ETV Bharat / education-and-career

ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಉದ್ಯೋಗಾವಕಾಶ: ಎಂಎಸ್ಸಿ ಪದವಿ ಅರ್ಹತೆ - ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿ

122 ಸೈಂಟಿಸ್ಟ್​​ ಬಿ ಹುದ್ದೆಗಳ ಭರ್ತಿಗೆ ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

scientist b job notification form CSB
scientist b job notification form CSB
author img

By ETV Bharat Karnataka Team

Published : Mar 4, 2024, 12:43 PM IST

ಬೆಂಗಳೂರು​: ಕೇಂದ್ರ ಜವಳಿ ಸಚಿವಾಲಯದ ನಿಯಂತ್ರಣದಲ್ಲಿರುವ ಕೇಂದ್ರ ರೇಷ್ಮೆ ಮಂಡಳಿಯಲ್ಲಿ (ಸಿಎಸ್​ಬಿ) 122 ಸೈಂಟಿಸ್ಟ್​ ಬಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕೃಷಿ ವಿಜ್ಞಾನದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬೆಂಗಳೂರಿನ ಕಚೇರಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ವಿಜ್ಞಾನ ಅಥವಾ ಕೃಷಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ.

ವಯೋಮಿತಿ: ಗರಿಷ್ಠ ವಯೋಮಿತಿ 35 ವರ್ಷ.

ವೇತನ: ಮಾಸಿಕ ₹56,100 - ₹1,77,500.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ವಿನಾಯಿತಿ ಇದೆ.

ಆಯ್ಕೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ.

ಅಧಿಸೂಚನೆ
ಅಧಿಸೂಚನೆ

ಫೆಬ್ರುವರಿ 24ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮಾರ್ಚ್​ 31 ಕಡೇಯ ದಿನ. ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು csb.gov.in ಇಲ್ಲಿಗೆ ಭೇಟಿ ನೀಡಿ.

ಬಿಇಎಲ್​ನಲ್ಲಿ ಸೀನಿಯರ್​ ಅಸಿಸ್ಟೆಂಟ್​​ ಇಂಜಿನಿಯರ್​ ಹುದ್ದೆಗಳು: ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​ನಲ್ಲಿ 24 ಹಿರಿಯ ಸಹಾಯಕ ಇಂಜಿನಿಯರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶಾಖಪಟ್ಟಣಂ, ಕಾರವಾರ, ಕೊಚ್ಚಿ, ಗುವಾಹಟಿ ಕಚೇರಿಗೆ ನೇಮಕಾತಿ ನಡೆಯಲಿದೆ. ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು. ಗರಿಷ್ಠ 50 ವರ್ಷ ವಯೋಮಿತಿ ಹೊಂದಿರುವವರು ಅರ್ಜಿ ಹಾಕಬಹುದು. ಅಭ್ಯರ್ಥಿಗಳು ಬಿಇಎಲ್​ ವೆಬ್​ಸೈಟ್​ನಲ್ಲಿ ಸಿಗುವ ನಿಗದಿತ ಅರ್ಜಿ ತುಂಬಿ, ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕಿದೆ.

ಅಸಿಸ್ಟೆಂಟ್​ ಮ್ಯಾನೇಜರ್​​, ಎಚ್​ಆರ್​​, ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​​, ಮಿಲಿಟರಿ ಕಮ್ಯೂನಿಕೇಷನ್​ ಮತ್ತು ಎನ್​ಡಬ್ಲ್ಯೂಸಿಎಸ್​-ಎಸ್​ಬಿಯು, ಜಾಲಹಳ್ಳಿ ಪೋಸ್ಟ್​, ಬೆಂಗಳೂರು-560013.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೇಯ ದಿನ ಮಾರ್ಚ್​​ 20. ಹೆಚ್ಚಿನ ಮಾಹಿತಿಗೆ bel-india.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: 364 ಭೂ ಮಾಪಕರ ಹುದ್ದೆಗಳ ಭರ್ತಿಗೆ ಕೆಪಿಎಸ್​ಸಿ ಅಧಿಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.