ETV Bharat / business

ಹೂಡಿಕೆಗಳನ್ನು ಆಕರ್ಷಿಸಲು ಕೇಂದ್ರ ಬಜೆಟ್​ನಲ್ಲಿ ಉತ್ಪಾದನಾ ವಲಯವನ್ನು ಉತ್ತೇಜಿಸುವ ಅಗತ್ಯವಿದೆ

ದೇಶದಲ್ಲಿ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಕೇಂದ್ರ ಬಜೆಟ್​ನಲ್ಲಿ ಪ್ರೋತ್ಸಾಹ ನೀಡುವ ಅವಕಾಶವಿದೆ ಎಂದು ಉತ್ಪಾದನಾ ಉದ್ಯಮಗಳು ಭಾವಿಸುತ್ತವೆ. ಇದರಿಂದ ಭಾರತವು ಚೀನಾಕ್ಕೆ ಪರ್ಯಾಯವಾಗ ಬೆಳೆಯಬಹುದಾಗಿದೆ.

author img

By ETV Bharat Karnataka Team

Published : Jan 30, 2024, 8:43 PM IST

Etv Bharatunion-budget-2024-needs-to-bolster-the-manufacturing-sector-to-attract-investments
ಹೂಡಿಕೆಗಳನ್ನು ಆಕರ್ಷಿಸಲು ಕೇಂದ್ರ ಬಜೆಟ್​ನಲ್ಲಿ ಉತ್ಪಾದನಾ ವಲಯವನ್ನು ಉತ್ತೇಜಿಸುವುದು ಅಗತ್ಯEtv Bharat

ನವದೆಹಲಿ: ಫೆಬ್ರವರಿ 1 ರಂದು ಮಂಡಿಸಲಾಗುವ ಕೇಂದ್ರ ಬಜೆಟ್​ನಲ್ಲಿ ಭಾರತದ ಉತ್ಪಾದನಾ ವಲಯವನ್ನು ಬಲಪಡಿಸುವ ಅಗತ್ಯವಿದೆ. ಈ ಮೂಲಕ ಚೀನಾಕ್ಕೆ ಪರ್ಯಾಯವಾಗಿ ಭಾರತವನ್ನು ಮುನ್ನೆಲೆಗೆ ತರಬೇಕಾಗಿದೆ. Apple ಮತ್ತು Foxconn ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿರುವಂತಹ ಯಶಸ್ವಿ ಉದಾಹರಣೆಗಳಿಗೆ ಹೋಲಿಸಿದರೆ, ಬೆಳವಣಿಗೆಯ ಗುರಿಯನ್ನು ಹೊಂದಿರುವ ಹೊಸ ಉತ್ಪಾದನಾ ಕಂಪನಿಗಳಿಗೆ ಬಜೆಟ್​ನಲ್ಲಿ 15% ಅನುಕೂಲಕರ ತೆರಿಗೆ ದರವನ್ನು ವಿಸ್ತರಿಸಬೇಕು.

ಇದರೊಂದಿಗೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಒಟ್ಟಾರೆ ಆರ್ಥಿಕ ಕುಸಿತದಂತಹ ವಿವಿಧ ಕಾರಣಗಳಿಂದಾಗಿ ಕ್ಷೀಣಿಸುತ್ತಿರುವ ರಫ್ತುಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯತಂತ್ರದ ವಿಧಾನವನ್ನು ಅನುಸರಿಸಬೇಕು.

ರಫ್ತು ಮತ್ತು ಮೇಕ್ ಇನ್ ಇಂಡಿಯಾ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2025ರ ವೇಳೆಗೆ ಭಾರತವನ್ನು 300 ಬಿಲಿಯನ್ ಡಾಲರ್ ಪವರ್‌ಹೌಸ್ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿರುವುದರಿಂದ, ರಫ್ತು ಚಟುವಟಿಕೆಗಳ ಮೂಲಕ ಗಣನೀಯ ಭಾಗ, ಅಂದರೆ ಸುಮಾರು 120 ಬಿಲಿಯನ್ ಡಾಲರ್ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಉತ್ಪಾದನಾ ವಲಯಕ್ಕೆ ನೀಡುವ ಉತ್ತೇಜನೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಗುರಿಗಳಿಗೆ ಕೊಡುಗೆ ನೀಡುತ್ತದೆ.

ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ): ಸುಸ್ಥಿರ ಬೆಳವಣಿಗೆ ಹೆಚ್ಚಿಸಲು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು. ಉದ್ಯಮದ ಒಂದು ವಿಭಾಗವು ಡಿಸೈನ್ ಮತ್ತು ಇನ್ನೋವೇಶನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ ಆಗಿ ಪರಿವರ್ತಿಸುವುದರಿಂದ ಉತ್ಪಾದನಾ ರಂಗಕ್ಕೆ ಹೂಡಿಕೆಗಳನ್ನು ಪ್ರೋತ್ಸಾಹಿಸುವುದಲ್ಲದೇ ಸಂಶೋಧನೆ ಮತ್ತು ಅಭಿವೃದ್ಧಿಗೂ ಬಂಡವಾಳ ಹರಿದು ಬರುವಂತೆ ಮಾಡಿದೆ. ಈ ಬದಲಾವಣೆಯು ನಾವೀನ್ಯತೆಯನ್ನು ಹೆಚ್ಚಿಸುತ್ತದೆ, ಅಂತಿಮವಾಗಿ ಜಾಗತಿಕವಾಗಿ ಭಾರತೀಯ ಕೈಗಾರಿಕೆಗಳ ಸ್ಪರ್ಧಾತ್ಮಕತೆಯನ್ನು ವೃದ್ಧಿಸುತ್ತದೆ.

ಕಡಿಮೆ ತೆರಿಗೆ ಪದ್ಧತಿ: ಜಾಗತಿಕ ಉತ್ಪಾದನೆಗೆ ಭಾರತವನ್ನು ಉತ್ತೇಜಿಸಲು ಮತ್ತು ಬೆಂಬಲಿಸುವ ಸಲುವಾಗಿ, ಹೊಸ ಉತ್ಪಾದನಾ ಕಂಪನಿಗಳಿಗೆ ಕಡಿಮೆ ತೆರಿಗೆ ದರ ನಿಬಂಧನೆಯನ್ನು ಕನಿಷ್ಠ 5 ವರ್ಷಗಳವರೆಗೆ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಧ್ರುವ ಅಡ್ವೈಸರ್ಸ್​ನ ಕಾರ್ಯನಿರ್ವಾಹಕ ಅಭಿಪ್ರಾಯಪಟ್ಟಿದ್ದಾರೆ.

ಸಿಐಟಿ (ಎ) ಮೇಲ್ಮನವಿಗಳ ಸಮಸ್ಯೆ: ತೆರಿಗೆಗೆ ಸಂಬಂಧಿಸಿದಂತೆ ಮೇಲ್ಮನವಿಗಳ ವಿಲೇವಾರಿ ತುರ್ತು ಮತ್ತು ಕಾನೂನುಬದ್ಧವಾಗಿ ಕಡ್ಡಾಯ ಪರಿಹಾರದ ಅಗತ್ಯವನ್ನು ಬಜೆಟ್​ ನಿರೀಕ್ಷೆ ಒತ್ತಿ ಹೇಳುತ್ತಿದೆ. ಆದಾಯ ತೆರಿಗೆ ಆಯುಕ್ತರು ಮೇಲ್ಮನವಿಗಳನ್ನು ವಿಲೇವಾರಿ ಮಾಡದ ಪ್ರಸ್ತುತ ಪರಿಸ್ಥಿತಿಯು ಬ್ಯಾಕ್‌ಲಾಗ್‌ಗೆ ಕಾರಣವಾಗುತ್ತದೆ. ತೆರಿಗೆದಾರರ ಶೇ 20ರಷ್ಟು ಠೇವಣಿಗಳಿಂದ ಹಣವನ್ನು ಲಾಕ್ ಮಾಡಲಾಗಿದೆ ಮತ್ತು ತೆರಿಗೆ ಇಲಾಖೆಗೆ ಪಾವತಿಸಬೇಕಾದ ಆದಾಯವನ್ನು ತಡೆಹಿಡಿಯಲಾಗಿದೆ. ಈ ಸಮಸ್ಯೆ ನಿವಾರಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಟಿಡಿಎಸ್, ಟಿಸಿಎಸ್​ನಲ್ಲಿ ಕಂಪ್ಲಿಯನ್ಸ್ ಬರ್ಡನ್​: ಟಿಡಿಎಸ್ ಮತ್ತು ಟಿಸಿಎಸ್ ಪಾವತಿಗೆ ಸಂಬಂಧಿಸಿದಂತೆ ತೆರಿಗೆದಾರರ ಮೇಲೆ ಹೆಚ್ಚಿದ ಕಂಪ್ಲಿಯನ್ಸ್ ಹೊರೆಯನ್ನು ಬಜೆಟ್​ನಲ್ಲಿ ಪರಿಹರಿಸುವ ನಿರೀಕ್ಷೆಯಿದೆ. ತೆರಿಗೆ ಆದಾಯದ ಮೇಲೆ ಪರಿಣಾಮ ಬೀರದೇ ಕಂಪ್ಲಿಯನ್ಸ್ ಹೊರೆಯನ್ನು ಕಡಿಮೆ ಮಾಡಲು ಈ ನಿಬಂಧನೆಗಳನ್ನು ತರ್ಕಬದ್ಧಗೊಳಿಸಲು ಪ್ರಸ್ತಾವನೆ ಸೂಚಿಸುತ್ತದೆ. ಪ್ರಕ್ರಿಯೆ ಸುಗಮಗೊಳಿಸುವುದು ಮತ್ತು ಅನಗತ್ಯ ದಾವೆಗಳಲ್ಲಿ ತೆರಿಗೆಗಳನ್ನು ಕಡಿತಗೊಳಿಸುವವರ ಪಾಲ್ಗೊಳ್ಳುವಿಕೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ಒಇಸಿಡಿಯ ಎರಡು ಸ್ತಂಭಗಳ ವಿಧಾನ: ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (ಒಇಸಿಡಿ) ಟು ಪಿಲ್ಲರ್ ಅಪ್ರೋಚ್‌ ಅನುಗುಣವಾಗಿ ದೇಶೀಯ ಕಾನೂನುಗಳನ್ನು ಪರಿಚಯಿಸುವುದರ ಮೇಲೆ ಬಜೆಟ್ ನಿರೀಕ್ಷೆ ಕೇಂದ್ರೀಕೃತವಾಗಿದೆ. ಮುಂಬರುವ ಬಜೆಟ್ ನಲ್ಲಿ ಈ ನಿಬಂಧನೆಗಳ ಅನುಷ್ಠಾನವನ್ನು ಅಂತಾರಾಷ್ಟ್ರೀಯ ಸಮುದಾಯವು ಹೆಚ್ಚು ನಿರೀಕ್ಷಿಸುತ್ತದೆ ಮತ್ತು ಸೂಕ್ಷ್ಮವಾಗಿ ಗಮನಿಸುತ್ತದೆ.

ಸಾರ್ವಜನಿಕ ವಲಯದ ಉದ್ದಿಮೆಗಳ ಬಂಡವಾಳ ಹಿಂತೆಗೆತ ಮತ್ತು ಲಾಭ ಪಡೆಯುವುದು: ಬಂಡವಾಳ ಹಿಂತೆಗೆತವನ್ನು ತ್ವರಿತಗೊಳಿಸಲು, ಪಿಎಸ್​ಯು(ಸಾರ್ವಜನಿಕ ವಲಯದ ಉದ್ದಿಮೆಗಳು) ಗಳ ಕಾರ್ಯಕ್ಷಮತೆಯನ್ನು ಮತ್ತು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಿಎಸ್​ಯು ಷೇರುಗಳಲ್ಲಿನ ಸಕಾರಾತ್ಮಕ ವೇಗವನ್ನು ಹೆಚ್ಚಿಸಲು ಬಜೆಟ್ ಒತ್ತು ನೀಡುತ್ತದೆ ಮತ್ತು ಸ್ಪಷ್ಟ ನಿರ್ದೇಶನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಕಚೇರಿಗಳನ್ನು ಸ್ಥಾಪಿಸಲು ಆಹ್ವಾನಿಸುವ ಗಿಫ್ಟ್ ಸಿಟಿ ಉಪಕ್ರಮಕ್ಕೆ ಆರ್​ಬಿಐ ಅನುಮೋದನೆ ಬಾಕಿ ಇದೆ.

ಇದನ್ನೂ ಓದಿ: ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ 7ರಷ್ಟು ಬೆಳವಣಿಗೆ: ಹಣಕಾಸು ಇಲಾಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.