ETV Bharat / education-and-career

NEET: ಎರಡನೇ ಸುತ್ತಿನ ಕೌನ್ಸೆಲಿಂಗ್ ವೇಳೆ 8 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ - NEET UG 2024 - NEET UG 2024

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ - ಎನ್‌ಎಂಸಿ 8 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಿದೆ. ಇದರಿಂದಾಗಿ ಸುಮಾರು 600 ರಿಂದ 800 ವಿದ್ಯಾರ್ಥಿಗಳಿಗೆ ಸೀಟುಗಳು ಲಭ್ಯವಾಗಲಿವೆ. ಇದು ರ್‍ಯಾಂಕಿಂಗ್​​​ನ ಅಂಚಿನಲ್ಲಿರುವವರೆಗೆ ಇದರಿಂದ ಅನುಕೂಲವಾಗಲಿದೆ.

Permission for New medical collages
NEET: ಎರಡನೇ ಸುತ್ತಿನ ಕೌನ್ಸೆಲಿಂಗ್ ವೇಳೆ 8 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ (ETV Bharat)
author img

By ETV Bharat Karnataka Team

Published : Sep 12, 2024, 3:27 PM IST

ಕೋಟಾ: ನೀಟ್ ಯುಜಿ ಅಂಕಗಳ ಆಧಾರದ ಮೇಲೆ, ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ - ಎಂಸಿಸಿ ಅಖಿಲ ಭಾರತ 15 ಪ್ರತಿಶತ ಕೋಟಾದ ಅಡಿ ಕೌನ್ಸೆಲಿಂಗ್ ನಡೆಸುತ್ತಿದೆ. ಸದ್ಯ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಯುತ್ತಿದೆ. ಏತನ್ಮಧ್ಯೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ ಎನ್‌ಎಂಸಿ 8 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡಿದೆ. ಈ ಮೂಲಕ ಮೆಡಿಕಲ್​​​ ಕಾಲೇಜುಗಳನ್ನು ನಡೆಸಲು ಕೇಂದ್ರ ಹಸಿರು ನಿಶಾನೆ ತೋರಿಸಿದೆ.

ಇವುಗಳಲ್ಲಿ ಐದು ಕಾಲೇಜುಗಳು ಉತ್ತರ ಪ್ರದೇಶ ಮತ್ತು ಮೂರು ರಾಜಸ್ಥಾನ ರಾಜ್ಯದಲ್ಲಿ ಆರಂಭವಾಗಲಿವೆ. ಈ ಕಾಲೇಜುಗಳ ಸೀಟುಗಳನ್ನು ಮೊದಲ ಬಾರಿಗೆ ವೈದ್ಯಕೀಯ ಕೌನ್ಸೆಲಿಂಗ್‌ನಲ್ಲಿ ಸೇರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 600 ರಿಂದ 800 ಸೀಟುಗಳು ಹೆಚ್ಚಾಗಲಿವೆ. ಇದು ಮೆರಿಟ್​ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಇದನ್ನು ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ: ಸಿಂಘ್ವಿ ವಾದ - CM Siddaramaiah Plea Hearing

ಅಖಿಲ ಭಾರತದ ಶೇ.15ರ ಕೋಟಾದಡಿ ಸುಮಾರು 90 ರಿಂದ 120 ಸೀಟುಗಳು ಹೆಚ್ಚಾಗಲಿವೆ ಎಂದು ಕೋಟಾದ ಖಾಸಗಿ ಕೋಚಿಂಗ್ ಸಂಸ್ಥೆಯ ವೃತ್ತಿ ಕೌನ್ಸೆಲಿಂಗ್ ತಜ್ಞ ಪಾರಿಜಾತ್ ಮಿಶ್ರಾ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ 6,184 ಸರ್ಕಾರಿ ಸೀಟುಗಳಿದ್ದು, ಈಗ ಅದು 6,300 ಆಸುಪಾಸಿಗೆ ಹೆಚ್ಚಾಗಬಹುದು. ಇದರ ನಂತರವೇ, ಎಂಸಿಸಿ ಈ ಕಾಲೇಜುಗಳನ್ನು ಎರಡನೇ ಸುತ್ತಿನ ಕೋಟಾ ಕೌನ್ಸೆಲಿಂಗ್‌ನಲ್ಲಿ ಪರಿಗಣನೆಗೆ ಬರಲಿವೆ. ಇಲ್ಲಿ ಸೀಟುಗಳು ಲಭ್ಯವಾಗಲಿವೆ.

ಅನುಮತಿ ಪಡೆದ 8 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇವೆ

  • ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜು, ಕೌಶಂಬಿ, ಉತ್ತರ ಪ್ರದೇಶ
  • ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜು, ಔರೈಯಾ, ಉತ್ತರ ಪ್ರದೇಶ
  • ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜು, ಗೊಂಡಾ, ಉತ್ತರ ಪ್ರದೇಶ
  • ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜು, ಲಖಿಂಪುರ ಖೇರಿ, ಉತ್ತರ ಪ್ರದೇಶ
  • ಬಾಬಾ ಕೀನರಾಮ್ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜು, ಚಂದೌಲಿ, ಉತ್ತರ ಪ್ರದೇಶ
  • ಸರ್ಕಾರಿ ವೈದ್ಯಕೀಯ ಕಾಲೇಜು, ನಾಗೌರ್, ರಾಜಸ್ಥಾನ
  • ಸರ್ಕಾರಿ ವೈದ್ಯಕೀಯ ಕಾಲೇಜು, ಸವಾಯಿ ಮಾಧೋಪುರ್, ರಾಜಸ್ಥಾನ
  • ಸರ್ಕಾರಿ ವೈದ್ಯಕೀಯ ಕಾಲೇಜು, ಬನ್ಸ್ವಾರಾ, ರಾಜಸ್ಥಾನ

ಇದನ್ನು ಓದಿ: ಸೆ.28 ರಂದು ಪಿಎಸ್​ಐ ನೇಮಕಾತಿ ಪರೀಕ್ಷೆ ನಡೆಸಲು ನಿರ್ಧಾರ: ಡಾ. ಜಿ.ಪರಮೇಶ್ವರ್​ - PSI recruitment exam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.