ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದಲ್ಲಿ ಐದು ಕೃಷಿ ವಿವಿಗಳಿದ್ದು ವಿದ್ಯಾರ್ಥಿಗಳು ಬಯಸಿದ ವಿವಿಗಳಲ್ಲಿ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ವಿವಿಗಳಲ್ಲಿ ಕಲಿಕೆಗಿದೆ ಅವಕಾಶ:
- ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ- ಶಿವಮೊಗ್ಗ
- ಕೃಷಿ ವಿಶ್ವವಿದ್ಯಾಲಯ- ಬೆಂಗಳೂರು
- ಕೃಷಿ ವಿಶ್ವವಿದ್ಯಾಲಯ- ಧಾರವಾಡ
- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ- ರಾಯಚೂರು
- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ- ಬಾಗಲಕೋಟೆ
ಸ್ನಾತಕೋತ್ತರ ಪದವಿ 4 ಸೆಮ್ಗಳ ಎರಡು ವರ್ಷದ ಅವಧಿಯದ್ದಾಗಿದೆ. ಇದರ ಜೊತೆಗೆ ಡಾಕ್ಟರಲ್ ಪದವಿಗೆ ದಾಖಲಾತಿ ಬಯಸುವವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಪ್ರವೇಶಾತಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಅಂಕಗಳು ಕಡ್ಡಾಯ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 2,500 ರೂ ಅರ್ಜಿ ಶುಲ್ಕ ಪಾವತಿ ಮಾಡಬೇಕಿದೆ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 1,250 ರೂ ದರ ನಿಗದಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಸೆಪ್ಟೆಂಬರ್ 9. ಈ ಸಂಬಂಧ ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು https://pg.admission.kar.nic.in ಅಥವಾ ವಿದ್ಯಾರ್ಥಿಗಳು ಪ್ರವೇಶ ಬಯಸುವ ವಿಶ್ವವಿದ್ಯಾಲಯಗಳ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: ವೈದ್ಯಕೀಯ ಕೋರ್ಸ್ಗಳ ನೋಂದಣಿಗೆ ಕೆಇಎ ಅಂತಿಮ ಅವಕಾಶ