ETV Bharat / education-and-career

10ನೇ ತರಗತಿ ಪಾಸ್​ ಆಗಿದ್ರೆ ಬಿಇಎಂಎಲ್​ನಲ್ಲಿದೆ ಡ್ರೈವರ್​ ಕೆಲಸ; ಇಲ್ಲಿದೆ ಹುದ್ದೆ ಮಾಹಿತಿ - JOBS IN BEML - JOBS IN BEML

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು 2 ವರ್ಷದ ಗುತ್ತಿಗೆ ಅವಧಿಗೆ ನೇಮಕಾತಿ ನಡೆಸಲಾಗುವುದು.

Driver job Recruitment notification By Bharat Earth mover limited
ಬಿಇಎಂಎಲ್​ನಲ್ಲಿದೆ ಡ್ರೈವರ್​ ಕೆಲಸ (ETV Bharat)
author img

By ETV Bharat Karnataka Team

Published : May 20, 2024, 1:32 PM IST

ಬೆಂಗಳೂರು : ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್​ ಅರ್ಥ್​​ ಮೂವರ್​​ ಲಿಮಿಟೆಡ್‌ನಲ್ಲಿ​ (ಬಿಇಎಂಎಲ್​)ನಲ್ಲಿ ಖಾಲಿ ಇರುವ ಸಿಬ್ಬಂದಿ ಚಾಲಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ಪಾಸ್​ ಆಗಿರುವ, ಚಾಲಕ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗಳ ನೇಮಕಾತಿ ಸ್ಥಳ ಬೆಂಗಳೂರು ಮಾತ್ರ ಆಗಿದೆ.

ಹುದ್ದೆ ಅಧಿಸೂಚನೆ
ಹುದ್ದೆ ಅಧಿಸೂಚನೆ (ಬಿಇಎಂಎಲ್​ ವೆಬ್​ಸೈಟ್​)

ಹುದ್ದೆ ವಿವರ: ಬಿಇಎಂಎಲ್​ನಲ್ಲಿ ಖಾಲಿ ಇರುವ 4 ಡ್ರೈವರ್​ ಹುದ್ದೆಗಳ ಭರ್ತಿ

ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್​​ಎಸ್​ಎಲ್​ಸಿ ವಿದ್ಯಾರ್ಹತೆ ಪಡೆದಿರಬೇಕು

ಅಭ್ಯರ್ಥಿಗಳು ಲಘು ವಾಹನ ಚಾಲನೆಯಲ್ಲಿ 10 ವರ್ಷಗಳ ಅನುಭವ ಹೊಂದಿರಬೇಕು. ಜೊತೆಗೆ ಸಣ್ಣ ಮೋಟಾರ್​ ಮೆಕಾನಿಕ್​ ಕೆಲಸದ ಬಗ್ಗೆ ತಿಳಿದಿದ್ದು, ಡ್ರೈವಿಂಗ್​ ಲೈಸೆನ್ಸ್​ ಹೊಂದಿರಬೇಕು.

ವೇತನ: ಈ ಹುದ್ದೆಗೆ ಮಾಸಿಕ 23,500 ರೂ. ವೇತನ ನಿಗದಿಸಲಾಗಿದೆ.

ವಯೋಮಿತಿ: ಅಭ್ಯರ್ಥಿಗಳ ವಯೋಮಿತಿ 45 ವರ್ಷ ಮೀರಿರಬಾರದು.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು 2 ವರ್ಷದ ಗುತ್ತಿಗೆ ಅವಧಿಗೆ ನೇಮಕಾತಿ ನಡೆಸಲಾಗುವುದು. ಎರಡು ವರ್ಷದ ಬಳಿಕ ಬಿಇಎಂಎಲ್​ ವಾಣಿಕ್ಯ ಅವಶ್ಯಕತೆ ಇದ್ದಲ್ಲಿ ಬಿ ವೇತನ ಗುಂಪಿನ ಅನುಸಾರ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸಾಮಾನ್ಯ, ಒಬಿಸಿ, ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಈ ವಿಳಾಸಕ್ಕೆ ಕಳುಹಿಸಬೇಕಿದೆ.

ಸೀನಿಯರ್​​ ಮ್ಯಾನೇಜರ್​ (ಕಾರ್ಪೊರೇಟ್​ ನೇಮಕಾತಿ), ನೇಮಕಾತಿ ಘಟಕ, ಬಿಇಎಂಎಲ್​ ಸೌಧ, ನಂ 23/1. 4ನೇ ಮುಖ್ಯ ರಸ್ತೆ, ಎಸ್​ಆರ್​ ನಗರ್​, ಬೆಂಗಳೂರು- 560027.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಮೇ 15ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಜೂನ್​ 5 ಆಗಿದೆ,

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ bemlindia.in ಭೇಟಿ ನೀಡಿ

ಇದನ್ನೂ ಓದಿ: BEMLನಲ್ಲಿ ಅಸಿಸ್ಟೆಂಟ್​ ಮ್ಯಾನೇಜರ್​ ಹುದ್ದೆಗೆ ನೇಮಕಾತಿ; ಇಲ್ಲಿದೆ ಸಂಪೂರ್ಣ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.