ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ)ಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 170 ಹುದ್ದೆಗಳ ಭರ್ತಿಗೆ ಪದವೀಧರರಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
![ಅಧಿಸೂಚನೆ](https://etvbharatimages.akamaized.net/etvbharat/prod-images/25-01-2024/ncrte_2501newsroom_1706173348_84.jpg)
ಹುದ್ದೆಗಳ ವಿವರ: ಎನ್ಸಿಆರ್ಟಿಯಿಂದ ಅರ್ಜಿ ಆಹ್ವಾನಿಸಲಾದ ಹುದ್ದೆಗಳ ಮಾಹಿತಿ ಹೀಗಿದೆ.
- ಸಹಾಯಕ ಸಂಪಾದಕರು: 60
- ಪ್ರೂಫ್ ರೀಡರ್ : 60
- ಡಿಟಿಪಿ ಆಪರೇಟರ್ : 50
ವಿದ್ಯಾರ್ಹತೆ: ಅಭ್ಯರ್ಥಿಗಳು ಪದವಿಯನ್ನು ಹೊಂದಿರಬೇಕು. ಅಭ್ಯರ್ಥಿಗಳು ಎಡಿಟಿಂಗ್, ಪ್ರೂಫ್ ರೀಡಿಂಗ್ ಅನುಭವವನ್ನು ಹೊಂದಿರಬೇಕು. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಹಿಡಿತವನ್ನು ಹೊಂದಿರಬೇಕು. ಪುಸ್ತಕ ಪ್ರಕಟಣೆ ತಂತ್ರ, ಪ್ರಕಟಣೆಯ ಆಧುನಿಕ ಪ್ರಕ್ರಿಯೆ, ಸೇರಿದಂತೆ ಇತರೆ ಕೌಶಲ್ಯವನ್ನು ಹೊಂದಿರಬೇಕು.
ಹುದ್ದೆ ಅವಧಿ: ಈ ಹುದ್ದೆಗಳ ಅವಧಿ ಕೇವಲ ನಾಲ್ಕು ತಿಂಗಳಾಗಿದ್ದು, ಒಂದು ವರ್ಷದವರೆಗೆ ಹುದ್ದೆ ವಿಸ್ತರಣೆ ನಡೆಯಲಿದೆ
ವೇತನ
- ಸಹಾಯಕ ಸಂಪಾದಕರು: 80 ಸಾವಿರ ರೂ.
- ಪ್ರೂಫ್ ರೀಡರ್ : 37 ಸಾವಿರ ರೂ.
- ಡಿಟಿಪಿ ಆಪರೇಟರ್ : 50 ಸಾವಿರ ರೂ.
ವಯೋಮಿತಿ : ಸಹಾಯಕ ಸಂಪಾದಕರ ಹುದ್ದೆಗೆ ಗರಿಷ್ಠ- 50 ವರ್ಷ, ಪ್ರೂಫ್ ರೀಡರ್ ಹುದ್ದೆಗೆ ಗರಿಷ್ಠ 42 ವರ್ಷ, ಡಿಟಿಪಿ ಆಪರೇಟರ್ ಹುದ್ದೆಗೆ 45 ವರ್ಷ ವಯೋಮಿತಿ ನಿಗದಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ನೇಮಕಾತಿ: ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಫೆಬ್ರವರಿ 1 ಮತ್ತು 3ನೇ ತಾರೀಖು ಕೆಳಗಿನ ವಿಳಾಸದಲ್ಲಿ ವಾಕ್ ಇನ್ ಇಂಟರ್ವ್ಯೂ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಸಿವಿ ಜೊತೆಗೆ ಶೈಕ್ಷಣಿಕ ಸೇರಿದಂತೆ ಅಗತ್ಯ ದಾಖಲೆ ಪ್ರಮಾಣಪತ್ರದೊಂದಿಗೆ ಹಾಜರಾಗತಕ್ಕದ್ದು.
ನೇರ ಸಂದರ್ಶನದ ಸ್ಥಳ: ಪಬ್ಲಿಕೇಷನ್ ಡಿವಿಷನ್, ಎನ್ಸಿಆರ್ಟಿ, ಶ್ರೀ ಅರೊಬಿಂದೋ ಮಾರ್ಗ, ನವದೆಹಲಿ- 110016
ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ncert.nic.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಬೀದರ್ನಲ್ಲಿ ಅಂಗನಾಡಿ ಹುದ್ದೆ:
ಬೀದರ್‌ನಲ್ಲೂ ಅಂಗನವಾಡಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 96 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. 31 ಅಂಗನವಾಡಿ ಕಾರ್ಯಕರ್ತರು ಮತ್ತು 65 ಅಂಗನವಾಡಿ ಸಹಾಯಕರ ಹುದ್ದೆಗೆ ನೇಮಕಾತಿ ನಡೆಯಲಿದೆ. ಜನವರಿ 10ರಿಂದ ಫೆಬ್ರವರಿ 5ರವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಗ್ರಾಮಾಂತರ ಪ್ರದೇಶ ಮತ್ತು ನಗರ ಪ್ರದೇಶದಲ್ಲಿ ವಾಸ್ತವ್ಯ ಹೊಂದಿದ್ದು, ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಬೇಕು. ಕನ್ನಡ ಓದುವ, ಬರೆಯುವ ಜ್ಞಾನ ಇರಬೇಕು.
ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು karnemakaone.kar.nic.in/abcd/ApplicationForm_JA_org.aspx ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: ರಕ್ಷಣಾ ಇಲಾಖೆಯಲ್ಲಿ ನೇಮಕಾತಿ; ಎಸ್ಎಸ್ಎಲ್ಸಿ ಪಾಸಾದವರಿಗೆ ಅವಕಾಶ