ಹೈದರಾಬಾದ್: ಇಂದು ಡ್ರೋನ್ಗಳನ್ನು ಹಲವು ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತಿದೆ. ಕೃಷಿ, ತಂತ್ರಜ್ಞಾನ, ಭದ್ರತೆ, ಫೋಟೋಗ್ರಫಿಯಲ್ಲಿ ಡ್ರೋನ್ಗಳ ಬಳಕೆ ಹೆಚ್ಚುತ್ತಿದೆ. ಇದರಿಂದ ಡ್ರೋನ್ ಹಾರಿಸುವ ಕೌಶಲ್ಯ ಹೊಂದಿರುವವರಿಗೆ ಬೇಡಿಕೆ ಹೆಚ್ಚುತ್ತಿದ್ದು, ಉದ್ಯೋಗ ಸೃಷ್ಟಿಯಾಗುತ್ತಿದೆ. ಇದರ ಕೌಶಲ್ಯ ಕಲಿಯಲು ಲಕ್ಷಾಂತರ ರೂ ವ್ಯಯ ಆಗುತ್ತಿದೆ. ಇದನ್ನು ಅರಿತ ದೆಹಲಿ ಯುನಿವರ್ಸಿಟಿ ಇದೀಗ ಕೇವಲ 10 ಸಾವಿರ ರೂನಲ್ಲಿ ವಿದ್ಯಾರ್ಥಿಗಳಿಗೆ ಡ್ರೋನ್ ಹಾರಾಟ ಕೌಶಲ್ಯ ಕಲಿಸಲು ಹೊಸ ಕೋರ್ಸ್ ಆರಂಭಿಸಿದೆ.
ದೆಹಲಿ ವಿಶ್ವ ವಿದ್ಯಾಲಯ ನವೀನ ಕೌಶಲ್ಯ ಆಧಾರಿತ ಕೋರ್ಸ್ (ಸಿಐಎಸ್ಬಿಸಿ)ಗಳಲ್ಲಿ ಪರಿಚಯಿಸಲಾಗಿದೆ. ಇದರಲ್ಲಿ ಒಟ್ಟು 12 ಕೌಶಲ್ಯದ ಕೋರ್ಸ್ಗಳಿದ್ದು, ಎಲ್ಲವೂ ಹೊಸ ಕೌಶಲ್ಯವಾಗಿದ್ದು, ಈ ಮೂಲಕ ವಿದ್ಯಾರ್ಥಿಗಳು ಉದ್ಯೋಗ ಕಂಡುಕೊಳ್ಳಬಹುದಾಗಿದೆ. ಅದರಲ್ಲಿ ಇದೀಗ ಡ್ರೋನ್ ತಂತ್ರಜ್ಞಾನಾಧರಿತ ಕೌಶಲ್ಯ ಕಲಿಸಲು ಸಜ್ಜಾಗಿದೆ.
ಈ ಕುರಿತು ಮಾತನಾಡಿರುವ ವಿವಿಯ ಕೌಶಲ್ಯ ಕೇಂದ್ರ ಸಮಿತಿಯ ಅಧ್ಯಕ್ಷರಾಗಿರುವ ಫ್ರೊ. ಪಾಯಲ್ ಮಗೊ, ಸದ್ಯ ಕೇಂದ್ರದಲ್ಲಿ 12 ಕೌಶಲ್ಯಾಧರಿತ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಡ್ರೋನ್ ಆಧಾರಿತ ಕೋರ್ಸ್ ಕೂಡ ಸೇರಲಿದೆ ಎಂದರು. ಈ ಕೋರ್ಸ್ ಸಂಪೂರ್ಣ ಹೊಸದಾಗಿದೆ. ಇತ್ತೀಚಿನ ದಿನದಲ್ಲಿ ಡ್ರೋನ್ ಬಳಕೆ ಹೆಚ್ಚಿದೆ. ಆದರೆ, ಇದರ ಹಾರಾಟದ ಕೌಶಲ್ಯ ಹೊಂದಿರುವ ತರಬೇತುದಾರ ವ್ಯಕ್ತಿಗಳ ಕೊರತೆ ಮಾರುಕಟ್ಟೆಯಲ್ಲಿದೆ. ಇದನ್ನು ಅರಿತು ಈ ಕೋರ್ಸ್ ಆರಂಭಿಸಲಾಗುವುದು ಎಂದರು.
ಡ್ರೋನ್ ಕೋರ್ಸ್ಗೆ ಪೈಲಟ್ ತರಬೇತಿ ಆರಂಭಿಸುವ ಮೊದಲು ಜುಲೈನಲ್ಲಿ ಕಾಲೇಜ್ ತೆರೆಯದಾಗ ಕಾಲೇಜುಗಳಲ್ಲಿ ಈ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಗುವುದು. ಇದರ ಹಿಂದಿನ ಉದ್ದೇಶ, ಈ ಕೋರ್ಸ್ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು. ಇದರಿಂದ ವಿದ್ಯಾರ್ಥಿಗಳು ಕಲಿಕೆ ಪ್ರಯೋಜನ ಪಡೆಯಬಹುದು
ಹೇಗೆ ಹಾರಾಟ: ಫೀಲ್ಡ್ ಡ್ರೋನ್ ಹಾರಾಟ ನಡೆಸುವ ಕುರಿತು ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗುವುದು. ಈ ಕೋರ್ಸ್ ಅಡಿ ಡ್ರೋನ್ ಹಾರಾಟ ಕಲಿಕೆ ಮತ್ತು ಅದರ ದುರಸ್ತಿ ಕಾರ್ಯ ಸೇರಿದಂತೆ ಸಂಪೂರ್ಣ ಮಾಹಿತಿ ಕುರಿತು ತಿಳಿಸಿ ಹೇಳಲಾಗುವುದು. ಈ ಕೋರ್ಸ್ ಆಗಸ್ಟ್- ಸೆಪ್ಟೆಂಬರ್ನಿಂದ ಪ್ರಾರಂಭವಾಗಲಿದೆ. ಕೋರ್ಸ್ ಅಡಿ ಕೌಶಲ್ಯ ಪಡೆದ ವಿದ್ಯಾರ್ಥಿಗಳು ಸುಲಭವಾಗಿ ಒಪ್ಪಂದವಾದ ಕಂಪನಿಗಳಲ್ಲಿ ಕೂಡ ಕಾರ್ಯ ನಿರ್ವಹಿಸಬಹುದಾಗಿದೆ. ಇಲ್ಲವೇ, ಸ್ವ ಉದ್ಯೋಗ ಕಂಡು ಕೊಳ್ಳಬಹುದಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳೇ, ಅಯ್ಯೊ ಓದಲು ಟೈಂ ಸಾಕಾಗುತ್ತಿಲ್ಲ ಎಂದು ಕೊರಗುವ ಬದಲು ಹೀಗೆ ಮಾಡಿ