ETV Bharat / business

ನಿಯಮ ಉಲ್ಲಂಘನೆ: ಮೇ ತಿಂಗಳಲ್ಲಿ 66 ಲಕ್ಷ ಖಾತೆ ನಿಷೇಧಿಸಿದ ವಾಟ್ಸ್​ಆ್ಯಪ್ - WhatsApp banned accounts

author img

By ETV Bharat Karnataka Team

Published : Jul 2, 2024, 4:22 PM IST

ದೇಶದ ನಿಯಮ ಉಲ್ಲಂಘಿಸಿದ 66 ಲಕ್ಷ ವಾಟ್ಸ್​ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಮೇ ತಿಂಗಳಲ್ಲಿ 66 ಲಕ್ಷ ಖಾತೆ ನಿಷೇಧಿಸಿದ ವಾಟ್ಸ್​ಆ್ಯಪ್
ಮೇ ತಿಂಗಳಲ್ಲಿ 66 ಲಕ್ಷ ಖಾತೆ ನಿಷೇಧಿಸಿದ ವಾಟ್ಸ್​ಆ್ಯಪ್ (IANS (ಸಾಂದರ್ಭಿಕ ಚಿತ್ರ))

ನವದೆಹಲಿ: ಮೇ ತಿಂಗಳಲ್ಲಿ ಭಾರತದಲ್ಲಿ 66 ಲಕ್ಷಕ್ಕೂ ಹೆಚ್ಚು ವಾಟ್ಸ್​ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಮೆಟಾ ಮಾಲೀಕತ್ವದ ವಾಟ್ಸ್​ಆ್ಯಪ್ ಸೋಮವಾರ ತಿಳಿಸಿದೆ. ದೇಶದ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ. ನಿಷೇಧ ಮಾಡಲಾದ 66,20,000 ವಾಟ್ಸ್​ಆ್ಯಪ್ ಖಾತೆಗಳ ಪೈಕಿ 12,55,000 ಖಾತೆಗಳ ವಿರುದ್ಧ ಯಾವುದೇ ದೂರು ಬರುವ ಮೊದಲೇ ಅವುಗಳನ್ನು ಪೂರ್ವಭಾವಿಯಾಗಿ ನಿರ್ಬಂಧಿಸಲಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ 550 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೊಬೈಲ್ ಮೆಸೇಜಿಂಗ್ ಪ್ಲಾಟ್​ಫಾರ್ಮ್​ ವಾಟ್ಸ್​ಆ್ಯಪ್​ಗೆ ಭಾರತದ ಬಳಕೆದಾರರಿಂದ 13,367 ಕುಂದುಕೊರತೆ ದೂರುಗಳು ಬಂದಿವೆ ಮತ್ತು ಇವುಗಳ ಪೈಕಿ ಕೇವಲ 31 ದೂರುಗಳ ವಿಷಯದಲ್ಲಿ ಕ್ರಮಕೈಗೊಳ್ಳಲಾಗಿದೆ.

ಹೊಸ ಭಾರತೀಯ ಐಟಿ ನಿಯಮಗಳು 2021 ರ ಪ್ರಕಾರ ವಾಟ್ಸ್​ಆ್ಯಪ್ ದೇಶದ ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ ಕ್ರಮ ಕೈಗೊಳ್ಳುವಂತೆ 11 ಆದೇಶಗಳನ್ನು ಸ್ವೀಕರಿಸಿದೆ ಮತ್ತು ಎರಡನ್ನೂ ಅನುಸರಿಸಿದೆ ಎಂದು ಅದರ ಮಾಸಿಕ ಅನುಸರಣಾ ವರದಿ ತಿಳಿಸಿದೆ. "ನಾವು ನಮ್ಮ ಕೆಲಸದಲ್ಲಿ ಪಾರದರ್ಶಕತೆಯೊಂದಿಗೆ ಮುಂದುವರಿಯುತ್ತೇವೆ ಮತ್ತು ಭವಿಷ್ಯದ ವರದಿಗಳಲ್ಲಿ ನಮ್ಮ ಪ್ರಯತ್ನಗಳ ಬಗ್ಗೆ ಮಾಹಿತಿಯನ್ನು ಸೇರಿಸುತ್ತೇವೆ" ಎಂದು ಕಂಪನಿ ಹೇಳಿದೆ.

ಏಪ್ರಿಲ್​​ನಲ್ಲಿ ವಾಟ್ಸ್​ಆ್ಯಪ್ ದೇಶದಲ್ಲಿ 71 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿತ್ತು. ಇನ್ನು ಮಾರ್ಚ್​​ನಲ್ಲಿ ಕಂಪನಿಗೆ ದಾಖಲೆಯ 10,554 ದೂರುಗಳು ಬಂದಿದ್ದವು ಮತ್ತು 11ರಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ದೂರುಗಳನ್ನು ಪರಿಶೀಲಿಸಲು ಮತ್ತು ಅವುಗಳ ಮೇಲೆ ಕ್ರಮ ಕೈಗೊಳ್ಳಲು ಕಂಪನಿಯು ಎಂಜಿನಿಯರ್​ಗಳು, ಡೇಟಾ ವಿಜ್ಞಾನಿಗಳು, ವಿಶ್ಲೇಷಕರು, ಸಂಶೋಧಕರು ಮತ್ತು ಕಾನೂನು ಜಾರಿ, ಆನ್ ಲೈನ್ ಸುರಕ್ಷತೆ ಮತ್ತು ತಂತ್ರಜ್ಞಾನ ಬೆಳವಣಿಗೆಗಳ ಮಾಹಿತಿ ಹೊಂದಿದ ತಜ್ಞರ ತಂಡವನ್ನು ನೇಮಿಸಿಕೊಂಡಿರುತ್ತದೆ.

"ಬೇಡವಾದ ಕಾಂಟ್ಯಾಕ್ಟ್​ಗಳನ್ನು ನಿರ್ಬಂಧಿಸಲು ಮತ್ತು ಅಪ್ಲಿಕೇಶನ್ ಒಳಗೆ ಉದ್ಭವವಾಗುವ ಸಮಸ್ಯೆಗಳ ಬಗ್ಗೆ ಮತ್ತು ಕಾಂಟ್ಯಾಕ್ಟ್​ಗಳ ಬಗ್ಗೆ ದೂರು ನೀಡಲು ನಾವು ಬಳಕೆದಾರರಿಗೆ ಅನುವು ಮಾಡಿಕೊಡಲಾಗಿದೆ. ನಾವು ಬಳಕೆದಾರರ ಪ್ರತಿಕ್ರಿಯೆಗೆ ಹೆಚ್ಚು ಗಮನ ನೀಡುತ್ತೇವೆ ಮತ್ತು ತಪ್ಪು ಮಾಹಿತಿಯನ್ನು ತಡೆಗಟ್ಟುವಲ್ಲಿ, ಸೈಬರ್ ಸುರಕ್ಷತೆಯನ್ನು ಉತ್ತೇಜಿಸುವಲ್ಲಿ ಮತ್ತು ಚುನಾವಣಾ ಸಮಗ್ರತೆಯನ್ನು ಕಾಪಾಡುವಲ್ಲಿ ತಜ್ಞರೊಂದಿಗೆ ಕೆಲಸ ಮಾಡುತ್ತೇವೆ" ಎಂದು ವಾಟ್ಸ್​ಆ್ಯಪ್ ಹೇಳಿದೆ. ವಾಟ್ಸ್​ಆ್ಯಪ್​ ಭಾರತದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್​ಗಳಲ್ಲಿ ಒಂದಾಗಿದೆ. ಅಂಕಿ - ಅಂಶಗಳ ಪ್ರಕಾರ, ವಾಟ್ಸ್​ಆ್ಯಪ್ ಭಾರತದಲ್ಲಿ ಜೂನ್ 2021 ರ ಹೊತ್ತಿಗೆ 487.5 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿತ್ತು.

ಇದನ್ನೂ ಓದಿ : ಕಳೆದ ವರ್ಷಕ್ಕಿಂತ ಈ ವರ್ಷದ ಜೂನ್​ನಲ್ಲಿ ಯುಪಿಐ ವಹಿವಾಟು ಶೇ. 49ರಷ್ಟು ಬೆಳವಣಿಗೆ - UPI BASED TRANSACTIONS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.