What is the ticket cancelation rules?: ನೀವು ರೈಲು ಟಿಕೆಟ್ ಅನ್ನು ಬುಕ್ ಮಾಡುತ್ತಿದ್ದರೆ, ಟಿಕೆಟ್ ರದ್ದುಗೊಳಿಸುವ ನಿಯಮಗಳನ್ನು ಖಂಡಿತವಾಗಿ ಅರ್ಥಮಾಡಿಕೊಳ್ಳಿ. ಸಂಪೂರ್ಣ ಮಾಹಿತಿ ಲಭ್ಯ ಇಲ್ಲದೇ ಇದ್ದರೆ ಟಿಕೆಟ್ ರದ್ದತಿ ಸಮಯದಲ್ಲಿ ನೀವು ಹೆಚ್ಚಿನ ಹಣವನ್ನು ಪಾವತಿಸಬೇಕಾಗಬಹುದು.
ಟಿಕೆಟ್ ರದ್ದತಿಯಲ್ಲಿ ರೈಲು ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಟಿಕೆಟ್‌ಗಳನ್ನು ಯಾವಾಗ ರದ್ದುಗೊಳಿಸಲಾಗುತ್ತದೆ?, ಇದರ ಬಗ್ಗೆ ನಿಮಗೆ ಅರಿವಿಲ್ಲದಿದ್ರೆ ನಿಮ್ಮ ಹೆಚ್ಚಿನ ಹಣವು ವ್ಯರ್ಥವಾಗಬಹುದು. ಕಳೆದ ಕೆಲವು ವರ್ಷಗಳಲ್ಲಿ ರೈಲ್ವೆ ಇಲಾಖೆ ಟಿಕೆಟ್ ರದ್ದತಿಯಿಂದ ಬರೋಬ್ಬರಿ 1200 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ.
ಟಿಕೆಟ್ ರದ್ದತಿಯಿಂದ 1229 ಕೋಟಿ ರೂಪಾಯಿ ಆದಾಯ: ರೈಲಿನಲ್ಲಿ ವೇಟಿಂಗ್ ಸಮಸ್ಯೆ ಇರುವ ಕಾರಣ ಹೆಚ್ಚಿನವರು ಮುಂಗಡವಾಗಿ ರೈಲು ಟಿಕೆಟ್ ಬುಕ್ ಮಾಡುತ್ತಾರೆ. 2021 ಮತ್ತು 2024 ರ ನಡುವೆ ರೈಲ್ವೆ ವೇಟಿಂಗ್ ಟಿಕೆಟ್ ರದ್ದುಗೊಳಿಸುವಿಕೆಯಿಂದ 1229 ಕೋಟಿ ರೂಪಾಯಿಗಳ ಆದಾಯವನ್ನು ರೈಲ್ವೆ ಇಲಾಖೆ ಗಳಿಸಿದೆ. ಆರ್‌ಟಿಐ ಅರ್ಜಿಯ ನಂತರ ರೈಲ್ವೆಯು ಆರ್‌ಟಿಐ ಕಾರ್ಯಕರ್ತ ವಿವೇಕ್ ಪಾಂಡೆ ಅವರಿಗೆ ಈ ಮಾಹಿತಿಯನ್ನು ನೀಡಿದೆ. ನೀವು ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದರೆ, ಕೆಲವು ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕವಾಗಿದೆ.
ಟಿಕೆಟ್ ರದ್ದತಿ ಬಳಿಕ ವಾಪಸ್ ಬರುವ ಹಣವೆಷ್ಟು?: ನೀವು 48 ಗಂಟೆಗಳ ಮುಂಚಿತವಾಗಿ ರೈಲ್ವೆ ಟಿಕೆಟ್ ತೆಗೆದುಕೊಂಡಿದ್ದರೆ ಮತ್ತು ನಿಮ್ಮ ಬರ್ತ್ ಅನ್ನು ಟಿಕೆಟ್‌ನಲ್ಲಿ ದೃಢೀಕರಿಸಿದರೆ, ನೀವು ಪ್ರಯಾಣದ 48 ಗಂಟೆಗಳ ಮೊದಲು ಅದನ್ನು ರದ್ದುಗೊಳಿಸಲು ಬಯಸಿದರೆ.. ನೀವು ಫಸ್ಟ್ ಎಸಿಯಲ್ಲಿ ರೂ.250, ಸೆಕೆಂಡ್ ಎಸಿಯಲ್ಲಿ ರೂ.200, ಥರ್ಡ್ ಎಸಿಯಲ್ಲಿ ರೂ.180, ಸೆಕೆಂಡ್ ಕ್ಲಾಸ್ ಸ್ಲೀಪರ್‌ನಲ್ಲಿ ರೂ.120 ಮತ್ತು ಸಾಮಾನ್ಯ ಟಿಕೆಟ್‌ನಲ್ಲಿ ರೂ.60 ಕಡಿಮೆ ಪಡೆಯುತ್ತೀರಿ.
ಓದಿ: ರಾಮೋಜಿ ಫಿಲಂ ಸಿಟಿ ನೋಡುವ ಸದವಕಾಶ: ಇಂದೇ ಬುಕ್ ಮಾಡಿ IRCTC ಗೋಲ್ಡನ್ ಟ್ರಯಾಂಗಲ್ ಟೂರ್!
ದೃಢೀಕೃತ ಟಿಕೆಟ್ ರದ್ದತಿ ಮತ್ತು ರೈಲಿನ ಓಡಾಟದ ನಡುವಿನ ಸಮಯವು 48 ರಿಂದ 12 ಗಂಟೆಗಳವರೆಗೆ ಕಡಿಮೆಯಾದರೆ, ನಿಮ್ಮ ಮರುಪಾವತಿ ಮೊತ್ತವೂ ಕಡಿಮೆಯಾಗುತ್ತದೆ. 48 ಮತ್ತು 12 ಗಂಟೆಗಳ ನಡುವೆ ನೀವು ಮೇಲೆ ನೀಡಲಾದ ಮೊತ್ತದ ಮೇಲೆ 25 ಪ್ರತಿಶತ ಹೆಚ್ಚು ಪಾವತಿಸಬೇಕಾಗುತ್ತದೆ.
12 ರಿಂದ 4 ಗಂಟೆಗಳ ಪ್ರಯಾಣದ ನಡುವೆ ದೃಢೀಕೃತ ಟಿಕೆಟ್ ರದ್ದುಗೊಳಿಸಿದರೆ, ನೀವು ಮೇಲಿನ ಮೊತ್ತದ ಶೇ.50ರಷ್ಟು ಮತ್ತು ಹೆಚ್ಚುವರಿ ವೆಚ್ಚಗಳನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಟಿಕೆಟ್ ಅನ್ನು 4 ಗಂಟೆಗಳ ಮುಂಚಿತವಾಗಿ ರದ್ದುಗೊಳಿಸಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂದು ಭಾವಿಸೋಣ, ಅಂತಹ ಪರಿಸ್ಥಿತಿಯಲ್ಲಿ ರೈಲ್ವೆ ನಿಮಗೆ ಯಾವುದೇ ಹಣವನ್ನು ಪಾವತಿಸುವುದಿಲ್ಲ.
ಮುಂಚಿತವಾಗಿ ಟಿಕೆಟ್ ರದ್ದುಗೊಳಿಸುವ ಮಾಹಿತಿ: ಟಿಕೆಟ್ ಆರ್ಎಸಿ ಅಥವಾ ವೇಟಿಂಗ್ ಲಿಸ್ಟ್ನಲ್ಲಿದ್ದರೆ ರೈಲು ನಿರ್ಗಮಿಸುವ ಸಮಯಕ್ಕಿಂತ 3 ಗಂಟೆಗಳ ಮೊದಲು ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸುವ ಹಕ್ಕನ್ನು ನೀವು ಹೊಂದಿರುತ್ತೀರಿ. ಇದರಲ್ಲಿಯೂ ಸಹ ರೈಲ್ವೆ ಖಂಡಿತವಾಗಿಯೂ ನಿಮ್ಮಿಂದ ಟಿಕೆಟ್ ಮೊತ್ತವನ್ನು ಕಡಿತಗೊಳಿಸುತ್ತದೆ. ಇದಾದ ನಂತರವೂ ನಿಮಗೆ ಟಿಕೆಟ್ ರದ್ದು ಮಾಡಲು ಸಾಧ್ಯವಾಗದಿದ್ದರೆ, ನಿಮಗೆ ಯಾವುದೇ ಹಣವನ್ನು ಪಾವತಿಸಲಾಗುವುದಿಲ್ಲ.
ಒಂದು ತಿಂಗಳ ಮುಂಚಿತವಾಗಿಯೇ ರೈಲಿನ ಟಿಕೆಟ್ ಬುಕ್ ಮಾಡುತ್ತೇವೆ. ಏಕೆಂದರೆ ರೈಲಿನಲ್ಲಿ ಟಿಕೆಟ್ ದೊರೆಯುವುದು ಬಹಳ ಕಷ್ಟ. ನಷ್ಟ ಅನುಭವಿಸುತ್ತೇವೆ ಎಂಬುದು ಗೊತ್ತಿದ್ದರೂ ಸಹ ನಾವು ಟಿಕೆಟ್ ಬುಕ್ ಮಾಡುತ್ತೇವೆ. ಕಾರಣ ಏರುತ್ತಿರುವ ಹಣದುಬ್ಬರದಲ್ಲಿ ಪ್ರಯಾಣಿಸಲು ರೈಲ್ವೆಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ರಸ್ತೆ ಪ್ರಯಾಣವು ರೈಲ್ವೆ ಪ್ರಯಾಣಕ್ಕಿಂತ ಹೆಚ್ಚು ದುಬಾರಿಯಾಗಿದೆ. ಅದಕ್ಕಾಗಿಯೇ ಜನರು ರೈಲಿನಲ್ಲಿ ಪ್ರಯಾಣಿಸುವುದು ಸಹಜ.
ಓದಿ: ತತ್ಕಾಲ್ ಟಿಕೆಟ್ ಬುಕ್ ಆಗುತ್ತಿಲ್ಲವೇ?, ಹೀಗೆ ಮಾಡಿದ್ರೆ ಕನ್ಫರ್ಮ್ ಸುಲಭ! - IRCTC Tatkal Ticket