ETV Bharat / business

ಬ್ಯಾಂಕ್​ಗಳು ನಿಮಗೆ ಸಾಲ ಕೊಡ್ತಿಲ್ವಾ?: ಹಾಗಿದ್ರೆ ಹೀಗೆ ಮಾಡಿ, ಫಟ್​ ಅಂತ ಲೋನ್​ ತೆಗೆದುಕೊಳ್ಳಿ - BANK LOAN INFORMATION

ಬ್ಯಾಂಕ್​​ ಸಾಲಕ್ಕಾಗಿ ಅಲೆದು ಅಲೆದು ಸುಸ್ತಾಗಿದೆಯೇ?, ಯಾವ ಕಾರಣಕ್ಕಾಗಿ ಸಾಲ ಸಿಕ್ತಿಲ್ಲ ಅನ್ನೋ ಗೊಂದಲ ನಿಮ್ಮಲ್ಲಿದೆಯೇ. ಹಾಗಿದ್ದರೆ ಈ ಕೆಳಗಿನ ಅಂಶಗಳು ನಿಮ್ಮ ಸಾಲಕ್ಕೆ ಅಡ್ಡಿಯಾಗಿರುತ್ತವೆ ಎಂಬುದು ಖಚಿತ. ಅವು ಏನೆಂಬುದು ಇಲ್ಲಿವೆ ನೋಡಿ.

ಬ್ಯಾಂಕ್​ಗಳು ನಿಮಗೆ ಸಾಲ ಕೊಡ್ತಿಲ್ವಾ
ಬ್ಯಾಂಕ್​ಗಳು ನಿಮಗೆ ಸಾಲ ಕೊಡ್ತಿಲ್ವಾ (ETV Bharat)
author img

By ETV Bharat Karnataka Team

Published : Nov 11, 2024, 5:36 PM IST

ಹೈದರಾಬಾದ್​: ನಮ್ಮ ಅಗತ್ಯ ಮತ್ತು ಅನಿವಾರ್ಯಕ್ಕಾಗಿ ಸಾಲ ಮಾಡುತ್ತೇವೆ. ಈ ವೇಳೆ ನಾವು ಪರಿಚಯರೋ ಅಥವಾ ಬ್ಯಾಂಕ್‌ಗಳಿಂದಲೋ ಸಾಲ ತೆಗೆದುಕೊಳ್ಳುತ್ತೇವೆ. ಪರಿಚಯಸ್ಥರಿಂದ ಸಾಲ ಪಡೆಯುವುದು ಸುಲಭ. ಆದರೆ, ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಬಲು ಕಷ್ಟ. ಏಕೆಂದರೆ ಬ್ಯಾಂಕ್‌ಗಳು ಸಾಲ ನೀಡಲು ಇನ್ನಿಲ್ಲದ ಷರತ್ತುಗಳನ್ನು ವಿಧಿಸುವುದರೊಂದಿಗೆ ಅನೇಕ ದಾಖಲೆಗಳನ್ನು ಕೇಳುತ್ತವೆ.

ನಮ್ಮ ಆರ್ಥಿಕ ಸ್ಥಿತಿ, ಅರ್ಹತೆಗಳು, ಬರುವ ಆದಾಯ ಎಷ್ಟು ಎಂಬುದನ್ನು ಪರಿಗಣಿಸಿ ಬ್ಯಾಂಕುಗಳು ಸಾಲದ ಅರ್ಜಿಯನ್ನು ಪರಿಗಣಿಸುತ್ತವೆ. ಇದರಲ್ಲಿ ಒಂದು ಲೋಪ ಕಂಡುಬಂದರೂ, ಅರ್ಜಿಯನ್ನು ನಿರಾಕರಿಸುತ್ತವೆ. ಇಂತಹ ಸ್ಥಿತಿ ಎದುರಾದಾಗ ನಾವು ತುಸು ಎಚ್ಚರ ವಹಿಸಬೇಕು. ಸಾಲವನ್ನು ಏಕೆ ನಿರಾಕರಿಸಲಾಗಿದೆ ಎಂಬುದನ್ನು ಕಂಡುಕೊಳ್ಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ಇಂತಹ ನಿರಾಕರಣೆಯಿಂದ ತಪ್ಪಿಸಲು ಸಾಧ್ಯ.

ಈ ಹಂತಗಳನ್ನು ದಾಟಲೇಬೇಕು: ಈ ಹಿಂದೆ ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಹಾಕಿದಾಗ, ಅದರ ಪರಿಶೀಲನಾ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಇದೀಗ, ಕೆಲವು ಬ್ಯಾಂಕ್​ಗಳ AI ತಂತ್ರಜ್ಞಾನ ಅಳವಡಿಸಿಕೊಂಡಿದ್ದರಿಂದ, ಅರ್ಜಿ ಪರಿಶೀಲನೆ ತ್ವರಿತಗತಿಯಲ್ಲಿ ನಡೆಯುತ್ತದೆ. AI ಸಾಫ್ಟ್‌ವೇರ್​​ನಿಂದ ನಮ್ಮ ಹಿಂದಿನ ಸಾಲ, ಆದಾಯದ ಮೂಲ, ಸಿಬಿಲ್​ ಸ್ಕೋರ್​ ಪರಿಗಣಿಸಿ ಎಷ್ಟು ಸಾಲ ನೀಡಬೇಕು ಎಂಬುದನ್ನು ಬ್ಯಾಂಕ್​ ನಿರ್ಧರಿಸುತ್ತದೆ.

ಈ ಕಾರಣಗಳಿಂದ ಸಾಲ ಸಿಗಲ್ಲ: ಈಗಾಗಲೇ ಬ್ಯಾಂಕ್ ಸಾಲ ಪಡೆದವರು, ಕ್ರೆಡಿಟ್ ಕಾರ್ಡ್​ನಲ್ಲಿ ಹಣ ಬಾಕಿ ಉಳಿಸಿಕೊಂಡವರ ಸಾಲದ ಅರ್ಜಿಗೆ ಅನುಮೋದನೆ ಸಿಗುವುದು ಕಷ್ಟಸಾಧ್ಯ. ಹಳೆಯ ಸಾಲ ತೀರಿಸಲು ನಮಗಿರುವ ಆದಾಯ ಸಾಕಾಗದು ಎಂದು ಬ್ಯಾಂಕ್​​ಗಳು ಹೊಸ ಸಾಲ ನೀಡಲು ನಿರಾಕರಿಸುತ್ತವೆ. ಇರುವ ಸಾಲಕ್ಕೆ ತಡವಾಗಿ EMI ಗಳನ್ನು ಕಟ್ಟುತ್ತಿದ್ದರೂ ಸಹ ಹೊಸ ಸಾಲ ಮಂಜೂರಾತಿಗೆ ಪರಿಗಣಿತವಾಗುವುದಿಲ್ಲ.

ಕಡಿಮೆ ಕ್ರೆಡಿಟ್​ ಸ್ಕೋರ್​, ಪದೇ ಪದೇ ಉದ್ಯೋಗ ಬದಲಾವಣೆ, ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಕೇಸ್​ ಇದ್ದರೆ, ಅಡಮಾನದ ಆಸ್ತಿಗಳ ಮೇಲೆ ಕಾನೂನು ಕ್ರಮ ಎದುರಿಸುತ್ತಿರುವವರಿಗೆ ಬ್ಯಾಂಕ್‌ಗಳು ಹೊಸ ಸಾಲವನ್ನು ನೀಡುವುದಿಲ್ಲ ಎಂಬುದು ಗೊತ್ತಿರಲಿ. ಈ ಲೋಪಗಳು ಇದ್ದರೆ ಬ್ಯಾಂಕ್​ ಸಾಲ ಇರಲಿ, ಕ್ರೆಡಿಟ್​​ ಕಾರ್ಡ್​ ಕೂಡ ಸಿಗುವುದಿಲ್ಲ.

ಸಾಲ ಸಿಗದಿದ್ದರೆ ಹೀಗೆ ಮಾಡಿ: CIBIL ನಂತಹ ವಿವಿಧ ಕ್ರೆಡಿಟ್ ಬ್ಯೂರೋಗಳು ನೀಡುವ ವಾರ್ಷಿಕ ವರದಿಗಳ ಆಧಾರದ ಮೇಲೆ, ನಮ್ಮ ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳಬಹುದು. ಈ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಕಾಲಕಾಲಕ್ಕೆ ಅದನ್ನು ವಿಶ್ಲೇಷಿಸಿ, ನಾವು ಕ್ರೆಡಿಟ್ ಸ್ಕೋರ್​ ಅನ್ನು ಸರಿಪಡಿಸಿಕೊಳ್ಳಬೇಕು.

ನಿಮ್ಮ ಕ್ರೆಡಿಟ್​ ಸ್ಕೋರ್​ ಕಡಿಮೆ ಇದೆಯೇ? ಅನ್ನು ಮೊದಲು ಹೆಚ್ಚಿಸಿಕೊಳ್ಳಿ: ಸಾಲ ಮಂಜೂರಾತಿಗೆ ಕಡಿಮೆ ಕ್ರೆಡಿಟ್ ಸ್ಕೋರ್‌ ಕಾರಣವಾಗಿದ್ದರೆ, ಅದನ್ನ ಮೊದಲು ಹೆಚ್ಚಿಸಿಕೊಳ್ಳಿ. ಈ ಹಿಂದಿನ ಸಾಲವನ್ನು ಪೂರ್ಣವಾಗಿ ಪಾವತಿಸಲು ಪ್ರಯತ್ನಿಸಿ. ಇದು ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸುತ್ತದೆ. ಸಾಧ್ಯವಾದಷ್ಟು ಸಾಲ ಮಾಡುವುದನ್ನು ಕಡಿಮೆ ಮಾಡಿ. ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ಅದರ ಮಿತಿಯ 30 ಪ್ರತಿಶತಕ್ಕಿಂತ ಹೆಚ್ಚಿಗೆ ಬಳಸಬೇಡಿ. ಚಿನ್ನವನ್ನು ಒತ್ತೆ ಇಡುವ ಮೂಲಕವೂ ಕ್ರೆಡಿಟ್​ ಸ್ಕೋರ್​ ಅನ್ನು ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಉತ್ಸಾಹ: 17ಕೋಟಿಗೆ ತಲುಪಿದ ಡಿಮ್ಯಾಟ್​ ಖಾತೆಗಳ ಸಂಖ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.