ETV Bharat / state

ಬಿಜೆಪಿ ಗುಂಪುಗಾರಿಕೆ ನಮಗೆ ದೌರ್ಬಲ್ಯ, ಕಾಂಗ್ರೆಸ್​ಗೆ ನಮ್ಮ ದೌರ್ಬಲ್ಯವೇ ಶಕ್ತಿ, ಅಸ್ತ್ರ: ಡಿ.ವಿ‌.ಸದಾನಂದ ಗೌಡ - DV SADANAND GOWDA

ಬಿಜೆಪಿಯೊಳಗೆ ನಡೆಯುತ್ತಿರುವ ಗುಂಪುಗಾರಿಗೆ, ಭಿನ್ನಮತಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಹೈಕಮಾಂಡ್​ ಅನ್ನು​ ಮಧ್ಯ ಪ್ರವೇಶಿಸುವಂತೆ ಕೇಳಿಕೊಂಡಿದ್ದಾರೆ.

Former Minister D V Sadananda Gowda
ಮಾಜಿ ಸಚಿವ ಡಿ.ವಿ.ಸದಾನಂದ ಗೌಡ (ETV Bharat)
author img

By ETV Bharat Karnataka Team

Published : Nov 28, 2024, 4:37 PM IST

Updated : Nov 28, 2024, 5:06 PM IST

ಬೆಂಗಳೂರು: "ಬಿಜೆಪಿಯ ಗುಂಪುಗಾರಿಕೆ ನಮಗೆ ದೌರ್ಬಲ್ಯ, ಕಾಂಗ್ರೆಸ್​ಗೆ ನಮ್ಮ ದೌರ್ಬಲ್ಯವೇ ಶಕ್ತಿ, ಅಸ್ತ್ರ" ಎಂದು ಮಾಜಿ ಸಿಎಂ ಡಿ.ವಿ‌.ಸದಾನಂದ ಗೌಡ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಬಿಜೆಪಿಯೊಳಗಿನ ಭಿನ್ನಮತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, "ಎಲ್ಲವೂ ಹೈಕಮಾಂಡ್​ನವರ ಗಮನಕ್ಕೆ ಬಂದಿದೆ. ನಾನೂ ಕೂಡಾ ಇದರ ಬಗ್ಗೆ ವರಿಷ್ಠರಿಗೆ ಎರಡು ಪತ್ರ ಬರೆದಿದ್ದೇನೆ. ಆದರೂ ಯಾಕೋ ವರಿಷ್ಠರಿಗೆ ನಮ್ಮ ಬಗ್ಗೆ ಗಮನ ಇಲ್ಲ. ನಾನು ಅಧ್ಯಕ್ಷನಾಗಿದ್ದಾಗಲೂ ಇದಕ್ಕಿಂತ ದೊಡ್ಡ ಗುಂಪುಗಳಿದ್ದವು. ಪಕ್ಷ ಕಟ್ಟಿದ್ದು ನಾವು ಎಂದು ಅನಂತ್‌ಕುಮಾರ್ ಹಾಗೂ ಯಡಿಯೂರಪ್ಪ ಗುಂಪು ಪ್ರಬಲವಾಗಿ ಸೆಣಸಾಡ್ತಿತ್ತು. ಆದರೆ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಗುಂಪು ಯಾವತ್ತೂ ಬೀದಿಗೆ ಇಳಿದಿರಲ್ಲ. ನಮ್ಮೊಳಗಿನ ಆಂತರಿಕ ಭಿನ್ನಮತದಿಂದ ಕಾರ್ಯಕರ್ತರಿಗೆ ಬಹಳ ನೋವಿದೆ. ನನ್ನ ಮಾನಸಿಕ ನೋವನ್ನು ನಾನು ಯಾರಲ್ಲೂ ಹೇಳುವುದಕ್ಕಾಗ್ತಿಲ್ಲ. ಪಕ್ಷದ ಈಗಿನ ಸನ್ನಿವೇಶ ದೊಡ್ಡ ದುರಂತ. ಮಹಾರಾಷ್ಟ್ರ ಸರ್ಕಾರ ರಚನೆ ಬಳಿಕವಾದರೂ ಹೈಕಮಾಂಡ್ ಕರ್ನಾಕಟದತ್ತ ಗಮನ ಕೊಡಬೇಕು. ಯಾರೇ ತಪ್ಪು ಮಾಡಿದರೂ ಹೈಕಮಾಂಡ್ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಿ" ಎಂದರು.

ಡಿ.ವಿ‌.ಸದಾನಂದ ಗೌಡ (ETV Bharat)

ಎರೆಹುಳು ನಾಗರಹಾವು : ಪಕ್ಷದಲ್ಲಿನ ಗುಂಪುಗಾರಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಎರೆಹುಳು ಮಣ್ಣಿನ ಸಂಪತ್ತನ್ನು ವೃದ್ಧಿಸಬೇಕೇ ಹೊರತು, ನಾಗರಹಾವು ಆಗಬಾರದು ಎಂದು ಪರೋಕ್ಷವಾಗಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಕುರಿತು ಹೇಳಿದರು.

ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಅಸಮಾಧಾನ: "ಹಿಂದೆಲ್ಲ ಚುನಾವಣಾ ಸೋಲುಗಳಾದಾಗ ಆತ್ಮಾವಲೋಕನ ಸಭೆಗಳನ್ನು ಮಾಡ್ತಾನೇ ಇರಲಿಲ್ಲ. ನಮ್ಮ ದೌರ್ಬಲ್ಯಗಳನ್ನು ಪತ್ತೆ ಹಚ್ಚುವ ಕೆಲಸವನ್ನೂ ನಾವು ಮಾಡಲಿಲ್ಲ. ಪಕ್ಷ ವಿರೋಧಿ ಹೇಳಿಕೆ ಕೊಡೋದೇ ನಮ್ಮ ಶಕ್ತಿ ಅಂತ ನಮ್ಮ ಹಲವು ನಾಯಕರ ಮನಸ್ಥಿತಿ ಆಗಿದೆ. ಕಾಂಗ್ರೆಸ್​ನಲ್ಲಿ ಹಲವು ವೈಫಲ್ಯಗಳಿವೆ. ಸಿಕ್ಕಿರುವ ವಾತಾವರಣ ನಾವು ಸರಿಯಾಗಿ ಬಳಕೆ ಮಾಡಿಕೊಳ್ಳುವುದಕ್ಕಾಗ್ತಿಲ್ಲ. ನಮ್ಮಲ್ಲಿ ಬೇರೆ ಬೇರೆ ತಂಡಗಳು ಏನಿವೆಯೋ ಅವರಿಗೆಲ್ಲ ರಾಷ್ಟ್ರೀಯ ನಾಯಕರ ಸಂಪರ್ಕ ಇದೆ. ಆದರೂ ಬೀದಿಯಲ್ಲಿ ನಮ್ಮವರು ತಮಟೆ ಬಾರಿಸ್ತಿರೋದು ಸರಿಯಲ್ಲ. ಬೀದಿಯಲ್ಲಿ ಮಾತಾಡೋರು ನಮ್ಮ ಪಕ್ಷದಲ್ಲಿ ಇರಲು ಯೋಗ್ಯರಲ್ಲ" ಎಂದು ಆಕ್ಷೇಪಿಸಿದರು.

ನಾನು ಶಸ್ತ್ರತ್ಯಾಗ ಮಾಡೋ ಪ್ರಶ್ನೆಯೇ ಇಲ್ಲ: "ಸೆಲ್ಫ್ ಸ್ಟೈಲ್ ಲೀಡರ್​ಗಳು ಅಂತ ಕರೆಸಿಕೊಂಡವರು ನಮ್ಮಲ್ಲಿ ಬಹಳ ಇದ್ದಾರೆ. ಒಬ್ಬಿಬ್ಬರ ವಿರುದ್ಧ ನಿಜವಾದ ಶಿಸ್ತುಕ್ರಮ ಕೈಗೊಂಡರೆ ಉಳಿದವರು‌ ಸರಿಯಾಗ್ತಾರೆ. ನಾನು ಯಾವುದೇ ಗುಂಪಿನ ಬಗ್ಗೆಯೂ ಹೆಸರು ಹಿಡಿದು ಮಾತಾಡಲ್ಲ. ರಾಜ್ಯ ಬಿಜೆಪಿಗೆ ಇವತ್ತು ಈ ಪರಿಸ್ಥಿತಿ ಬಂತಲ್ಲ ಅಂತ ನೋವಾಗಿದೆ. ಹೈಕಮಾಂಡ್ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಅಶಿಸ್ತು ತೋರಿದ ಯಾರೇ ಆಗಲಿ ಶಿಸ್ತು ಕ್ರಮ ತಗೋಬೇಕು. ನಾನು ಶಸ್ತ್ರತ್ಯಾಗ ಮಾಡೋ ಪ್ರಶ್ನೆಯೇ ಇಲ್ಲ. ನಾನು ಪಕ್ಷದ ಶುದ್ಧೀಕರಣ ಕಾರ್ಯ ಮಾಡೇಮಾಡ್ತೇನೆ. ಹೈಕಮಾಂಡ್ ಗಮನಕ್ಕೂ ತರ್ತೇನೆ" ಎಂದರು.

ಪ್ರತ್ಯೇಕ ಸಭೆಗಳನ್ನು ಮಾಡುವುದು ತಪ್ಪು: "ಪಕ್ಷದ ವಿಚಾರ ಬೀದಿಗೆ ಬಂದು ಮಾತಾಡೋದು, ಪ್ರತ್ಯೇಕ ಸಭೆ ಮಾಡೋದು ಎಲ್ಲವೂ ತಪ್ಪು. ನಾವು ಹಿರಿಯರು ಸೇರಿಕೊಂಡು ಒಂದು ಸಭೆ ಕರೆಯಬೇಕು ಎರಡೂ ಗುಂಪುಗಳನ್ನು ಕರೆದು ಮಾತಾಡಬೇಕು ಅಂತ ನಮ್ಮ‌ ಮನಸಲ್ಲಿತ್ತು. ಆದರೆ ಅವರು ಯಾವಾಗ ಬೀದಿಗೆ ಇಳಿದರೋ‌ ಆಗ ಇದು ನಮ್ಮ ಕೈಯಲ್ಲಿ ಆಗದ ಕೆಲಸ ಅಂತ ಗೊತ್ತಾಯ್ತು. ಬಿಜೆಪಿ ಭಿನ್ನಮತ ರಾಜ್ಯದ ಹಿರಿಯರ ಕೈ‌ಮೀರಿ ಹೋಗಿದೆ. ನಮ್ಮ ಎರಡೂ ಬಣದವರಿಗೆ ಒಂದು ಮಾತು ಹೇಳ್ತೇನೆ. ನೀವು ಇಲ್ಲಿ ಬೀದಿಗೆ ಹೋಗುವ ಬದಲು, ದೆಹಲಿಗೆ ವಿಮಾನ ಹತ್ತಿ ಹೋಗಿ. ದೆಹಲಿಯಲ್ಲಿ ನಮ್ಮ ಅದ್ಭುತ ನಾಯಕರು ಇದ್ದಾರೆ. ದೆಹಲಿಗೆ ಹೋಗಿ ಪಕ್ಷದ ವಿಚಾರ ಹೇಳಿ ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ನೀವೆಲ್ಲ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಅಂತ ಕರೆಸಿಕೊಳ್ಳಲು ನಾಲಾಯಕ್" ಎಂದು ವಾಗ್ದಾಳಿ ನಡೆಸಿದರು.

ಈ ದಯನೀಯ ಪರಿಸ್ಥಿತಿ ಬರಬಾರದಿತ್ತು: "ರಾಜ್ಯ ಬಿಜೆಪಿಗೆ ಈ ದಯನೀಯ ಪರಿಸ್ಥಿತಿ ಬರಬಾರದಿತ್ತು. ರಾಜ್ಯ ಬಿಜೆಪಿಯ ಯಾವುದೇ ಹಿರಿಯ ನಾಯಕ ಈಗಿನ ಪರಿಸ್ಥಿತಿ ಸರಿ ಮಾಡಲು ಆಗೋದಿಲ್ಲ. ವಿಧಾನಸಭೆಯಲ್ಲಿ ನಮ್ಮವರು ಎಷ್ಟೇ ಖಡಕ್‌ ಹೋರಾಟ ಮಾಡಿದರೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಿಜೆಪಿಯಲ್ಲಿ ಪ್ರತಿಷ್ಠೆ ಬದಿಗೊತ್ತಿ ಕೆಲಸ ಮಾಡುವ ನಾಯಕರು ಬರಬೇಕು. ಕೇಂದ್ರದ ಸಚಿವರಾಗಿರುವ ರಾಜ್ಯದ ನಾಯಕರೂ ಪಕ್ಷದ ಸಂಘಟನೆ ಬಗ್ಗೆ ಗಮನ ಹರಿಸಬೇಕು. ರಾಜ್ಯದಿಂದ ಕೇಂದ್ರ ಸಚಿವರು ಆಗಿರೋರು ಪಕ್ಷದ ವಿಚಾರಗಳತ್ತ ಗಮನ ಕೊಡಬೇಕು" ಎಂದು ಆಗ್ರಹಿಸಿದರು.

"ಮುಂದಿನ ಕೋರ್ ಕಮಿಟಿ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡ್ತೇವೆ.ನಂತರ ಹೈಕಮಾಂಡ್​ಗೆ ವರದಿ ಕಳಿಸುವ ಯೋಚನೆ ಇದೆ. ಉಪಚುನಾವಣಾ ಸೋಲಿಗೆ ಆಂತರಿಕ ಕಚ್ಚಾಟ ಕಾರಣ ಅಂತ ನಾನು ಒಪ್ಪಿಕೊಳ್ಳಲ್ಲ. ಈ‌ ಒಂದೂವರೆ ವರ್ಷದಲ್ಲಿ ನಾವು ಪವರ್ ಫುಲ್ ವಿಪಕ್ಷ ಅಂತ ನಾವು ಜನರಿಗೆ ತೋರಿಸಿಕೊಂಡಿಲ್ಲ. ಕಾಂಗ್ರೆಸ್ ನವ್ರು ಚಿನ್ನದ ಬಟ್ಟಲಿನಲ್ಲಿ ವಿಷಯಗಳನ್ನು ಇಟ್ಟು ಕೊಡ್ತಿದ್ರೂ ನಾವು ಅದನ್ನು ತಗೊಳ್ಳೋಕ್ಕಾಗ್ತಿಲ್ಲ" ಎಂದು ಕಿಡಿ ಕಾರಿದರು.

ರಾಜ್ಯಾಧ್ಯಕ್ಷರ ಬದಾಲಾವಣೆಗೆ ಯಾರೂ ಆಗ್ರಹಿಸಬಹುದು: "ರಾಜ್ಯಾಧ್ಯಕ್ಷರ ಬದಲಾವಣೆಗೆ ಆಗ್ರಹ ಯಾರು ಬೇಕಾದರೂ ಮಾಡಬಹುದು. ಆದರೆ ಏನು ಮಾಡಬೇಕು ಅಂತ ಹೈಕಮಾಂಡ್ ನವರು ತೀರ್ಮಾನ ಮಾಡ್ತಾರೆ. ವರಿಷ್ಠರು ಇದರ ಬಗ್ಗೆ ಆಲೋಚನೆ ಮಾಡ್ತಾರೆ‌. ನನಗೆ ಪಕ್ಷದ ಪರಿಸ್ಥಿತಿ ಸರಿಯಾಗಬೇಕು ಅಷ್ಟೇ. ಬಿಜೆಪಿಯಲ್ಲಿ ಆಂತರಿಕ ಜಗಳವೇ ಆಯ್ತು, ಇವರಿಂದ ಸರ್ಕಾರವನ್ನು ಏನು ಮಾಡೋಕೆ ಸಾಧ್ಯವಿಲ್ಲ ಎಂದು ಜನರು ಮಾತಾಡ್ತಿದ್ದಾರೆ. ಈಗೋ ಪ್ರಾಬ್ಲಮ್​ನಿಂದ ಬಿಜೆಪಿಗೆ ದೊಡ್ಡ ಹಾನಿಯಾಗ್ತಿದೆ. ಪಕ್ಷದಲ್ಲಿ ಆಗ್ತಿರುವ ಇಷ್ಟೆಲ್ಲ ರಾದ್ದಾಂತವನ್ನು ಸಹಿಸಿಕೊಳ್ಳೋಕೆ ಆಗಲ್ಲ. ಅದಕ್ಕಾಗಿ ಇನ್ನೊಮ್ಮೆ ನಾನು ದೆಹಲಿಗೆ ಹೋಗುವ ನಿರ್ಧಾರ ಮಾಡಿದ್ದೇನೆ. ಡಿಸೆಂಬರ್ 3 ರಂದು ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಇದರ ಬಗ್ಗೆ ಚರ್ಚಿಸಿ ಇದಕ್ಕೆಲ್ಲ ಬ್ರೇಕ್ ಹಾಕುವಂತೆ ಹೈಕಮಾಂಡ್​ಗೆ ಒತ್ತಾಯ ಮಾಡುತ್ತೇವೆ. ಕಾಂಗ್ರೆಸ್​ನವರು ಚಿನ್ನದ ಬಟ್ಟಲುಗಳಿಂದ ವಿಷಯಗಳನ್ನು ಕೊಡ್ತಿದ್ರು ಅದನ್ನು ನಮ್ಮವರು ಅದನ್ನು ಜನರ ಬಳಿ ತೆಗೆದುಕೊಂಡು ಹೋಗಲು ಆಗುತ್ತಿಲ್ಲ ಎಂದು ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶಿಸಲು ಮುಂದಾದ ಬಿಜೆಪಿ ನಿಷ್ಠರ ಬಣ: ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ

Last Updated : Nov 28, 2024, 5:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.