ETV Bharat / business

ಹೊಸೂರಿನ ಟಾಟಾ ಐಫೋನ್​ ಕಾರ್ಖಾನೆ 2024ರ ವರ್ಷಾಂತ್ಯಕ್ಕೆ ಆರಂಭ ಸಾಧ್ಯತೆ: 50 ಸಾವಿರ ಜನರಿಗೆ ಉದ್ಯೋಗ - Hosur Tata iPhone Factory - HOSUR TATA IPHONE FACTORY

ತಮಿಳುನಾಡಿನ ಹೊಸೂರಿನಲ್ಲಿ ಟಾಟಾ ಗ್ರೂಪ್ ಹೊಸ ಐಫೋನ್ ಜೋಡಣಾ ಘಟಕವನ್ನು ಆರಂಭಿಸಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Aug 20, 2024, 4:14 PM IST

ನವದೆಹಲಿ: 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಟಾಟಾ ಗ್ರೂಪ್ ದೇಶದಲ್ಲಿ ಹೊಸ ಐಫೋನ್ ಜೋಡಣೆ ಘಟಕವನ್ನು ಸ್ಥಾಪಿಸಲು ಸಜ್ಜಾಗಿದೆ. ಹೊಸ ಕಾರ್ಖಾನೆ 2024ರ ವರ್ಷಾಂತ್ಯಕ್ಕೆ ಆರಂಭವಾಗುವ ನಿರೀಕ್ಷೆಯಿದೆ. ತಮಿಳುನಾಡಿನ ಹೊಸೂರಿನಲ್ಲಿ ಆರಂಭವಾಗಲಿರುವ ಈ ಹೊಸ ಐಫೋನ್ ಜೋಡಣೆ ಕಾರ್ಖಾನೆಯು 50,000ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ. ಹೆಚ್ಚಾಗಿ ಮಹಿಳಾ ಉದ್ಯೋಗಿಗಳನ್ನೇ ಕಂಪನಿ ನೇಮಿಸಿಕೊಳ್ಳುವ ಸಾಧ್ಯತೆಯಿದೆ.

250 ಎಕರೆ ವಿಸ್ತೀರ್ಣದ ಹೊಸೂರು ಘಟಕವು ಕೆಲ ವರ್ಷಗಳ ಹಿಂದೆ ಟಾಟಾ ಸ್ಥಾಪಿಸಿದ ಘಟಕದಲ್ಲಿನ ಬಿಡಿಭಾಗಗಳನ್ನು ಬಳಸಿಕೊಂಡು ಐಫೋನ್​ಗಳನ್ನು ತಯಾರಿಸಲಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಹೊಸ ಕಾರ್ಖಾನೆಗಾಗಿ 6,000 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದೆ ಎಂದು ವರದಿಯಾಗಿದೆ.

ಟಾಟಾ ಗ್ರೂಪ್ ಕಳೆದ ವರ್ಷದ ಅಕ್ಟೋಬರ್​ನಲ್ಲಿ ತೈವಾನ್ ಎಲೆಕ್ಟ್ರಾನಿಕ್ಸ್ ತಯಾರಕ ಕಂಪನಿ ವಿಸ್ಟ್ರಾನ್‌ನ ಭಾರತದಲ್ಲಿನ ಕಾರ್ಖಾನೆಗಳನ್ನು 125 ಮಿಲಿಯನ್ ಡಾಲರ್​ ನೀಡಿ ಸ್ವಾಧೀನಪಡಿಸಿಕೊಂಡಿದೆ. ಫಾಕ್ಸ್ ಕಾನ್, ಟಾಟಾ ಮತ್ತು ಪೆಗಾಟ್ರಾನ್ ಇವು ಭಾರತದಲ್ಲಿ ಐಫೋನ್ ತಯಾರಿಕಾ ಗುತ್ತಿಗೆ ಕಂಪನಿಗಳಾಗಿವೆ.

ಟಾಟಾ ಗ್ರೂಪ್ ಭಾರತದ ಅತಿದೊಡ್ಡ ಐಫೋನ್ ಜೋಡಣೆ ಘಟಕವನ್ನು ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಿಸಲು ಯೋಜಿಸುತ್ತಿದೆ ಎಂದು ಕಳೆದ ವರ್ಷ ಡಿಸೆಂಬರ್​ನಲ್ಲಿ ಪ್ರಥಮ ಬಾರಿಗೆ ಮಾಹಿತಿ ದೊರಕಿತ್ತು. ಟಾಟಾ ಈಗಾಗಲೇ ಕರ್ನಾಟಕದಲ್ಲಿ ಐಫೋನ್ ಉತ್ಪಾದನಾ ಘಟಕವನ್ನು ನಿರ್ವಹಿಸುತ್ತಿದ್ದು, ಇದನ್ನು ವಿಸ್ಟ್ರಾನ್​ನಿಂದ ಖರೀದಿಸಿದೆ. ಆ್ಯಪಲ್ ಕಂಪನಿಯು ಭಾರತದಲ್ಲಿ ವರ್ಷಕ್ಕೆ 50 ದಶಲಕ್ಷಕ್ಕೂ ಹೆಚ್ಚು ಐಫೋನ್​ಗಳನ್ನು ತಯಾರಿಸುವ ಗುರಿಯನ್ನು ಹೊಂದಿರುವುದರಿಂದ ತನ್ನ ಉತ್ಪಾದನೆಯನ್ನು ಹೆಚ್ಚಿಸುವುದರಲ್ಲಿ ನಿರತವಾಗಿದೆ.

ಏತನ್ಮಧ್ಯೆ, ಆ್ಯಪಲ್ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ತನ್ನ ಕಾರ್ಖಾನೆಯಲ್ಲಿ (ಫಾಕ್ಸ್ ಕಾನ್ ನಿರ್ವಹಿಸುವ ಕಂಪನಿ) ಇತ್ತೀಚಿನ ಐಫೋನ್ 16 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳನ್ನು ದೇಶದಲ್ಲಿಯೇ ತಯಾರಿಸಲು ಸಾವಿರಾರು ಕಾರ್ಮಿಕರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ಜಾಗತಿಕವಾಗಿ ಲಾಂಚ್​ ಆಗುವ ದಿನದಂದೇ ಐಫೋನ್ 16 ಭಾರತದ ಮಾರುಕಟ್ಟೆಗೂ ಲಾಂಚ್ ಆಗಲಿದೆ. ಕಳೆದ ವರ್ಷ ಐಫೋನ್ 15 ಕೂಡ ಇದೇ ರೀತಿ ಜಾಗತಿಕವಾಗಿ ಬಿಡುಗಡೆಯಾದ ದಿನದಂದೇ ಭಾರತದಲ್ಲಿ ಲಭ್ಯವಾಗಿತ್ತು.

ಫಾಕ್ಸ್ ಕಾನ್ ಜಾಗತಿಕವಾಗಿ ಆ್ಯಪಲ್​ನ ಪ್ರಮುಖ ಪೂರೈಕೆದಾರನಾಗಿದ್ದು, ಇಲ್ಲಿಯವರೆಗೆ ಭಾರತದಲ್ಲಿ 1.4 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಕಳೆದ ಹಣಕಾಸು ವರ್ಷದವರೆಗೆ ಭಾರತದಲ್ಲಿ ಫಾಕ್ಸ್​ಕಾನ್​ನ ವ್ಯವಹಾರವು 10 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ ಎಂದು ಅದರ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ಹೇಳಿದ್ದಾರೆ.

ಇದನ್ನೂ ಓದಿ: 7.3 ಕೋಟಿ ಇಂಟರ್​ನೆಟ್​ ಬಳಕೆದಾರರು ಹೆಚ್ಚಳ: 120 ಕೋಟಿಗೆ ತಲುಪಿದ ಫೋನ್​ ಬಳಕೆದಾರರ ಸಂಖ್ಯೆ - India Internet Subscribers

ETV Bharat Logo

Copyright © 2024 Ushodaya Enterprises Pvt. Ltd., All Rights Reserved.