RRB Recruitment 2024: ರೈಲ್ವೇ ನೇಮಕಾತಿ ಮಂಡಳಿ (RRB) ದೇಶಾದ್ಯಂತ, ವಿವಿಧ ಪ್ರದೇಶಗಳಲ್ಲಿ ಸುಮಾರು 8,113 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಇವುಗಳಲ್ಲಿ 1,736 ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕರ ಹುದ್ದೆಗಳಿದ್ದು, 3,144 ಗೂಡ್ಸ್ ರೈಲು ವ್ಯವಸ್ಥಾಪಕರ ಹುದ್ದೆಗಳು ಖಾಲಿ ಇವೆ. ಇವುಗಳಲ್ಲದೆ ಸ್ಟೇಷನ್ ಮಾಸ್ಟರ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಮತ್ತು ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯಾವ ಪ್ರದೇಶಗಳಲ್ಲಿ ಎಷ್ಟು ಹುದ್ದೆಗಳಿವೆ? ಅರ್ಜಿ ಶುಲ್ಕ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳೋಣ.
ಖಾಲಿ ಹುದ್ದೆಗಳ ವಿವರ
- ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ 1,736
- ಸ್ಟೇಷನ್ ಮಾಸ್ಟರ್ 994
- ಗೂಡ್ಸ್ ಟ್ರೈನ್ ಮ್ಯಾನೇಜರ್ 3,144
- ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ 1,507
- ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ 732
ಇದನ್ನು ಓದಿ: RDSWDಯಲ್ಲಿ ಪದವೀಧರರಿಗೆ ಉದ್ಯೋಗಾವಕಾಶ; ಇಲ್ಲಿದೆ ಸಂಪೂರ್ಣ ಮಾಹಿತಿ - RDWSD Recruitment
ಪ್ರದೇಶವಾರು ಖಾಲಿ ಹುದ್ದೆಗಳು: ಅರ್ಜಿ ಕರೆಯಲಾದ ಸ್ಥಳಗಳ ವಿವರ
- RRB ಸಿಕಂದರಾಬಾದ್ - 478
- RRB ಬೆಂಗಳೂರು - 496
- RRB ಚೆನ್ನೈ - 436
- RRB ಭುವನೇಶ್ವರ್ - 758
ಯಾರು ಅರ್ಹರು?: ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ. ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್/ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಪದವಿ ಜೊತೆಗೆ ಇಂಗ್ಲಿಷ್/ಹಿಂದಿಯಲ್ಲಿ ಕಂಪ್ಯೂಟರ್ ಟೈಪಿಂಗ್ ಪ್ರಾವೀಣ್ಯತೆ ಕಡ್ಡಾಯವಾಗಿದೆ.
ವಯಸ್ಸು: 01-01-2025 ರಂತೆ 18 ರಿಂದ 36 ವರ್ಷಗಳ ನಡುವೆ ಇರಬೇಕು. ಒಬಿಸಿಗಳಿಗೆ ಮೂರು ವರ್ಷ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಐದು ವರ್ಷ, ಅಂಗವಿಕಲರಿಗೆ ಹತ್ತು ವರ್ಷ ಸಡಿಲಿಕೆ ಇದೆ.
ಆರಂಭಿಕ ವೇತನ: ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ/ ಸ್ಟೇಷನ್ ಮಾಸ್ಟರ್ ಹುದ್ದೆಗೆ ತಿಂಗಳಿಗೆ 35,400 ರೂ. ವೇತನ ಇರುತ್ತದೆ. ಇತರ ಹುದ್ದೆಗಳಿಗೆ 29,200 ರೂ. ಮಾಸಿಕ ವೇತನ ಸಿಗಲಿದೆ.
ಅರ್ಜಿ ಶುಲ್ಕ: ಸಾಮಾನ್ಯ, EWS, OBC ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.500 ಪಾವತಿಸಬೇಕು. ಉಳಿದ ಎಸ್‌ಸಿ, ಎಸ್‌ಟಿ, ಇಎಸ್‌ಎಂ, ಇಬಿಸಿ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು ರೂ.250 ಶುಲ್ಕವಿದೆ.
ಹೀಗಿರಲಿದೆ ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ (ಶ್ರೇಣಿ-1, ಶ್ರೇಣಿ-2)
ಟೈಪಿಂಗ್ ಸ್ಕಿಲ್ ಟೆಸ್ಟ್/ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್
ಡಾಕ್ಯುಮೆಂಟ್ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ
- ಮೊದಲು ನೀವು ಬಯಸುವ RRB ಪ್ರದೇಶದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ಪ್ರವೇಶ ಪಡೆದುಕೊಳ್ಳಿ
- ಅದರಲ್ಲಿ ಕಾಣಿಸುವ RRB NTPC Recruitment 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಂತರ ನೀವು ನಿಮ್ಮ ಹೆಸರು, ಇ-ಮೇಲ್ ಐಡಿ, ಫೋನ್ ಸಂಖ್ಯೆಯನ್ನು ನಮೂದಿಸಿ ನೋಂದಾಯಿಸಿಕೊಳ್ಳಿ.
- ಬಳಿಕ ದಾಖಲಾತಿ ID ಮತ್ತು ಪಾಸ್‌ವರ್ಡ್ ರಚನೆ ಮಾಡಿಕೊಳ್ಳಿ
- ಈ ವಿವರಗಳೊಂದಿಗೆ ನೀವು ಮತ್ತೆ RRB ಪೋರ್ಟಲ್‌ಗೆ ಲಾಗಿನ್ ಆಗಿ
- ತದ ನಂತರ ನೀವು ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಮೂದಿಸಿ.
- ಎಲ್ಲ ವಿವರ ಭರ್ತಿ ಮಾಡಿದ ಬಳಿಕ ನೀವು ಅರ್ಜಿ ಸಲ್ಲಿಸಲು ಬಯಸುವ ಪೋಸ್ಟ್ ಅನ್ನು ಆಯ್ಕೆ ಮಾಡಬೇಕು.
- ಇಷ್ಟೆಲ್ಲ ಆದ ಬಳಿಕ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
- ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿ
ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ: 13-10-2024.
ಶುಲ್ಕ ಪಾವತಿಯ ಕೊನೆಯ ದಿನಾಂಕ: 15.10.2024.
ಇಲ್ಲಿ ಕ್ಲಿಕ್ ಮಾಡಿ: ವೆಬ್‌ಸೈಟ್: https://indianrailways.gov.in/
ಇದನ್ನು ಓದಿ: ಚಿಕ್ಕಬಳ್ಳಾಪುರದಲ್ಲಿ ಮಹಿಳೆಯರಿಗೆ ಭರ್ಜರಿ ಉದ್ಯೋಗಾವಕಾಶ - Chikkaballapur WCD Recruitment