ETV Bharat / business

ನೆಕ್ಸಾನ್, ಟಿಯಾಗೊ ಎಲೆಕ್ಟ್ರಿಕ್ ಕಾರುಗಳ ಬೆಲೆ ಕಡಿತಗೊಳಿಸಿದ ಟಾಟಾ ಮೋಟರ್ಸ್​ - ಟಾಟಾ ಮೋಟರ್ಸ್​

ಟಾಟಾ ಮೋಟರ್ಸ್​ ತನ್ನ ಎರಡು ಎಲೆಕ್ಟ್ರಿಕ್ ಕಾರುಗಳ ಬೆಲೆಯನ್ನು ಕಡಿತಗೊಳಿಸಿದೆ.

Tata Motors
Tata Motors
author img

By PTI

Published : Feb 13, 2024, 6:05 PM IST

ನವದೆಹಲಿ: ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವಾಹನಗಳಾದ ನೆಕ್ಸಾನ್.ಇವಿ ಮತ್ತು ಟಿಯಾಗೊ.ಇವಿ ಕಾರುಗಳ ಬೆಲೆಯನ್ನು 1.2 ಲಕ್ಷ ರೂ.ಗಳವರೆಗೆ ಕಡಿತಗೊಳಿಸಿದೆ. ನೆಕ್ಸಾನ್.ಇವಿ ಬೆಲೆಯನ್ನು 1.2 ಲಕ್ಷ ರೂ.ಗಳವರೆಗೆ ಕಡಿತಗೊಳಿಸಲಾಗಿದ್ದು, ಈಗ ಈ ಮಾಡೆಲ್ 14.49 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಹಾಗೆಯೇ ಟಿಯಾಗೊ.ಇವಿ ಬೆಲೆಯನ್ನು 70,000 ರೂ.ಗಳವರೆಗೆ ಕಡಿಮೆ ಮಾಡಲಾಗಿದ್ದು, ಈ ಮಾಡೆಲ್ ಈಗ 7.99 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಸಿಗಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಬ್ಯಾಟರಿಗಳ ವೆಚ್ಚ ಕಡಿಮೆಯಾದ ಹಿನ್ನೆಲೆಯಲ್ಲಿ ಕಂಪನಿ ಕಾರುಗಳ ಬೆಲೆ ಕಡಿಮೆ ಮಾಡಿದೆ.

"ಬ್ಯಾಟರಿ ವೆಚ್ಚವು ಇವಿಯ ಒಟ್ಟಾರೆ ವೆಚ್ಚದ ಗಣನೀಯ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಸೆಲ್ ಬೆಲೆಗಳು ಕಡಿಮೆಯಾಗಿರುವುದರಿಂದ ಮತ್ತು ಭವಿಷ್ಯದಲ್ಲಿ ಅವುಗಳ ಬೆಲೆ ಇನ್ನಷ್ಟು ಕಡಿಮೆಯಾಗಬಹುದು ಎಂಬುದನ್ನು ಪರಿಗಣಿಸಿ ಈ ಪ್ರಯೋಜನಗಳನ್ನು ನಾವು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದ್ದೇವೆ" ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (ಟಿಪಿಇಎಂ) ವಿಭಾಗದ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ವೇಗವಾಗಿ ಬೆಳೆದಿದ್ದರೂ, ದೇಶದ ಜನತೆ ಎಲೆಕ್ಟ್ರಿಕ್ ವಾಹನಗಳನ್ನೇ ಹೆಚ್ಚಾಗಿ ಬಳಸುವಂತೆ ಮಾಡುವುದು ಕಂಪನಿಯ ಧ್ಯೇಯವಾಗಿದೆ ಎಂದು ಅವರು ಹೇಳಿದರು. ಎಲೆಕ್ಟ್ರಿಕ್ ವಾಹನಗಳ ಮಾರಾಟದ ಬೆಳವಣಿಗೆ ವೇಗವಾಗಿದೆ ಮತ್ತು ಒಟ್ಟಾರೆ ಪ್ರಯಾಣಿಕ ವಾಹನ ಉದ್ಯಮದ ಬೆಳವಣಿಗೆಯನ್ನು ಗಣನೀಯವಾಗಿ ವಿಸ್ತರಿಸುತ್ತಿವೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

2023 ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ 8ರಷ್ಟು ಏರಿಕೆಯಾಗಿದ್ದರೆ, ಅದರಲ್ಲಿ ಎಲೆಕ್ಟ್ರಿಕ್ ವಾಹನಗಳ ವಿಭಾಗವು ಶೇಕಡಾ 90 ಕ್ಕಿಂತ ಹೆಚ್ಚು ಬೆಳೆದಿದೆ. ಈ ಬೆಳವಣಿಗೆಯ ವೇಗವು 2024 ರಲ್ಲಿಯೂ ಮುಂದುವರೆದಿದ್ದು, ಇವಿ ಮಾರಾಟವು ಜನವರಿ 2024 ರಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 100 ರಷ್ಟು ಬೆಳವಣಿಗೆ ದಾಖಲಿಸಿದೆ. ಶೇಕಡಾ 70 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರುವ ಟಿಪಿಇಎಂ ವೇಗವಾಗಿ ಬೆಳೆಯುತ್ತಿರುವ ಈ ವಿಭಾಗದಲ್ಲಿ ಮುಂಚೂಣಿಯಲ್ಲಿದೆ ಎಂದು ಟಾಟಾ ಮೋಟರ್ಸ್​ ಹೇಳಿದೆ.

ಟಾಟಾ ಟಿಯಾಗೊ ಇವಿಯನ್ನು ಅಕ್ಟೋಬರ್ 2022 ರಲ್ಲಿ 8.49 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು. ಟಾಟಾ ಟಿಯಾಗೊ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. ಮೊದಲನೆಯದು 24 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದ್ದು, ಇದರ ಮೈಲೇಜ್ 315 ಕಿ.ಮೀ. ಆಗಿದೆ. ಮತ್ತೊಂದು ಮಾಡೆಲ್ 19.2 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು ಇದು 250 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 51 ಸಾವಿರ ವಿದ್ಯಾರ್ಥಿಗಳ 17 ಕೋಟಿ ರೂ. ಶುಲ್ಕ ಮನ್ನಾ ಮಾಡಿದ ಫಿಸಿಕ್ಸ್​ ವಾಲಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.