ETV Bharat / education-and-career

ಯುಜಿ ಸಿಇಟಿ-ನೀಟ್: ಎಂಜಿನಿಯರಿಂಗ್ ಸೆ.23, ವೈದ್ಯಕೀಯ ಸೆ.24ರಿಂದ ಪ್ರವೇಶ ಆರಂಭ - UG CET NEET Seat Allotment

author img

By ETV Bharat Karnataka Team

Published : 2 hours ago

ಯುಜಿ ಸಿಇಟಿ ಮತ್ತು ಯುಜಿ ನೀಟ್ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಹಾಗೆಯೇ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್​​ಗಳಿಗೆ ಪ್ರವೇಶ ಪ್ರಕ್ರಿಯೆ ಕುರಿತು ಸಹ ಮಾಹಿತಿ ನೀಡಿದೆ.

karnataka examinations authority
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ETV Bharat)

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಯುಜಿ ಸಿಇಟಿ ಮತ್ತು ಯುಜಿ ನೀಟ್ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಭಾನುವಾರ (ಸೆ.22) ತನ್ನ ವೆಬ್‌ಸೈಟ್​​ನಲ್ಲಿ ಪ್ರಕಟಿಸಿದೆ. ಇದರೊಂದಿಗೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್​​ಗಳಿಗೆ ಎರಡನೇ ಹಂತದ ಪ್ರವೇಶ ಪ್ರಕ್ರಿಯೆ ಸೋಮವಾರದಿಂದ (ಸೆ.23) ಆರಂಭವಾಗಲಿದೆ.

ಸೀಟು ಹಂಚಿಕೆಯಾದ ಎಂಜಿನಿಯರಿಂಗ್ ಸೇರಿ ಇತರ ಕೋರ್ಸ್​ಗಳ (ವೈದ್ಯಕೀಯ ಕೋರ್ಸ್ ಹೊರತುಪಡಿಸಿ) ಅಭ್ಯರ್ಥಿಗಳು ಸೆ.23ರ ಬೆಳಗ್ಗೆ 11ರಿಂದ ಸೆ.25ರ ರಾತ್ರಿ 11:59ರ ವರೆಗೆ ಚಾಯ್ಸ್ ಆಯ್ಕೆ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಪ್ರತಿ ಚಾಯ್ಸ್​​ನ ಪರಿಣಾಮವನ್ನು ಗಮನಿಸಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚಾಯ್ಸ್-1 ಅಥವಾ ಚಾಯ್ಸ್-2 ನಮೂದಿಸಿದ ಸಿಇಟಿ ಅಭ್ಯರ್ಥಿಗಳು ಮಾತ್ರ ಸೆ.23ರಿಂದ 26ರ ನಡುವಿನ ಬ್ಯಾಂಕ್ ಕೆಲಸದ ಅವಧಿಯಲ್ಲಿ ಶುಲ್ಕ ಪಾವತಿಸಬೇಕು ಎಂದಿದ್ದಾರೆ.

ಚಾಯ್ಸ್-1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಮಾತ್ರ ಸೆ.23ರಿಂದ 26ರ ವರೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಚಾಯ್ಸ್-1 ಅಭ್ಯರ್ಥಿಗಳು ಆಯಾ ಕಾಲೇಜಿಗೆ ವರದಿ ಮಾಡಿಕೊಂಡು ಸೆ.26ಕ್ಕೆ ಮುನ್ನ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ ಕೋರ್ಸ್​​ಗಳಿಗೆ ಚಾಯ್ಸ್ ಇಲ್ಲ: ಈ ಮುಂಚೆಯೇ ತಿಳಿಸಿರುವಂತೆ, ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್​​ಗಳಿಗೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಯಾವುದೇ ಚಾಯ್ಸ್ ಲಭ್ಯವಿರುವುದಿಲ್ಲ. ಈ ಅಭ್ಯರ್ಥಿಗಳು ಸೆ.24ರಿಂದ 26ರವರೆಗೆ ಶುಲ್ಕ ಪಾವತಿಸಿ (ಇದುವರೆಗೆ ಪಾವತಿಸದಿದ್ದರೆ) ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು, ನಿಗದಿತ ದಿನಾಂಕದೊಳಗೆ ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು. ಈ ಕೋರ್ಸ್​​ಗಳಿಗೆ ಹಿಂದಿನ ಸುತ್ತಿನಲ್ಲಿ ಪಾವತಿಸಿದ್ದ ಶುಲ್ಕವನ್ನು ಎರಡನೇ ಸುತ್ತಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ವೈದ್ಯಕೀಯ ಸೀಟಿಗೆ ಪಾವತಿಸಿದ್ದ ಕಾಷನ್ ಡಿಪಾಸಿಟ್ ಅನ್ನು ಈ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿದ್ದರೆ ಮಾತ್ರ ಹೊಂದಾಣಿಕೆ ಮಾಡಲಾಗುವುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮರುಪಾವತಿಸಲಾಗುವುದು. ಆದರೆ, ಹಂಚಿಕೆಯಾದ ಬೇರೆ ಕೋರ್ಸ್​​ಗಳಿಗೆ ಇದನ್ನು ಹೊಂದಾಣಿಕೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಹಂಚಿಕೆಯಾಗಿರುವ ವೈದ್ಯಕೀಯ ಸೀಟು ಬೇಡವೆನಿಸಿದಲ್ಲಿ ಸೆಪ್ಟಂಬರ್ 25ರ ಸಂಜೆ 5.30ರೊಳಗೆ ಕೆಇಎ ಕಚೇರಿಗೆ ಬಂದು ರದ್ದುಪಡಿಸಿಕೊಳ್ಳಬೇಕು. ಹೀಗೆ ರದ್ದುಪಡಿಸಿಕೊಂಡವರಿಗೆ ಆನ್​ಲೈನ್ ಮಾಪ್ ಅಪ್ ರೌಂಡ್​​ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಪ್ರಸನ್ನ ಹೇಳಿದರು.

ಶುಲ್ಕ ಪಾವತಿಸಿದ ನಂತರ ಸೆ.24 ಮತ್ತು 25ರಂದು ಪ್ರಾಧಿಕಾರಕ್ಕೆ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್​​ಸೈಟ್​​ನಲ್ಲಿ ಮಾಹಿತಿಯನ್ನು ಓದಿ ತಿಳಿದುಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ರೈಲ್ವೆಯಲ್ಲಿದೆ 5066 ಅಪ್ರೆಂಟಿಸ್​ ಹುದ್ದೆ; ನಿಮ್ಮದು ಐಟಿಐ ಆಗಿದೆಯೇ? ಹಾಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ - apprentice recruitment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.