ETV Bharat / education-and-career

ವಿಧಾನ ಪರಿಷತ್​​ ಸಚಿವಾಲಯದಲ್ಲಿ ಉದ್ಯೋಗ: ಅರ್ಜಿ ಸಲ್ಲಿಕೆಗೆ ಎರಡೇ ದಿನ ಬಾಕಿ - KPSC Recruitment - KPSC RECRUITMENT

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ ಮತ್ತು ಗೆಜೆಟೆಡ್​​ ಪ್ರೊಬೇಷನರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನುಳಿದಿರುವುದು ಎರಡೇ ದಿನ.

KPSC and Karnataka Legislative Group Recruitment last date for apply

author img

By ETV Bharat Karnataka Team

Published : Apr 2, 2024, 3:06 PM IST

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿರುವ 32 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನು ಮೂರು ದಿನ ಅವಕಾಶವಿದೆ. ಖಾಲಿ ಇರುವ ವಾಹನ ಚಾಲಕರು ಮತ್ತು ಗ್ರೂಪ್​ ಡಿ ಹುದ್ದೆಗಳಿಗೆ ಆಸಕ್ತರು ಏಪ್ರಿಲ್​ 5ರೊಳಗೆ ಅರ್ಜಿ ಸಲ್ಲಿಸಬೇಕಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ: ವಾಹನ ಚಾಲಕರು- 3, ಗ್ರೂಪ್​ ಡಿ- 29.

ವಿದ್ಯಾರ್ಹತೆ: ವಾಹನ ಚಾಲಕರ ಹುದ್ದೆಗೆ ಎಸ್​ಎಸ್​​ಎಲ್​ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಮೋಟಾರು ಕಾರು ಅಥವಾ ಭಾರೀ ವಾಹನ ಚಾಲನೆಯ ಅಧಿಕೃತ ಚಾಲನ ಪರವಾನಗಿ ಮತ್ತು ಮೂರು ವರ್ಷದ ಅನುಭವದ ಪ್ರಮಾಣ ಪತ್ರ ಹೊಂದಿರಬೇಕು. ಪ್ರಥಮ ಚಿಕಿತ್ಸೆಯ ಪ್ರಮಾಣ ಪತ್ರ ಇರಬೇಕು.

ಗ್ರೂಪ್​ ಡಿ: ಎಸ್​ಎಸ್​ಎಲ್​ಸಿ ಅಥವಾ ತತ್ಸಮಾನ ವಿದ್ಯಾರ್ಹತೆ

ವಯೋಮಿತಿ: ಕನಿಷ್ಠ 18, ಗರಿಷ್ಠ 35 ವರ್ಷ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ.

ವೇತನ: ವಾಹನ ಚಾಲಕ ಹುದ್ದೆ-21,400-42,000 ರೂ ಮಾಸಿಕ. ಗ್ರೂಪ್​ ಡಿ 17,000-28,950 ರೂ ಮಾಸಿಕ.

ಅರ್ಜಿ ಸಲ್ಲಿಕೆ: ಸರ್ಕಾರಿ ಪುಸ್ತಕ ಮಳಿಗೆಯಿಂದ ನಮೂನೆ -1ರ ದ್ವಿಪ್ರತಿ ಪಡೆದು, ಅಗತ್ಯ ದಾಖಲೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಖುದ್ದು ತಲುಪಿಸಬಹುದು.

ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ 5079. ಮೊದಲನೇ ಮಹಡಿ, ವಿಧಾನಸೌಧ, ಬೆಂಗಳೂರು- 560001.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 600, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ, ಪ.ಜಾ, ಪ.ಪಂ, ಪ್ರವರ್ಗ 1 ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅಭ್ಯರ್ಥಿಗಳನ್ನು ಚಾಲನಾ ಸಾಮರ್ಥ್ಯ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಕುರಿತ ಅಧಿಕೃತ ಅಧಿಸೂಚನೆಗೆ kla.kar.nic.in ಭೇಟಿ ನೀಡಿ.

384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳು: ಕೆಪಿಎಸ್​ಸಿಯಿಂದ ಅಧಿಸೂಚನೆ ಹೊರಡಿಸಲಾದ ​ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ವೃಂದದ 159 ಹುದ್ದೆಗಳು ಮತ್ತು ಗ್ರೂಪ್ ಬಿ ವೃಂದದ 225 ಹುದ್ದೆಗಳು ಸೇರಿ ಒಟ್ಟು 384 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಕಡೆಯ ದಿನ ಏಪ್ರಿಲ್​ 4.

ವಯೋಮಿತಿ: ಕನಿಷ್ಠ 21 ವರ್ಷ. ಸಾಮಾನ್ಯ ವರ್ಗದವರಿಗೆ ಗರಿಷ್ಠ 38 ವರ್ಷ. ಹಿಂದುಳಿದ ವರ್ಗದವರಿಗೆ ಗರಿಷ್ಠ 41 ವರ್ಷ. ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ.

ವಿದ್ಯಾರ್ಹತೆ: ಯಾವುದೇ ಪದವಿ.

ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ, ಇತರೆ ಹಿಂದುಳಿದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 300 ರೂ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್ 35 ರೂ ಪಾವತಿಸಬೇಕು.

ಇದನ್ನೂ ಓದಿ: ದೇಶಾದ್ಯಂತ ನೇಮಕಾತಿಯಲ್ಲಿ ಶೇ 3ರಷ್ಟು ಹೆಚ್ಚಳ; ವೈಟ್​​-ಕಾಲರ್​ ಗಿಗ್​​ ಉದ್ಯೋಗದಲ್ಲಿ 184ರಷ್ಟು ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.