ನವದೆಹಲಿ: ಭಾರತದ ಉತ್ಪಾದನಾ ವಲಯದಲ್ಲಿ ಆಗತಾನೇ ಹೊರ ಬಂದ ಪದವೀಧರರ (ಫ್ರೆಶ್ ಗ್ರಾಜುಯೇಟ್) ನೇಮಕಾತಿಯಲ್ಲಿ ಏರಿಕೆ ಕಂಡಿದೆ. ವರ್ಷದ ಮೊದಲಾರ್ಧದಲ್ಲೇ ಶೇ 48ರಷ್ಟು ನೇಮಕಾತಿ ನಡೆಸಲಾಗಿದ್ದು, ಕಳೆದ 2023ರ ಜುಲೈನಿಂದ ಡಿಸೆಂಬರ್ ಅವಧಿಗೆ ಹೋಲಿಕೆ ಮಾಡಿದಾಗ ಶೇ 7ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಟೀಮ್ಲೀಸ್ ಎಡ್ಟೆಕ್ ಪ್ರಕಾರ, ಈ ನೇಮಕಾತಿ ಏರಿಕೆಯು ಬಂಡವಾಳ ಹೂಡಿಕೆಗಳು ಮತ್ತು ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್ ಮತ್ತು ಟೆಕ್ಸ್ಟೈಲ್ಸ್ ಡೊಮೇನ್‌ಗಳಲ್ಲಿ ಹೆಚ್ಚಾಗಿ ಕಂಡು ಬಂದಿದೆಯಂತೆ. ಬಂಡವಾಳ ಹರಿವಿನ ಜೊತೆಗೆ ತಾಂತ್ರಿಕ ಪ್ರಗತಿ, ಉತ್ಪಾದನಾ ಪ್ರಕ್ರಿಯೆಗಳನ್ನು ಮರು ರೂಪಿಸುತ್ತಿರುವ ಹಿನ್ನೆಲೆಯ ಕ್ಷೇತ್ರಗಳಲ್ಲಿ ವೇಗದ ಬೆಳವಣಿಗೆ ಕಾಣಿಸುತ್ತಿದೆ. ಜತೆಗೆ ಭಾರತದ ಕೈಗಾರಿಕಾ ಪುನರುತ್ಥಾನಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಯುವ ಪ್ರತಿಭೆಗಳಿಗೆ ಉತ್ತೇಜಕ ಅವಕಾಶವನ್ನು ಒದಗಿಸಲಾಗುತ್ತಿದೆ ಎಂದು ಟೀಮ್ಲೀಸ್ ಎಡ್ಟೆಕ್ನ ಸಂಸ್ಥಾಪಕ ಮತ್ತು ಸಿಇಒ ಶಂತನು ರೂಜ್ ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ ಭಾರತದ 18 ವಿವಿಧ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಸ್ತರದ 377 ಕಂಪನಿಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ವೇಳೆ ಸಂಸ್ಥೆಗಳಲ್ಲಿ ಉತ್ಪನ್ನ ವಿನ್ಯಾಸಕರು, ಯಾಂತ್ರೀಕೃತಗೊಂಡ ಎಂಜಿನಿಯರ್‌ಗಳು, ಎಂಬೆಡೆಡ್ ಎಂಜಿನಿಯರ್‌ಗಳು, ಮೆಕ್ಯಾನಿಕಲ್ ಎಂಜಿನಿಯರ್‌ಗಳು ಮತ್ತು ಗುಣಮಟ್ಟದ ಭರವಸೆ ಸಹಾಯಕರಿಗೆ ಹೆಚ್ಚಿನ ಬೇಡಿಕೆ ಇರುವುದು ಕಂಡು ಬಂದಿದೆ.
ವರದಿ ಪ್ರಕಾರ, ಬೆಂಗಳೂರು ಆಟೋಮೇಷನ್ ಇಂಜಿನಿಯರ್‌ಗಳಿಗೆ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದೆ. ಈ ಕ್ಷೇತ್ರದಲ್ಲಿ ವೃತ್ತಿಪರರಿಗೆ ಶೇಕಡಾ 61 ರಷ್ಟು ಬೇಡಿಕೆಯಿದೆ. ಚೆನ್ನೈನಲ್ಲಿ ಎಂಬೆಡೆಡ್ ಇಂಜಿನಿಯರ್‌ಗಳಿಗೆ ಬೇಡಿಕೆ ಇದೆ. ಇನ್ನು ಶೇ 56ರಷ್ಟು ಕಂಪನಿಗಳು ಡೊಮೇನ್ ನಲ್ಲಿ ಪ್ರತಿಭಾವಂತರಿಗೆ ಹುಡುಕಾಟ ನಡೆಸಿದೆ. ಗುರುಗ್ರಾಮ ಮತ್ತು ಹೈದರಾಬಾದ್ನಲ್ಲಿ ಮೆಕಾನಿಕಲ್ ಇಂಜಿನಿಯರ್‌ಗಳಿಗೆ ಆದ್ಯತೆ ಹೆಚ್ಚಿದೆ.
ಈ ಬೇಡಿಕೆಗಳು ಮಟ್ರೋಪಾಲಿಟನ್ ಪ್ರದೇಶಗಳಿಗೆ ಮೀರಿ ವಿಸ್ತರಣೆ ಕಾಣುತ್ತಿದೆ. ಚಂಡೀಗಢ ಮತ್ತು ನಾಗ್ಪುರದಂತಹ ನಗರಗಳಲ್ಲಿ ಕೂಡ ಗಮನಾರ್ಹ ರೀತಿಯ ಬೇಡಿಕೆ ಕಂಡು ಕೊಂಡಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಚಂಡೀಗಢ ಮತ್ತು ನಾಗ್ಪುರದಂತಹ ಸಣ್ಣ ನಗರಗಳಲ್ಲಿ ವಲಯವಾರು ಬೇಡಿಕೆ ಹೆಚ್ಚಿದೆ, ಇದು ಉದ್ಯೋಗಾಕಾಂಕ್ಷಿಗಳಿಗೆ ಸಾಂಪ್ರದಾಯಿಕ ಟೈರ್ 1 ಸಿಟಿ ಹೊರತಾಗಿ ಉದ್ಯೋಗ ಸೃಷ್ಟಿ ಅವಕಾಶ ನೀಡುತ್ತಿದೆ ಎಂದು ಟೀಮ್ಲೀಸ್ ಎಡ್ಟೆಜ್ನ ಸಿಒಒ ಜೈದೀಪ್ ಕೇವಲರಮಣಿ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಜನವರಿಯಲ್ಲಿ ದೇಶದ ಖನಿಜ ಉತ್ಪಾದನೆ ಶೇ 6ರಷ್ಟು ಏರಿಕೆ