ETV Bharat / business

ಇದು ಗಟ್ಟಿ ಮನಸ್ಸಿನ ನಿರ್ಧಾರ! 15000 ರೂ. ಸಂಬಳದ ಕೆಲಸ ಬಿಟ್ಟು, ಈಗ 10 ಕೋಟಿ ವಹಿವಾಟು ನಡೆಸುತ್ತಿರುವ ಯುವಕ; ಹಲವರಿಗೆ ಅನ್ನದಾತ! - SUCCESS STORY OF AJAY RAI - SUCCESS STORY OF AJAY RAI

ಕೆಲ ಯುವಕರು ತಮ್ಮ ಪ್ರತಿಭೆಯಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಳ್ಳುತ್ತಿದ್ದಾರೆ. ಬಕ್ಸರ್ ಜಿಲ್ಲೆಯ ಉದ್ಯಮಿ ಅಜಯ್ ರೈ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ್ದಾರೆ. ಅಜಯ್ ರೈ ಇಂದು ಯುವಜನತೆಗೆ ಸ್ಪೂರ್ತಿಯ ಚಿಲುಮೆ ಕೂಡಾ ಆಗಿದ್ದಾರೆ.

SUCCESS STORY OF AJAY RAI
10 ಕೋಟಿ ವಹಿವಾಟು ನಡೆಸುತ್ತಿರುವ ಯುವಕ (ETV Bharat)
author img

By ETV Bharat Karnataka Team

Published : Aug 30, 2024, 9:53 AM IST

ಪಾಟ್ನಾ: ಬಿಹಾರದ ಯುವಕರು ತಮ್ಮ ಪ್ರತಿಭೆಯನ್ನು ಹಲವು ರಂಗಗಳಲ್ಲಿ ಸಾಬೀತುಪಡಿಸಿದ್ದಾರೆ. ಬಕ್ಸರ್ ಜಿಲ್ಲೆಯ ಅರೇಲಾ ಗ್ರಾಮದ ನಿವಾಸಿ ಅಜಯ್ ರೈ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಅಜಯ್ ರೈ, ಸಂಶೋಧನಾ ಅಭಿವೃದ್ಧಿಯಲ್ಲಿ ಪರಿಣತಿ ಪಡೆದುಕೊಂಡಿದ್ದಾರೆ. ಈ ಮೂಲಕ ಅನೇಕ ಯುವಕರಿಗೆ ಉದ್ಯೋಗ ನೀಡಿ ಅನ್ನದಾತರಾಗಿ ರೂಪುಗೊಂಡಿದ್ದಾರೆ.

ತಂದೆ ದೆಹಲಿಯಲ್ಲಿ ಶಿಕ್ಷಕ: ಅಜಯ್ ರೈ ಅವರ ತಂದೆ ವ್ಯಾಸ್ ದೇವ್ ರೈ ದೆಹಲಿಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ತಂದೆಯ ಮಾರ್ಗದರ್ಶನದಲ್ಲಿ ರೈ ಶಿಕ್ಷಣ ಪಡೆದುಕೊಂಡರು. ವ್ಯಾಸ್ ದೇವ್ ರೈ ಮಧ್ಯಮ ವರ್ಗದ ಕುಟುಂಬದಿಂದ ಬಂದವರು ಮತ್ತು ಜೀವನೋಪಾಯಕ್ಕಾಗಿ ದೆಹಲಿಯಲ್ಲಿ ನೆಲೆ ಕಂಡುಕೊಂಡವರು. ಅಜಯ್ ರೈ ಓದಿದ್ದು ದೆಹಲಿಯಲ್ಲಿ. 2013ರರಲ್ಲಿ ಅಜಯ್ ರೈ ಬೋರ್ಡ್ ಪರೀಕ್ಷೆ ಪಾಸಾಗಿದ್ದರು. 2017ರಲ್ಲಿ ಪಂಜಾಬ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದು ಕೊಂಡಿದ್ದಾರೆ. ಅಂದ ಹಾಗೆ ಅಜಯ್ ರೈ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ.

success-story-of-buxar-entrepreneur-ajay-rai-who-left-his-job-and-made-identity-in-field-of-digital-marketing
10 ಕೋಟಿ ವಹಿವಾಟು ನಡೆಸುತ್ತಿರುವ ಯುವಕ (ETV Bharat)

ಎಂಜಿನಿಯರಿಂಗ್ ಮುಗಿಯುತ್ತಲೇ 15000 ರೂ ಸಂಬಳದ ಕೆಲಸ: ಪದವಿ ಮುಗಿಸಿ 2017ರಲ್ಲಿ ₹ 3000 ಇಂಟರ್ನ್‌ಶಿಪ್ ಮಾಡಿ, 15000ಕ್ಕೆ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು ಅಜಯ್‌ ರೈ. ಸುಮಾರು 2 ವರ್ಷಗಳ ಕಾಲ ಕೆಲಸ ಮಾಡಿದ ಅವರಿಗೆ ತಮ್ಮ ಕೆಲಸ ಇದಲ್ಲ, ಉದ್ಯೋಗವೇ ವೃತ್ತಿಯಲ್ಲ, ನಾವು ವಿಭಿನ್ನವಾಗಿ ಏನನ್ನಾದರೂ ಮಾಡಬೇಕು ಎಂಬ ವಿಚಾರ ತಲೆಯಲ್ಲಿ ಹೊಳೆಯಿತು. ಹೀಗಾಗಿ ಸಂಪಾದಿಸಿದ ಕೆಲಸಕ್ಕೆ ಗುಡ್​ ಬೈ ಹೇಳಿದರು.

ತಂದೆಯೊಂದಿಗೆ 6 ತಿಂಗಳು ಮಾತನಾಡಿರಲಿಲ್ಲ; ಅಜಯ್ ರೈ ಕೆಲಸ ಬಿಟ್ಟಾಗ ತಂದೆ ವ್ಯಾಸ್ ದೇವ್ ರೈ ತುಂಬಾ ಕೋಪಗೊಂಡಿದ್ದರು. ಮಗ ಕೈಯಲ್ಲಿದ್ದ ಕೆಲಸ ಬಿಟ್ಟಿದ್ದರಿಂದ ಸುಮಾರು 6 ತಿಂಗಳ ಕಾಲ ಅವರೊಂದಿಗೆ ಮಾತನಾಡಿರಲಿಲ್ಲ. ಅಜಯ್‌ನ ಈ ನಿರ್ಧಾರದಿಂದ ಕುಟುಂಬದ ಇತರ ಸದಸ್ಯರೂ ಸಂತುಷ್ಟರಾಗಿರಲಿಲ್ಲ. ಅಜಯ್​ ಈ ನಿರ್ಧಾರ ಸರಿಯಲ್ಲ ಅಂತಾನೇ ಎಲ್ಲರೂ ಅಂದುಕೊಂಡಿದ್ದರು.

ಅಜಯ್ ರೈ (ETV Bharat)

'ನನಗೆ ತುಂಬಾ ಕೋಪ ಬಂತು': ಮಗ ಕೆಲಸ ಬಿಟ್ಟಿದ್ದರ ಬಗ್ಗೆ ಮಾತನಾಡಿದ ಅಜಯ್ ರೈ ತಂದೆ ರಾಮ್ ವ್ಯಾಸ್ ರೈ, ’’ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದೇನೆ ಮತ್ತು ಮಕ್ಕಳಿಗೆ ತುಂಬಾ ಕಷ್ಟಪಟ್ಟು ಶಿಕ್ಷಣ ನೀಡಿದ್ದೇನೆ. ನನ್ನ ಮಗ ಅಜಯ್ ಇಂಜಿನಿಯರಿಂಗ್ ಮುಗಿಸಿ ಕೆಲಸ ಮಾಡುತ್ತಿದ್ದ, ಆದರೆ ಒಂದು ದಿನ ಬಂದು ನಾನು ಕೆಲಸ ಬಿಡುತ್ತೇನೆ ಎಂದು ನನ್ನ ಬಳಿ ಬಂದು ಹೇಳಿದಾಗ ನನಗೆ ತುಂಬಾ ಕೋಪ ಬಂದಿತ್ತು. ಆಗ ನನ್ನ ಮನಸ್ಸಿಗೆ ಅವನೀಗ ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ, ಆದರೆ ದೇವರು ಅಜಯ್ ಅವರ ಶ್ರಮಕ್ಕೆ ಪ್ರತಿಫಲ ನೀಡಿದ್ದಾನೆ. ಇಂದು ಅದು ತನ್ನದೇ ಆದ ಗುರುತಾಗಿದೆ. ನಾನು ಕಾಳಿಯ ಭಕ್ತ ಮತ್ತು ಮಾತೆಯ ಆಶೀರ್ವಾದದಿಂದ ಎಲ್ಲವೂ ಯಶಸ್ವಿಯಾಗಿದೆ.'' ಎಂದು ಹೇಳಿದ್ದಾರೆ

ವಿದೇಶದಲ್ಲಿ ಕುಳಿತಿರುವ ಗ್ರಾಹಕರೊಂದಿಗೆ ಸಂಪರ್ಕ: 2020 ರಲ್ಲಿ, ಅಜಯ್ ರೈ ತಮ್ಮದೇ ಆದ ಕಂಪನಿಯನ್ನು ಸ್ಥಾಪಿಸಿದ. ಮತ್ತು ಈ ಕಂಪನಿಗೆ 'UPcoach' ಎಂದು ನಾಮಕರಣ ಕೂಡಾ ಮಾಡಿದರು. ಕಂಪನಿ ಸ್ಥಾಪಿಸಿದ ನಂತರ, ಅಜಯ್ ರೈ ಕಷ್ಟಪಟ್ಟು ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ವಿದೇಶಿ ಗ್ರಾಹಕರನ್ನು ಸಂಪರ್ಕಿಸಲು ಶುರು ಮಾಡಿದರು. ಮೊದಲು ಬೈಕ್ ನಲ್ಲಿ ಡ್ಯೂಟಿಗೆ ಹೋಗುತ್ತಿದ್ದ ಅಜಯ್ ನಂತರ ಬಸ್ ನಲ್ಲಿ ತೆರಳುತ್ತಿದ್ದರು. ಬಸ್ ಹತ್ತಿದ ಸಮಯದಲ್ಲಿ ಅಜಯ್ 3 ಗಂಟೆ ಕೆಲಸ ಮಾಡುತ್ತಿದ್ದರು.

ಮೂರು ದೇಶಗಳಲ್ಲಿ ಕಚೇರಿ: ಅಜಯ್, ತಮ್ಮ ಕಂಪನಿಯಲ್ಲಿ ಹಿರಿಯ ಸಹೋದ್ಯೋಗಿಗಳೊಂದಿಗೆ ಕಚೇರಿಯಲ್ಲಿ ಕುಳಿತು ಸಂಶೋಧನಾ ಅಭಿವೃದ್ಧಿಯ ಕೆಲಸವನ್ನು ಕಲಿಯಬೇಕಾಗಿತ್ತು. ಹೀಗಾಗಿ ಅವರು ಬಸ್ ಪ್ರಯಾಣದ ಸಮಯದಲ್ಲಿ ಫೋನ್ ಸಂದೇಶಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಕ್ಲೈಂಟ್‌ಗೆ ವಿನಂತಿಗಳನ್ನು ಕಳುಹಿಸಲು ಪ್ರಾರಂಭಿಸಿದರು. ಕ್ರಮೇಣ ಕೆಲಸ ಫಲ ನೀಡಲು ಆರಂಭಿಸಿತು. ಮುಂದೆ ಈ ಕೆಲಸವೇ ದುಬೈ ಮತ್ತು ಕೊಲಂಬಿಯಾದಲ್ಲಿ ಕಚೇರಿಗಳನ್ನು ತೆರೆಯಲು ಅನುಕೂಲ ಮಾಡಿಕೊಟ್ಟಿತು ಅಂತಾರೆ ಅಜಯ್​ ರೈ.

ಏನಾದರೂ ಸಾಧಿಸಬೇಕು ಎಂಬ ಛಲವೇ ಇಲ್ಲಿಗೆ ತಂದು ನಿಲ್ಲಿಸಿದೆ; ‘15 ಸಾವಿರ ರೂ ಸಿಗುತ್ತಿದ್ದ ಕೆಲಸದಲ್ಲಿ ನನಗೆ ತೃಪ್ತಿ ಇರಲಿಲ್ಲ. ಹೀಗಾಗಿ ಏನಾದರೂ ಸ್ವಂತ ವ್ಯವಹಾರವನ್ನು ಮಾಡಲು ನಿರ್ಧರಿಸಿದೆ ಮತ್ತು ಕಂಪನಿಯನ್ನು ಸ್ಥಾಪಿಸಿದೆ. ಕೆಲಸ ಬಿಟ್ಟಾಗ ಅಪ್ಪನಿಗೆ ಸಿಟ್ಟು ಬಂದಿತ್ತು, ಆದರೆ ಇಂದು ಮನೆಯ ಜವಾಬ್ದಾರಿಯನ್ನೂ ಹೊರುತ್ತಿದ್ದೇನೆ.'' - ಅಜಯ್ ರೈ, ಯುವ ಕೈಗಾರಿಕೋದ್ಯಮಿ.

ಯುರೋಪಿನ ಹಲವು ದೇಶಗಳಲ್ಲೂ ವ್ಯವಹಾರ: ಅಜಯ್ ರೈ ಕೆಲಸ ಮಾಡಲು ಪ್ರಾರಂಭಿಸಿದ ಪರಿಕಲ್ಪನೆಯು ಸಂಪೂರ್ಣವಾಗಿ ವಿಭಿನ್ನವಾಗಿತ್ತು. ವಾಸ್ತವವಾಗಿ ವಿದೇಶದಲ್ಲಿ ವ್ಯಾಪಾರ ತರಬೇತುದಾರರ ಪರಿಕಲ್ಪನೆ ಇದೆ. ಜನರು ತರಬೇತುದಾರರ ಮೂಲಕ ಮಾತ್ರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ನಿಮಗೆ ಕೌಟುಂಬಿಕ ಸಮಸ್ಯೆ ಇದ್ದರೆ ತರಬೇತುದಾರರು ಅದನ್ನು ಪರಿಹರಿಸುತ್ತಾರೆ. ನೀವು ಮದುವೆಯಾಗಲು ಬಯಸಿದರೆ, ಅದಕ್ಕೂ ಕೋಚ್‌ಗಳು ಲಭ್ಯವಿರುತ್ತಾರೆ. ನೀವು ವ್ಯಾಪಾರ ಮಾಡಲು ಬಯಸಿದರೆ, ಅದಕ್ಕೂ ನಿಮಗೆ ಕೋಚ್​ಗಳು ಸಿಗುತ್ತಾರೆ, ಹಾಗೂ ಅವರನ್ನು ಸಂಪರ್ಕಿಸಿ ಉದ್ಯಮ ಆರಂಭಿಸಬಹುದು. ಈ ಕಲ್ಪನೆ ಇದ್ದ ಅಜಯ್ ತರಬೇತುದಾರರಿಗೆ ಬ್ರ್ಯಾಂಡಿಂಗ್ ಕೆಲಸವನ್ನು ಪ್ರಾರಂಭಿಸಿದರು. ಅವರ ಈ ಯೋಚನೆ, ಯೋಜನೆ ಕೈ ಹಿಡಿದಿದ್ದು, ಕಂಪನಿಯು ಇದೀಗ 15-16 ದೇಶಗಳಲ್ಲಿ ಗ್ರಾಹಕರನ್ನು ಹೊಂದಿದೆ.

50ಕ್ಕೂ ಹೆಚ್ಚು ಮಂದಿಗೆ ಉದ್ಯೋಗದಾತ : ಇದಲ್ಲದೇ ಅಜಯ್ ಅವರು ಟ್ರಾಫಿಕ್ ಎಕ್ಸ್ ಪರ್ಟ್ ಎಲ್ ಸಿಸಿ ಹೆಸರಿನ ಮತ್ತೊಂದು ಕಂಪನಿ ಹೊಂದಿದ್ದಾರೆ. ನ್ಯೂಯಾರ್ಕ್‌ನಲ್ಲಿ ಕಂಪನಿಯ ಪ್ರಧಾನ ಕಚೇರಿಯಿದೆ ಮತ್ತು ಈ ಕಂಪನಿಯು ಗೂಗಲ್ ಟ್ರಾಫಿಕ್ ವಿಷಯಗಳನ್ನು ನೋಡಿಕೊಳ್ಳುತ್ತಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಅಜಯ್ ರೈ ಅವರೊಂದಿಗೆ ಈ ಕಂಪನಿಯಲ್ಲಿ ಇನ್ನೊಬ್ಬ ಸಹವರ್ತಿ ಕೂಡಾ ಇದ್ದಾರೆ. ಅಜಯ್ ರೈ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 50ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಿದ್ದಾರೆ. ಅಜಯ್ ರೈ ಅವರ ಕಂಪನಿಯ ವಹಿವಾಟು 10 ಕೋಟಿ ರೂಪಾಯಿಗಳನ್ನೂ ದಾಟಿದೆ.

'ಬಡವರ ಮುಖದಲ್ಲಿ ಮಂದಹಾಸ ಮೂಡಿಸುವ ಗುರಿ': ಅಜಯ್ ಕೂಡ ಕಲ್ಯಾಣ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ತಮ್ಮ ಹಳ್ಳಿ ಅರೇಲಾಕ್ಕೆ ತೆರಳಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ, ಅಜಯ್ ಅನೇಕ ಮುಖಗಳಲ್ಲಿ ನಗು ತರಲು ಕೆಲಸ ಮಾಡಿದರು ಮತ್ತು ಬಡವರಿಗೆ ಉದ್ಯೋಗಕ್ಕಾಗಿ ಸಹಾಯ ಮಾಡಿದ್ದಾರೆ. ಅಜಯ್ ಬಡವರ ಮುಖದಲ್ಲಿ ನಗುವನ್ನು ನೋಡಲು ಇಷ್ಟಪಡುತ್ತಾರೆ.

''ನಾನು ಬಿಹಾರಕ್ಕೂ ಏನಾದರೂ ಮಾಡಬೇಕೆಂದಿದ್ದೇನೆ. ಬಿಹಾರದ ಯುವಕರಿಗಾಗಿ ಪಾಟ್ನಾದಲ್ಲಿ ತರಬೇತಿ ಕೇಂದ್ರವನ್ನು ಸ್ಥಾಪಿಸಲು ನಾನು ಬಯಸುತ್ತೇನೆ.'' ಅಂತಾರೆ ಯುವ ಕೈಗಾರಿಕೋದ್ಯಮಿ ಅಜಯ್ ರೈ .'

ಇದನ್ನು ಓದಿ

ಭಾರತದಲ್ಲಿದ್ದಾರೆ 334 ಶತಕೋಟ್ಯಧಿಪತಿಗಳು: ಮುಂಚೂಣಿಯಲ್ಲಿ ಅದಾನಿ, ಅಂಬಾನಿ - billionaires in India

ಇಂದು ಸಣ್ಣ ಕೈಗಾರಿಕೆಗಳ ದಿನ: ಭಾರತದ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ - National Small Industry Day

ETV Bharat Logo

Copyright © 2025 Ushodaya Enterprises Pvt. Ltd., All Rights Reserved.