ETV Bharat / education-and-career

ಡಿಪ್ಲೊಮಾ ಆದವರಿಗೆ HALನಲ್ಲಿದೆ ಉದ್ಯೋಗಾವಕಾಶ; 51 ಹುದ್ದೆಗಳಿಗೆ ನೇಮಕಾತಿ - HAL Recruitment

ಈ ಹುದ್ದೆಗೆ ಜೂನ್​ 12ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜೂನ್​ 26 ಕಡೇಯ ದಿನ.

author img

By ETV Bharat Karnataka Team

Published : Jun 14, 2024, 6:40 PM IST

Updated : Jun 14, 2024, 9:42 PM IST

HAL Recruitment Notification For Diploma technician and operators
HAL (ಸಂಗ್ರಹ ಚಿತ್ರ)

ಬೆಂಗಳೂರು: ಇಲ್ಲಿನ ಹಿಂದೂಸ್ತಾನ್​ ಏರೋನಾಟಿಕಲ್ ಲಿಮಿಡೆಟ್​ನಲ್ಲಿ(ಹೆಚ್‌ಎಎಲ್‌) ಖಾಲಿ ಇರುವ ಡಿಪ್ಲೊಮಾ ಟೆಕ್ನಿಷಿಯನ್​ ಮತ್ತು ಆಪರೇಟರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ನಾಲ್ಕು ವರ್ಷದ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ: ಎಚ್​ಎಎಲ್​ನಲ್ಲಿರುವ ಒಟ್ಟು 51 ಹುದ್ದೆಗಳ ಭರ್ತಿಗೆ ಕ್ರಮ

  • ಡಿಪ್ಲೊಮೊ ಟೆಕ್ನಿಷಿಯನ್​- 47
  • ಆಪರೇಟರ್ಸ್​ - 3
  • ಅಸಿಸ್ಟಂಟ್​ - 1

ವಿದ್ಯಾರ್ಹತೆ: ಅಭ್ಯರ್ಥಿಗಳು ಡಿಪ್ಲೊಮಾ ಪದವಿ ಪೂರ್ಣಗೊಳಿಸಿರಬೇಕು. ಆಪರೇಟರ್​ ಹುದ್ದೆಗೆ ಐಟಿಐ ಪದವಿ ಹೊಂದಿರಬೇಕು. ಅಸಿಸ್ಟಂಟ್​ ಹುದ್ದೆಗೆ ಬಿಎ, ಬಿಎಸ್ಸಿ ಅಥವಾ ಬಿ.ಕಾಂ ಪದವಿ ಹೊಂದಿರಬೇಕು.

ವೇತನ: ಡಿಪ್ಲೊಮೊ ಟೆಕ್ನಿಷಿಯನ್​ ಗಳಿಗೆ 48,511 ರೂ ಹಾಗೂ ಆಪರೇಟರ್ಸ್​, ಅಸಿಸ್ಟಂಟ್​ಗಳಿಗೆ ಮಾಸಿಕ 46,554 ರೂ ನಿಗದಿಸಲಾಗಿದೆ.

ವಯೋಮಿತಿ: ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 28. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

HAL Recruitment Notification For Diploma technician and operators
ಅಧಿಸೂಚನೆ (ಎಚ್​ಎಎಲ್​)

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಜೂನ್​ 12 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಜೂನ್​ 26.

ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು hal-india.co.in ಭೇಟಿ ನೀಡಿ.

ರಾಷ್ಟ್ರೀಯ ರಸಗೊಬ್ಬರ ಇಲಾಖೆ (ಎನ್​ಎಫ್​ಎಲ್​)ನಲ್ಲಿದೆ ಉದ್ಯೋಗವಕಾಶ: ಕೇಂದ್ರ ಸರ್ಕಾರದ ರಸಗೊಬ್ಬರ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ರಸಗೊಬ್ಬರ ಇಲಾಖೆಯಲ್ಲಿ ಖಾಲಿ ಇರುವ ಇಂಜಿನಿಯರ್​, ಹಿರಿಯ ರಾಸಾಯನಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 97 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಬಿಎಸ್ಸಿ, ಇಂಜಿನಿಯರಿಂಗ್​ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 30 ಆಗಿದ್ದು, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 700 ರೂ. ಅರ್ಜಿ ಶುಲ್ಕ ವಿಧಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಜೂನ್​ 11ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜುಲೈ 1 ಆಗಿದೆ. ಈ ಕುರಿತು ಅಧಿಕೃತ ಅಧಿಸೂಚನೆಗೆ nationalfertilizers.com ಭೇಟಿ ನೀಡಿ.

ಇದನ್ನೂ ಓದಿ: ಪಿಯುಸಿ ಪಾಸಾಗಿದ್ರೆ ಭಾರತೀಯ ಕೋಸ್ಟ್​ ಗಾರ್ಡ್​​ನಲ್ಲಿದೆ ಉದ್ಯೋಗ

Last Updated : Jun 14, 2024, 9:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.