ETV Bharat / business

ನೀವು ಎಫ್​​​ಡಿಗಿಂತ ಹೆಚ್ಚಿನ ಬಡ್ಡಿ ಬಯಸುವಿರಾ?; ಸುರಕ್ಷತೆಯೂ ಇರಬೇಕು ಅಂತೀರಾ: ಹಾಗಾದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ - PO NATIONAL SAVINGS CERTIFICATE

ಉತ್ತಮ ಆದಾಯವನ್ನು ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಲು ನೀವು ಬಯಸುತ್ತಿದ್ದೀರಾ? ತೆರಿಗೆ ವಿನಾಯಿತಿಗಳು ಸಹ ನಿಮಗೆ ಬೇಕು ಎಂದು ನೀವು ಬಯಸುವಿರಾ? ಹಾಗಾದರೆ ಭಾರತೀಯ ಅಂಚೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಅಂತಾ ಒಂದಿದೆ. ಈ ಪ್ರಮಾಣಪತ್ರ ಎಸ್‌ಬಿಐ ಎಫ್‌ಡಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ. ಅಷ್ಟೇ ಅಲ್ಲ ಈ ಯೋಜನೆಯಲ್ಲಿ ನಿಮಗೆ ತೆರಿಗೆ ವಿನಾಯಿತಿಯೂ ಸಿಗುತ್ತದೆ. ಹೆಚ್ಚಿನ ಮಾಹಿತಿ ಬೇಕಾ ಹಾಗಾದರೆ ಈ ಸ್ಟೋರಿಯನ್ನ ಸಂಪೂರ್ಣವಾಗಿ ಓದಿ

Want higher interest + tax benefits over FD? Take a look at this scheme!
ನೀವು ಎಫ್​​​ಡಿಗಿಂತ ಹೆಚ್ಚಿನ ಬಡ್ಡಿ ಬಯಸುವಿರಾ?; ಸುರಕ್ಷತೆಯೂ ಇರಬೇಕು ಅಂತೀರಾ: ಹಾಗಾದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ
author img

By ETV Bharat Karnataka Team

Published : Apr 17, 2024, 1:06 PM IST

ಹೈದರಾಬಾದ್​; ಹೂಡಿಕೆಯ ವಿಷಯದಲ್ಲಿ ಹೆಚ್ಚಿನ ಜನರು ಯೋಚಿಸುವ ಮೊದಲ ವಿಚಾರ ಎಂದರೆ ಅದು ಸುರಕ್ಷಿತವಾಗಿರಬೇಕು ಎಂದು. ಅಷ್ಟಕ್ಕೂ ನಿಮಗೆಲ್ಲ ತಟ್ಟಂಥ ನೆನಪಾಗುವುದು ಸ್ಥಿರ ಠೇವಣಿಗಳ ಬಗ್ಗೆಯೇ. ಯಾಕೆಂದರೆ ಸ್ಥಿರ ಠೇವಣಿ ಉತ್ತಮ ಮತ್ತು ಸುರಕ್ಷಿತ ಎಂಬ ಕಾರಣಕ್ಕೆ ಈ ಯೋಜನೆಯ ಮೊರೆ ಹೋಗ್ತಾರೆ ಹೆಚ್ಚಿನವರು. ಇವು ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ಹೊಂದಿರುವ ಕಾರಣ ಬಹುತೇಕರು ಇವುಗಳಲ್ಲಿಯೇ ಹೂಡಿಕೆ ಮಾಡುತ್ತಾರೆ. ಅಲ್ಲದೇ ಬ್ಯಾಂಕ್ ಗಳಲ್ಲಿ ಹಣ ಹಾಕಿದರೆ ಅಪಾಯ ಕಡಿಮೆ ಎಂಬುದನ್ನು ಪರಿಗಣಿಸಲಾಗುತ್ತದೆ.

ಹಣ ಕಳೆದು ಹೋಗುತ್ತೆ ಎಂಬ ಭಯದಲ್ಲಿ ಇರುವರಿಗಾಗಿ ಪೋಸ್ಟ್ ಆಫೀಸ್ 'ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ' ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಆಕರ್ಷಕ ಬಡ್ಡಿದರದ ಜತೆಗೆ ತೆರಿಗೆ ವಿನಾಯಿತಿಯನ್ನೂ ಕೂಡಾ ಪಡೆಯಬಹುದು. ಅದರಲ್ಲೂ ಬ್ಯಾಂಕ್‌ಗಳಲ್ಲಿ ಹಾಕುವ ನಿಶ್ಚಿತ ಠೇವಣಿಗಿಂತ ಈ ಯೋಜನೆಯಲ್ಲಿ ಹೆಚ್ಚು ಬಡ್ಡಿ ಬರುತ್ತದೆ.

ಬ್ಯಾಂಕ್​ FD ಗೆ ಹೋಲಿಸಿದರೆ ಹೆಚ್ಚಿನ ಆದಾಯ: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ಶೇ 7.7 ರಷ್ಟು ಸ್ಥಿರ ಬಡ್ಡಿದರವನ್ನು ನೀಡುತ್ತದೆ. ಇದು ಎಸ್‌ಬಿಐ ಸೇರಿದಂತೆ ಇತರ ಹಲವು ಬ್ಯಾಂಕ್‌ಗಳು ತಮ್ಮ ಸ್ಥಿರ ಠೇವಣಿಗಳ -ಎಫ್‌ಡಿ ಮೇಲೆ ನೀಡುವ ಬಡ್ಡಿ ದರಕ್ಕಿಂತ ಹೆಚ್ಚು. ಉದಾಹರಣೆಗೆ SBI ಪ್ರಸ್ತುತ 5 ವರ್ಷಗಳ ಅವಧಿಯೊಂದಿಗೆ ಸ್ಥಿರ ಠೇವಣಿಗಳ ಮೇಲೆ ಶೇ 6.50ರಷ್ಟು ಬಡ್ಡಿಯನ್ನು ನೀಡುತ್ತದೆ. ಆದರೆ ಎನ್‌ಎಸ್‌ಸಿಯಲ್ಲಿ ನಿಮಗೆ ಶೇಕಡಾ 7.7 ಬಡ್ಡಿ ಸಿಗುತ್ತದೆ.

1.5 ಲಕ್ಷದವರೆಗೆ ತೆರಿಗೆ ವಿನಾಯಿತಿ : ಸೆಕ್ಷನ್ 80C ಅಡಿ NSC ನಲ್ಲಿ ಹೂಡಿಕೆ ಮಾಡಿದ ಮೊತ್ತ ರೂ. 1.5 ಲಕ್ಷ ತೆರಿಗೆ ವಿನಾಯಿತಿಗೆ ಒಳ ಪಡುತ್ತದೆ.

NSC ಯೋಜನೆಯ ಪ್ರಯೋಜನಗಳು:

ಕನಿಷ್ಠ ಹೂಡಿಕೆ : ನೀವು ಈ ಯೋಜನೆಯಲ್ಲಿ ಕನಿಷ್ಠ 1000 ರೂ.ಗಳೊಂದಿಗೆ ಹೂಡಿಕೆ ಮಾಡಬಹುದು.

ಚಕ್ರಬಡ್ಡಿ: NSC ಯೋಜನೆಯು ಚಕ್ರ ಬಡ್ಡಿಯನ್ನು ಒದಗಿಸುತ್ತದೆ. ಅಂದರೆ ಪ್ರತಿ ವರ್ಷ ನಿಮ್ಮ ಹೂಡಿಕೆಗೆ ಬಡ್ಡಿ ಸಿಗುತ್ತದೆ. ಸಂಚಿತ ಬಡ್ಡಿಯನ್ನು ಮತ್ತೆ ಅಸಲು ಮೊತ್ತಕ್ಕೆ ಸೇರಿಸಲಾಗುತ್ತದೆ. ಇದು ಹೀಗೆ ಐದು ವರ್ಷಗಳವರೆಗೆ ಮುಂದುವರಿಯುತ್ತದೆ. ಈ ಪರಿಣಾಮವಾಗಿ ನಿಮಗೆ ಹೆಚ್ಚಿನ ಆದಾಯವನ್ನು ನೀಡುತ್ತದೆ.

ಎನ್​​ಎಸ್​​ಸಿ ಮೇಲಿನ ಹೂಡಿಕೆಯ ಮೇಲಿನ ಬಡ್ಡಿಗೆ ಯಾವುದೇ ಟಿಡಿಎಸ್ ಇಲ್ಲ: ಬ್ಯಾಂಕ್ ಸ್ಥಿರ ಠೇವಣಿಗಳ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಆದರೆ NSC ಯೋಜನೆಯಲ್ಲಿ, ಹೂಡಿಕೆ ಮಾಡಿ, ಅದರ ಮೇಲೆ ಗಳಿಸಿದ ಬಡ್ಡಿಯ ಮೇಲೆ TDS ಅನ್ನು ಕಡಿತಗೊಳಿಸಲಾಗುವುದಿಲ್ಲ.

ಯಾವ ಅಂಚೆ ಕಚೇರಿಯಲ್ಲಾದರೂ ಖರೀದಿಸಿ : ನೀವು ದೇಶದಾದ್ಯಂತ ಯಾವುದೇ ಅಂಚೆ ಕಚೇರಿಯಲ್ಲಿ NSC ಖಾತೆಯನ್ನು ಬಹಳ ಸುಲಭವಾಗಿ ತೆರೆಯಬಹುದು. ಆದರೆ ಈ NSC ಯೋಜನೆಯು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾಗಿ ನೀವು ಬಯಸಿದಾಗ ಹಣ ವಾಪಸ್​ ಪಡೆಯಲು ಸಾಧ್ಯವಿಲ್ಲ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ, ಸರಿಯಾದ ಕಾರಣ ನೀಡಿ ನಿಮ್ಮ ಹೂಡಿಕೆಯನ್ನು ವಾಪಸ್​ ಪಡೆಯಬಹುದು. ಆದರೆ ಇದಕ್ಕೆ ಷರತ್ತುಗಳು ಅನ್ವಯವಾಗುತ್ತವೆ. ಆಕರ್ಷಕ ಬಡ್ಡಿದರಗಳು ಮತ್ತು ತೆರಿಗೆ ಪ್ರಯೋಜನಗಳೊಂದಿಗೆ, ಸುರಕ್ಷಿತ ಹೂಡಿಕೆಯನ್ನು ಬಯಸುವ ಜನರಿಗೆ ಈ NSC ಯೋಜನೆಯು ಉತ್ತಮ ಆಯ್ಕೆಯಾಗಿದೆ.

ಇದನ್ನು ಓದಿ: ಚಿನ್ನದ ದರದಲ್ಲಿ ಮತ್ತೆ ಹೆಚ್ಚಳ: ಬೆಂಗಳೂರಿನಲ್ಲಿ ಇಂದಿನ ಬೆಲೆ ಎಷ್ಟು ಗೊತ್ತಾ? - GOLD RATE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.