ಜೋಧ್ಪುರ್: ಜೋಧ್ಪುರದ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ (IIT) ಮುಂಬರುವ ಶೈಕ್ಷಣಿಕ ವರ್ಷದಿಂದ ಬಿ.ಟೆಕ್ ಪ್ರಥಮ ವರ್ಷದ ವಿದ್ಯಾರ್ಥಿಗಳು ಇಂಗ್ಲಿಷ್ ಜೊತೆಗೆ ಹಿಂದಿ ಭಾಷೆಯಲ್ಲಿ ಕಲಿಯಲು ಅವಕಾಶ ನೀಡಿದೆ. ಈ ಕುರಿತ ಪ್ರಸ್ತಾವನೆಯನ್ನು ಸೆನೆಟ್ನ 38ನೇ ಸಭೆಯಲ್ಲಿ ಮಂಡಿಸಲಾಗಿತ್ತು. ಈ ಪ್ರಸ್ತಾವನೆಗೆ ಮಂಡಳಿ ಸದಸ್ಯರು ಜೂನ್ 28ಕ್ಕೆ ಸಮ್ಮತಿ ಸೂಚಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಅನುಗುಣವಾಗಿ ತರಗತಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿರ್ದೇಶಕ ಪ್ರೊ.ಅವಿನಾಶ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಇದೀಗ ಮೊದಲ ವರ್ಷದ ವಿದ್ಯಾರ್ಥಿಗಳು ಹಿಂದಿ ಮತ್ತು ಇಂಗ್ಲಿಷ್ನಲ್ಲೂ ಕಲಿಯುವ ಅವಕಾಶ ಪಡೆಯಲಿದ್ದಾರೆ. ಇದರಿಂದ ಅವರಿಗೆ ವಿಷಯವನ್ನು ತಮ್ಮ ಭಾಷೆಯಲ್ಲಿಯೇ ಸುಲಭ ಮತ್ತು ಆಳವಾಗಿ ಕಲಿಯುವ ಅವಕಾಶ ಸಿಗುತ್ತದೆ ಎಂದಿದ್ದಾರೆ.
ಈ ಕಲಿಕೆಗಾಗಿ ತರಗತಿಯನ್ನು ಎರಡು ವಿಭಾಗಗಳನ್ನು ಮಾಡಲಾಗಿದೆ. ಒಂದು ಇಂಗ್ಲಿಷ್ ಮತ್ತೊಂದು ಹಿಂದಿ. ಎರಡು ವಿಭಾಗಗಳಿಗೂ ಅದೇ ವಿಷಯವನ್ನು ಶಿಕ್ಷಕರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಕಲಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಗೆ ಅನುಗುಣವಾಗಿ ವಿಭಾಗದ ಆಯ್ಕೆಗೆ ಅವಕಾಶ ನೀಡಲಾಗಿದೆ. ಅಲ್ಲದೇ, ಅವಶ್ಯಕತೆ ಇದಲ್ಲಿ ಸೆಷನ್ ಮಧ್ಯೆ ಅವರು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಬದಲಾವಣೆ ಕೂಡ ಮಾಡಬಹುದು.
The Ministry of Education is pleased to share that @iitjodhpur will now offer B. Tech 1st year courses in both Hindi and English, beginning this academic year! This initiative is designed to ensure all students can learn effectively in the language they are most comfortable with.… pic.twitter.com/bF8FpuR7Hg
— Ministry of Education (@EduMinOfIndia) July 9, 2024
ಇದು ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುತ್ತದೆ. ಇಂಗ್ಲಿಷ್ನಲ್ಲಿ ಕಲಿಕೆಯ ಸವಾಲು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಅಲ್ಲದೇ, ಅವರು ತಮ್ಮ ಭಾಷೆಗೆ ಅನುಗುಣವಾಗಿ ಉಪನ್ಯಾಸವನ್ನು ಆಯ್ಕೆ ಮಾಡಬಹುದು. ಶೈಕ್ಷಣಿಕ ಪರಿಸರಕ್ಕೆ ಅನುಗುಣವಾಗಿ ಸರಾಗವಾಗಿ ವಿದ್ಯಾರ್ಥಿಗಳು ಇದನ್ನು ಅಳವಡಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕಲಿಕೆಯ ಸಂದರ್ಭದಲ್ಲಿ ಕೆಲವು ತಾಂತ್ರಿಕ ಶಬ್ಧಗಳನ್ನು ಇಂಗ್ಲಿಷ್ನಲ್ಲಿ ಇರಲಿದ್ದು, ಇವುಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ವಿವರಿಸುವ ಪ್ರಯತ್ನ ನಡೆಸಲಾಗುವುದು. ಜೊತೆಗೆ ಅವರಿಗೆ ಹಿಂದಿಯಲ್ಲಿಯೇ ಅಧ್ಯಯನ ಸಾಮಾಗ್ರಿ ಒದಗಿಸುವ ಕಾರ್ಯ ಕೂಡ ನಡೆಯಲಿದೆ. ಎನ್ಇಪಿನ ಉದ್ದೇಶದಂತೆ ಉತ್ತಮ ಬೋಧನೆ ಮತ್ತು ಕಲಿಕೆ ಉದ್ದೇಶದಿಂದ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.
ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಪರೀಕ್ಷೆಯಲ್ಲಿ ಅರ್ಹತಾ ಕೌನ್ಸಿಲಿಂಗ್ ಅಭ್ಯರ್ಥಿಗಳಿಗೆ ಐಐಟಿ ದಾಖಲಾತಿ ನಡೆಸಲಾಗುವುದು. ಐಐಟಿ ಜೋಧ್ಪುರ್ ವಿದ್ಯಾರ್ಥಿಗಳು ಇದೀಗ ತಮ್ಮ ಕಲಿಕೆಗೆ ಸಹಾಯಕವಾಗುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಬಿಹಾರ: ಹಿಂದಿಯಲ್ಲೂ ಎಂಬಿಬಿಎಸ್ ಪದವಿ ನೀಡಲು ನಿರ್ಧಾರ