ETV Bharat / education-and-career

ಇಂದೇ ಅಪ್ಲೈ ಮಾಡಿ: ಕೋಲಾರ ಜಿಲ್ಲೆಯಲ್ಲಿದೆ 513 ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರ ಹುದ್ದೆ

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ ಏಪ್ರಿಲ್​ 19 ಆಗಿದೆ. ಈ ಹುದ್ದೆಗಳ ಮಾಹಿತಿ ಹೀಗಿದೆ.

Anganwadi Worker and helper Recruitment in Kolar WCD

author img

By ETV Bharat Karnataka Team

Published : Mar 20, 2024, 5:34 PM IST

ಬೆಂಗಳೂರು: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪ್ರಸ್ತುತ ತುಮಕೂರು ಹಾಗೂ ಬೀದರ್​ನಲ್ಲಿ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆ ವಿವರ: ಕೋಲಾರ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಒಟ್ಟು 513 ಅಂಗನಾಡಿಯಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಅಂಗನಾಡಿ ಕಾರ್ಯಕರ್ತರು - 120

ಅಂಗನಾಡಿ ಸಹಾಯಕರು - 393

ವಿದ್ಯಾರ್ಹತೆ:

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅಭ್ಯರ್ಥಿಗಳು ಪಿಯುಸಿ ವ್ಯಾಸಂಗವನ್ನು ಪೂರ್ಣಗೊಳಿಸಿರಬೇಕು.

ಅಂಗನಾಡಿ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 19 ರಿಂದ 35 ವರ್ಷದ ವಯೋಮಿತಿ ಹೊಂದಿರಬೇಕು. ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನ ಕೋಲಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಲಭ್ಯವಿರುವ ಅಧಿಸೂಚನೆ ಪರಿಶೀಲಿಸಿ ಆನ್​ಲೈನ್​ ಮೂಲಕ ಅರ್ಜಿ ಭರ್ತಿಗೆ ಮುಂದಾಗುವಂತೆ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಮೆರಿಟ್​ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಮಾರ್ಚ್​ 12ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಏಪ್ರಿಲ್​ 19 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು karnemakaone.kar.nic.in/abcd/ApplicationForm_JA_org.aspx ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಚಾಮರಾಜನಗರ ಡಬ್ಲೂಸಿಡಿಯಲ್ಲಿ 3 ಹುದ್ದೆ: ಚಾಮರಾಜನಗದ ಜಿಲ್ಲಾ ಮಟ್ಟದಲ್ಲಿನ ಮಹಿಳಾ ಸಬಲೀಕರಣ ಘಟಕಕ್ಕೆ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಮಿಷನ್​ ನಿರ್ದೇಶಕರು ಮತ್ತು ಜೆಂಡರ್​ ಸ್ಪೆಷಲಿಸ್ಟ್​​ ಮತ್ತು ಸ್ಪೆಷಲಿಸ್ಟ್​​ ಇನ್​ ಫೈನಾಲ್ಸಿಯಲ್​ ಲಿಟ್ರಸಿ ಅಂಡ್​ ಅಕೌಂಟ್​ನಲ್ಲಿ ತಲಾ ಒಂದೊಂದು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಯು ಸಂಪೂರ್ಣ ಗುತ್ತಿಗೆ ಆಧರಿತ ಹುದ್ದೆಯಾಗಿದೆ. ಈ ಹುದ್ದೆಗೆ ಕ್ರಮವಾಗಿ 50 ಸಾವಿರ, 35 ಸಾವಿರ ಮತ್ತು 28 ಸಾವಿರ ವೇತನ ನಿಗದಿಸಲಾಗಿದೆ. ಈ ಹುದ್ದೆಗೆ ಜಿಲ್ಲಾಡಳಿತದ ವೆಬ್​ಸೈಟ್​ ಮೂಲಕ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅಂತಿಮ ದಿನ ಮಾರ್ಚ್​ 26 ಆಗಿದೆ. ಹೆಚ್ಚಿನ ವಿವರ, ಅಧಿಕೃತ ಅಧಿಸೂಚನೆಗೆ chamrajnagar.nic.in ಭೇಟಿ ನೀಡಿ.

ಇದನ್ನೂ ಓದಿ: ಕೆಪಿಎಸ್​ಸಿ ನೇಮಕಾತಿ: 247 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.