ETV Bharat / education-and-career

ನಿಮ್ಹಾನ್ಸ್​​ ನೇಮಕಾತಿ: ನರ್ಸ್ ಸೇರಿದಂತೆ ಹಲವು​ ಹುದ್ದೆಗಳಿಗೆ ವಾಕ್​ ಇನ್​ ಸಂದರ್ಶನ - Nimhans Recruitment for nurse

ನರ್ಸ್​, ಐಟಿ ಕಾರ್ಡಿನೇಟರ್​ ಸೇರಿದಂತೆ ಒಟ್ಟು 84 ಹುದ್ದೆಗಳಿಗೆ ನಾಳೆಯಿಂದ ನೇರ ಸಂದರ್ಶನ ನಡೆಯಲಿದೆ

Nimhans Recruitment for nurse and other post in Walk in interview
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)
author img

By ETV Bharat Karnataka Team

Published : Jun 17, 2024, 2:29 PM IST

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್​)ನಲ್ಲಿ ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ ಯೋಜನೆ ಅಡಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನರ್ಸ್​, ಐಟಿ ಕಾರ್ಡಿನೇಟರ್​ ಸೇರಿದಂತೆ ಒಟ್ಟು 84 ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ಇದರಲ್ಲಿ ಭಾಗಿಯಾಗಬಹುದಾಗಿದ್ದು, ಈ ಕುರಿತ ಮಾಹಿತಿ ಇಲ್ಲಿದೆ

Nimhans Recruitment for nurse and other post in Walk in interview
ಅಧಿಸೂಚನೆ (ನಿಮ್ಹಾನ್ಸ್​​)

ಹುದ್ದೆ ವಿವರ: ಒಟ್ಟು 84 ಹುದ್ದೆಗಳ ನೇಮಕಾತಿ

  • ನರ್ಸ್​​ - 10
  • ಕ್ಲಿನಿಕಲ್​ ಸೈಕಾಲಾಜಿಸ್ಟ್​​ - 11
  • ಐಟಿ ಕಾರ್ಡಿನೇಟರ್​ - 01
  • ನ್ಯೂರೋ ನರ್ಸ್​​ -01
  • ಸೈಕೋಥೆರಪಿಸ್ಟ್​​​ - 02
  • ಸ್ಪೀಚ್​ ಥೆರಪಿಸ್ಟ್​​ -24
  • ಡಿಸ್ಟ್ರಿಕ್ಟ್​​ ಕಾರ್ಡಿನೇಟರ್​ -01
  • ಮೆಡಿಕಲ್​ ಸೋಷಿಯಲ್​ ವರ್ಕರ್​ - 01
  • ಸೀನಿಯರ್​ ರೆಸಿಡೆಂಟ್​ ಮತ್ತು ಮೆಡಿಕಲ್​ ಆಫೀಸರ್​ -33

ವಿದ್ಯಾರ್ಹತೆ:

  • ನರ್ಸ್​​ - ಬಿಎಸ್ಸಿ (ನರ್ಸಿಂಗ್​)
  • ಕ್ಲಿನಿಕಲ್​ ಸೈಕಾಲಾಜಿಸ್ಟ್​​ - ಎಂಎ. ಎಂಎಸ್ಸಿ, ಎಂಫಿಲ್​
  • ಐಟಿ ಕೋರ್ಡಿನೇಟರ್​ - ಐಟಿ, ಬಿಎಸ್ಸಿ, ಬಿಇ, ಬಿಸಿಎ, ಎಂಸಿಎ
  • ನ್ಯೂರೋ ನರ್ಸ್​​ - ಎಂಎಸ್ಸಿ
  • ಸೈಕೋಥೆರಪಿಸ್ಟ್​​​ - ಪದವಿ
  • ಸ್ಪೀಚ್​ ಥೆರಪಿಸ್ಟ್​​ - ಪದವಿ
  • ಡಿಸ್ಟ್ರಿಕ್ಟ್​​ ಕಾರ್ಡಿನೇಟರ್​​ - ಸ್ನಾತಕೋತ್ತರ ಪದವಿ
  • ಮೆಡಿಕಲ್​ ಸೋಷಿಯಲ್​ ವರ್ಕರ್​ - ಸ್ನಾತಕೋತ್ತರ ಪದವಿ
  • ಸೀನಿಯರ್​ ರೆಸಿಡೆಂಟ್​ ಮತ್ತು ಮೆಡಿಕಲ್​ ಆಫೀಸರ್ - ಎಂಬಿಬಿಎಸ್​​, ಎಂಡಿ,

ವಯೋಮಿತಿ: ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 45 ವರ್ಷವಾಗಿದೆ.

ಆಯ್ಕೆ: ಈ ಹುದ್ದೆಗಳನ್ನು ನೇರ ನೇಮಕಾತಿ ಸಂದರ್ಶನ (ವಾಕ್​ ಇನ್​ ಇಂಟರ್​ವ್ಯೂ) ಮೂಲಕ ಆಯ್ಕೆ ಮಾಡಲಾಗುವುದು. ಜೂನ್​ 18ರಿಂದ 24ರವರೆಗೆ ಬೆಳಗ್ಗೆ 9.30ರಿಂದ ಈ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಅಗತ್ಯ ಶೈಕ್ಷಣಿಕ ದಾಖಲೆ, ಅನುಭವ ಪತ್ರ ಸೇರಿದಂತೆ ಇತರ ದಾಖಲಾತಿಯೊಂದಿಗೆ ನಿಗದಿತ ಸಮಯದಲ್ಲಿ ಭಾಗಿಯಾಗಬಹುದಾಗಿದೆ.

ಸಂದರ್ಶನ ನಡೆಯುವ ಸ್ಥಳ: ಬೋರ್ಡ್​ ರೂಮ್​, 4ನೇ ಮಹಡಿ, ಎನ್​ಬಿಆರ್​ಸಿ ಕಟ್ಟಡ, ನಿಮ್ಹಾನ್ಸ್​​, ಬೆಂಗಳೂರು.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು nimhans.ac.in ಭೇಟಿ ನೀಡಿ

ರಾಷ್ಟ್ರೀಯ ರಸಗೊಬ್ಬರ ಇಲಾಖೆ (ಎನ್​ಎಫ್​ಎಲ್​)ನಲ್ಲಿದೆ ಉದ್ಯೋಗವಕಾಶ;

ಕೇಂದ್ರ ಸರ್ಕಾರದ ರಸಗೊಬ್ಬರ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ರಸಗೊಬ್ಬರ ಇಲಾಖೆಯಲ್ಲಿ ಖಾಲಿ ಇರುವ ಇಂಜಿನಿಯರ್​, ಹಿರಿಯ ರಾಸಾಯನಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 97 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಬಿಎಸ್ಸಿ, ಇಂಜಿನಿಯರಿಂಗ್​ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 30 ಆಗಿದ್ದು, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 700 ರೂ. ಅರ್ಜಿ ಶುಲ್ಕ ವಿಧಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಜೂನ್​ 11ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜುಲೈ 1 ಆಗಿದೆ. ಈ ಕುರಿತು ಅಧಿಕೃತ ಅಧಿಸೂಚನೆಗೆ nationalfertilizers.com ಭೇಟಿ ನೀಡಿ.

ಇದನ್ನೂ ಓದಿ: ಭಾರತೀಯ ರೈಲ್ವೇಯಲ್ಲಿ 1,104 ಹುದ್ದೆಗಳ ನೇಮಕಾತಿ: ಲಿಖಿತ ಪರೀಕ್ಷೆ ಇಲ್ಲ, ಕೂಡಲೇ ಅರ್ಜಿ ಹಾಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.