ETV Bharat / education-and-career

ಬೆಂಗಳೂರು ದೂರದರ್ಶನ ಕೇಂದ್ರದಲ್ಲಿದೆ ಉದ್ಯೋಗಾವಕಾಶ; 80,000 ರೂ ವೇತನ - SENIOR CORRESPONDENT JOB

ಈ ಹುದ್ದೆಯನ್ನು ಎರಡು ವರ್ಷದ ಗುತ್ತಿಗೆ ಅವಧಿ ಮೇರೆಗೆ ನೇಮಕ ಮಾಡಲಾಗುವುದು. ಈ ಹುದ್ದೆಗೆ 80,000 ದಿಂದ 1,25,000 ವೇತನ ನಿಗದಿಪಡಿಸಲಾಗಿದೆ.

Senior Correspondent Job Recruirment by prasar Bharati Bengaluru
ಉದ್ಯೋಗ ಮಾಹಿತಿ (ಈಟಿವಿ ಭಾರತ್​)
author img

By ETV Bharat Karnataka Team

Published : Jan 18, 2025, 2:46 PM IST

ಬೆಂಗಳೂರು: ಪ್ರಸಾರ ಭಾರತಿ ದೂರದರ್ಶನದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸುದ್ದಿ ವಿಭಾಗದಲ್ಲಿ ಈ ನೇಮಕಾತಿ ನಡೆಯುತ್ತಿದ್ದು, ಗುತ್ತಿಗೆ ಅವಧಿ ಮೇರೆಗೆ ಈ ಹುದ್ದೆ ನೇಮಕಾತಿ ನಡೆಯಲಿದೆ.

ಹುದ್ದೆ ವಿವರ: ಸೀನಿಯರ್​ ಕರೆಸ್ಪಾಡೆಂಟ್​​ - ಒಂದು ಹುದ್ದೆ

ಈ ಹುದ್ದೆಯನ್ನು ಎರಡು ವರ್ಷದ ಗುತ್ತಿಗೆ ಅವಧಿ ಮೇರೆಗೆ ನೇಮಕ ಮಾಡಲಾಗುವುದು. ಈ ಹುದ್ದೆಗೆ 80,000 ದಿಂದ 1,25,000 ವೇತನ ನಿಗದಿಪಡಿಸಲಾಗಿದೆ.

Senior Correspondent Job Recruirment by prasar Bharati Bengaluru
ಅಧಿಸೂಚನೆ (pಪ್ರಸಾರ ಭಾರತಿ ಜಾಲತಾಣ)

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪತ್ರಿಕೋದ್ಯಮ, ಸಮೂಹ ಮಾಧ್ಯಮ ಅಥವಾ ಇನ್ನಿತರ ಸಂಬಂಧಿತ ಕ್ಷೇತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಪದವಿ ಮಾಡಿರಬೇಕು. ಅಭ್ಯರ್ಥಿಗಳು ಪ್ರಾದೇಶಿಕ ಭಾಷೆ ಹಿಡಿತದ ಜೊತೆಗೆ ಇಂಗ್ಲಿಷ್​ ಮತ್ತು ಹಿಂದಿ ಭಾಷೆ ಜ್ಞಾನ ಹೊಂದಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ 5 ವರ್ಷ ಹುದ್ದೆ ನಿರ್ವಹಣೆ ಅನುಭವ ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಈ ಹುದ್ದೆಗೆ ಆನ್​ಲೈನ್​ ಮೂಲಕವೇ ಅರ್ಜಿ ಸಲ್ಲಿಸಬೇಕು. applications.prasarbharati.org ಇಲ್ಲಿ ಸಲ್ಲಿಕೆ ಮಾಡಬಹುದಾಗಿದೆ. ಶಾರ್ಟ್​​ಲಿಸ್ಟ್​ ಆದ ಅಭ್ಯರ್ಥಿಗಳನ್ನು ಇಮೇಲ್​​ ಮೂಲಕ ಸಂಪರ್ಕಿಸಲಾಗುವುದು.

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಜನವರಿ 31 ಆಗಿದೆ.

ಈ ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು prasarbharati.gov.in ಇಲ್ಲಿಗೆ ಭೇಟಿ ನೀಡಬೇಕಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಅಂಗನವಾಡಿ ಕಾರ್ಯಕರ್ತರು, ಸಹಾಯಕರ ಹುದ್ದೆಗೆ ನೇಮಕಾತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.