ETV Bharat / education-and-career

ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ 74 ಹುದ್ದೆಗಳಿಗೆ ನೇಮಕಾತಿ; ಇಲ್ಲಿದೆ ಸಂಪೂರ್ಣ ಮಾಹಿತಿ - KEA Detailed notification - KEA DETAILED NOTIFICATION

ಐಟಿಐ, ಡಿಪ್ಲೊಮಾ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ.

KEA Detailed notification for GTTC Recruitment for 74 post

author img

By ETV Bharat Karnataka Team

Published : Apr 5, 2024, 10:37 AM IST

ಬೆಂಗಳೂರು: ಕಳೆದ ತಿಂಗಳು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಸೂಚನೆ ಪ್ರಕಟಿಸಿತ್ತು. ಇದೀಗ ಈ ಹುದ್ದೆಗಳ ವರ್ಗೀಕರಣ, ವಿದ್ಯಾರ್ಹತೆ, ವೇತನ, ಅರ್ಜಿ ಸಲ್ಲಿಕೆ ಸೇರಿದಂತೆ ಸಂಪೂರ್ಣ ವಿವರಗಳನ್ನೊಳಗೊಂಡ ವಿವರವಾದ ಅಧಿಸೂಚನೆ ಪ್ರಕಟಿಸಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ: ಜಿಟಿಟಿಸಿಯಲ್ಲಿ ಒಟ್ಟು 74 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅದರ ವಿವರಗಳು ಇಂತಿದೆ.

  • ಲೆಕ್ಚರರ್ (ಎಂಜಿನಿಯರಿಂಗ್) - 18
  • ಇಂಜಿನಿಯರ್ - 2
  • ಅಧಿಕಾರಿ ದರ್ಜೆ ಗ್ರೇಡ್​ 2 - 2
  • ಫೋರ್‌ಮನ್ ಗ್ರೇಡ್ 2 - 4
  • ಇನ್ಸ್​​ಪೆಕ್ಟರ್​​ ಗ್ರೇಡ್​​ -1 - 4
  • ತಂತ್ರಜ್ಞ ಗ್ರೇಡ್-II
  • ಟೆಕ್ನಿಷಿಯನ್​ ಗ್ರೇಡ್​ -1 - 7
  • ಟೆಕ್ನಿಷಿಯನ್​ ಗ್ರೇಡ್​ -2 - 7
  • ಇನ್ಸ್​​ಪೆಕ್ಟರ್​​ ಗ್ರೇಡ್​​ 2 - 5
  • ಟೆಕ್ನಿಷಿಯನ್​ ಗ್ರೇಡ್​ 3 - 15
  • ಟೆಕ್ನಿಷಿಯನ್​ ಗ್ರೇಡ್​​ 4- 4
  • ಅಸಿಸ್ಟೆಂಟ್​ ಗ್ರೇಡ್​ - 2

ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದಂತೆ ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಪದವಿಯನ್ನು ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಗರಿಷ್ಠ ವಯೋಮಿತಿ 27 ವರ್ಷ. ಪ.ಜಾ, ಪ.ಪಂ ಮತ್ತು ಪ್ರವರ್ಗ1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ವಿಶೇಷ ಚೇತನ ಅಭ್ಯರ್ಥಿಗಳಿಗೆ 250 ರೂ, ಪ.ಜಾ, ಪ.ಪಂ ಮತ್ತು ಪ್ರವರ್ಗ 1, ನಿವೃತ್ತ ಸೇವಾನೌಕರರಿಗೆ 500 ರೂ ಮತ್ತು ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 750 ರೂ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅಭ್ಯರ್ಥಿಗಳು ಏಪ್ರಿಲ್​ 19 ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 18 ಆಗಿದೆ. ಅರ್ಜಿ ಶುಲ್ಕ ಪಾವತಿಗೆ ಅಂತಿಮ ದಿನ ಮೇ 19 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kae.kar.nic.in ಇಲ್ಲಿಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಬಿಡಿಎಯಲ್ಲಿ ಉದ್ಯೋಗಾವಕಾಶ: ಎಫ್​ಡಿಎ, ಎಸ್​ಡಿಎ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.