ಪುಣೆ: ಅತಿಥ್ಯ ಕ್ಷೇತ್ರದಲ್ಲಿನ ವೃತ್ತಿಪರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಜಿಂಕ್ಯ ಡಿ.ವೈ.ಪಾಟೀಲ್ ವಿಶ್ವವಿದ್ಯಾಲಯವು ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ನಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಯಂಗ್ ಚೆಫ್, ಯಂಗ್ ವೇಟರ್ ಮತ್ತು ಯಂಗ್ ಮಿಕ್ಸಾಲಜಿಸ್ಟ್ ಇಂಡಿಯಾದ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್ನ ವಿದ್ಯಾರ್ಥಿ ಕೂಡ ವಿಜೇತರಾಗಿ ಹೊರ ಹೊಮ್ಮಿದ್ದಾರೆ.
ವಿಜೇತರ ಪಟ್ಟಿ:
- ಯಂಗ್ ಚೆಫ್: ಪುಣೆಯ ದಿ ಕೊರಿಂಧಿಯನ್ಸ್ ರೆಸಾರ್ಟ್ ಆ್ಯಂಡ್ ಕ್ಲಬ್ನ ಲಬ್ದಿ ಚ್ಛೆಡಾ
- ಯಂಗ್ ವೇಟರ್: ಬೆಂಗಳೂರಿನ ಎಂ.ಎಸ್.ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್ನ ಪರೇಶ್ ಸಿಂಗ್
- ಯಂಗ್ ಮಿಕ್ಸಾಲಜಿಸ್ಟಸ್: ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ನ ರೆಬೆಕಾ ಪೀಟರ್ ಡಯಾಸ್
ರನ್ನರ್‌ಅಪ್ ಸ್ಪರ್ಧಿಗಳು:
- ಚೆಫ್: ದೆಹಲಿಯ ಹಯಾತ್ ರೆಜೆನ್ಸಿಯ ನಿಮಿತ್ ಚೌಹಣ್
- ವೇಟರ್: ಕೋಲ್ಕತ್ತಾದ ದಿ ಪಾರ್ಕ್ ಹೋಟೆಲ್ನ ಪ್ರಗತಿ ಶಾ
- ಮಿಕ್ಸಾಲಜಿಸ್ಟಸ್: ಮುಂಬೈನ ಮೆಕ್ ಸೆಂಟ್ ಯಶ್ ದಂಗ್ಲೆ
ವಿಜೇತ ಅಭ್ಯರ್ಥಿಗಳು ಈ ವರ್ಷದ ನವೆಂಬರ್ನಲ್ಲಿ ಸಿಂಗಾಪುರದಲ್ಲಿ ನಡೆಯಲಿರುವ ವಿಶ್ವ ವೈವೈವೈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಇದರಲ್ಲಿ ಗೆದ್ದವರು ಫಾರ್ಮಲಾ 1 ರೇಸ್ನಲ್ಲಿ ಪಾಲ್ಗೊಳ್ಳುವರು.
ಈ ಸ್ಪರ್ಧೆಯಲ್ಲಿ ಮಹೀಂದ್ರಾ ಹಾಲಿಡೇಸ್ ಆ್ಯಂಡ್ ರೆಸಾರ್ಟ್ಸ್ ಇಂಡಿಯಾ ಲಿಮಿಟೆಡ್ನ ಕಾರ್ಪೊರೇಟ್ ಎಕ್ಸಿಕ್ಯೂಟಿವ್ ಚೆಫ್ ಗೌತಮ್ ಮೆಹ್ರಿಷಿ, ತಾಜ್ ಲ್ಯಾಂಡ್ಸ್ ಎಂಡ್ನ ವೆಸ್ಟ್ ಮತ್ತು ಎಕ್ಸಿಕ್ಯೂಟಿವ್ ಚೆಫ್ ರೋಹಿತ್ ಸಾಂಗ್ವಾನ್, ಲಿಕ್ವಿಡ್ ಎ' ಲಾ ಕಾರ್ಟೆ ಸಂಸ್ಥಾಪಕ ಜಾಕೋಬ್ ಅಲೆಕ್ಸಾಂಡರ್, ಹಿಮ್ಮಲೆಹ್ ಸ್ಪಿರಿಟ್ಸ್ನ ಬ್ರಾಂಡ್ ಅಂಬಾಸಿಡರ್ ಸಿದ್ಧಾಂತ್ ಹುಲೆ, ತಾಜ್ ಲ್ಯಾಂಡ್ಸ್ ಎಂಡ್ ಮತ್ತು ಆಂಡಿ ಡೌನ್ಟನ್ನ ಅರ್ಚಿತಾ ಗುಪ್ತಾ ತೀರ್ಪುಗಾರರಾಗಿದ್ದರು.
ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಸ್ಪರ್ಧೆಗೆ ಬೆಂಬಲ ನೀಡಿತ್ತು.
ಇದನ್ನೂ ಓದಿ: ಸಾಹ್ಮ್ ನಿಯಮದಿಂದ ನಿರುದ್ಯೋಗ ದರ ಹೆಚ್ಚಳ, ಅಮೆರಿಕ ಆರ್ಥಿಕ ಹಿಂಜರಿತ ಸಾಧ್ಯತೆ: ಹೀಗಿದೆ ಅರ್ಥಶಾಸ್ತ್ರಜ್ಞರ ಅಭಿಪ್ರಾಯ