ಲೊಮಾ
- ವೈದ್ಯರು: ಎಂಬಿಬಿಎಸ್
- ನರ್ಸ್: ನರ್ಸಿಂಗ್ ಪದವಿ
ಆಯ್ಕೆ : ನೇರ ಸಂದರ್ಶನ ಮೂಲಕ
ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಫೆಬ್ರವರಿ 28ರಂದು ಬೆಳಗ್ಗೆ 8.30 ರಿಂದ 11.30ರ ವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ಶೈಕ್ಷಣಿಕ ದಾಖಲೆ, ಅನುಭವ ಪತ್ರ ಸೇರಿದಂತೆ ಇತರೆ ದಾಖಲಾತಿಯೊಂದಿಗೆ ನಿಗದಿತ ಸಮಯದಲ್ಲಿ ಭಾಗಿಯಾಗಬಹುದಾಗಿದೆ.
ನೇರ ಸಂದರ್ಶನ ನಡೆಯುವ ಸ್ಥಳ: ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಮಲ್ಲೇಶ್ವರಂ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು malleshwaram.kvs.ac.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಸಹಾಯಕ ಕಾನೂನು ಅಧಿಕಾರಿಗಳ ಹುದ್ದೆ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಿಂದ ಸಹಾಯಕ ಕಾನೂನು ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು ಆರು ಹುದ್ದೆಗಳನ್ನು 2 ವರ್ಷದ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ವಕೀಲ ವೃತ್ತಿಯಲ್ಲಿ ಕನಿಷ್ಠ 5 ವರ್ಷದ ಹುದ್ದೆ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಮಾಸಿಕ 40 ಸಾವಿರ ರೂಪಾಯಿ ವೇತನ ನಿಗದಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 19 ಆಗಿದ್ದು, ನಿಗಮದ ವೆಬ್ಸೈಟ್ನಲ್ಲಿ ಲಭ್ಯವಾಗುವ ನಿಗದಿತ ಅರ್ಜಿ ಜೊತೆಗೆ ವಿದ್ಯಾರ್ಹತೆ ಸೇರಿದಂತೆ ಅಗತ್ಯ ದಾಖಲಾತಿಯನ್ನು kpclcontractapptappt@gmail.com ಈ ಮೇಲ್ ವಿಳಾಸಕ್ಕೆ ಸಲ್ಲಿಸಬೇಕು. ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿಗೆ kpcl.karnataka.gov.in ಭೇಟಿ ನೀಡಿ.
ಇದನ್ನೂ ಓದಿ: ನಾಗರಿಕ ಸೇವಾ ಪರೀಕ್ಷೆಗಳಿಗೆ ಯುಪಿಎಸ್ಸಿ ಅಧಿಸೂಚನೆ