ETV Bharat / business

ಸಾರ್ವಕಾಲಿಕ ದಾಖಲೆಯತ್ತ ಷೇರು ಮಾರುಕಟ್ಟೆ: ಯಾವ ಷೇರುಗಳಿಗೆ ಲಾಭ, ನಷ್ಟ? - STOCK Market

author img

By PTI

Published : Jun 26, 2024, 4:31 PM IST

ಷೇರು ಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ. ಎರಡು ದಿನಗಳಿಂದ ಏರುತ್ತಲೇ ಇರುವ ಸೆನ್ಸೆಕ್ಸ್​, ನಿಫ್ಟಿ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದಿದೆ.

ಸಾರ್ವಕಾಲಿಕ ದಾಖಲೆಯತ್ತ ಷೇರು ಮಾರುಕಟ್ಟೆ
ಸಾರ್ವಕಾಲಿಕ ದಾಖಲೆಯತ್ತ ಷೇರು ಮಾರುಕಟ್ಟೆ (ETV Bharat)

ಮುಂಬೈ: ದೇಶೀಯ ಷೇರು ಮಾರುಕಟ್ಟೆ ಎರಡನೇ ದಿನವೂ ಭರ್ಜರಿ ಲಾಭ ಮಾಡಿಕೊಂಡಿದೆ. ಏಷ್ಯಾದ ಮಾರುಕಟ್ಟೆಯಲ್ಲಿನ ಬೆಳವಣಿಗೆ ಮತ್ತು ರಿಲಯನ್ಸ್​ ಇಂಡಸ್ಟೀಸ್​​ನ ಷೇರುಗಳ ಖರೀದಿಯಲ್ಲಿ ಹೆಚ್ಚಳದಿಂದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್​ ಮತ್ತು ನಿಫ್ಟಿ ಇದೇ ಮೊದಲ ಬಾರಿಗೆ ಗರಿಷ್ಠ ಮಟ್ಟಕ್ಕೆ ತಲುಪಿವೆ.

ಇಂದಿನ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 620.73 ಪಾಯಿಂಟ್‌ (ಶೇಕಡಾ 0.80 ರಷ್ಟು) ಏರಿಕೆ ಕಂಡು 78,674 ಅಂಕ ತಲುಪಿ ವಹಿವಾಟು ಮುಗಿಸಿತು. ಇದು ಮಾರುಕಟ್ಟೆ ಇತಿಹಾಸದಲ್ಲೇ ಅತ್ಯಧಿಕ ಏರಿಕೆಯಾಗಿದೆ. ಈ ಮೂಲಕ 79 ಸಾವಿರದ ಸಮೀಪಕ್ಕೆ ಬಂದು ನಿಂತಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ ಇದು 705.88 ಪಾಯಿಂಟ್‌ ಏರಿಕೆ ಕಂಡು 78,759.40ರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು.

50 ಷೇರುಗಳ ನಿಫ್ಟಿ ಸೂಚ್ಯಂಕವು 147.50 ಪಾಯಿಂಟ್‌ (ಶೇಕಡಾ 0.62 ರಷ್ಟು) ಏರಿಕೆಯಾಗಿ 23,868.80 ಅಂಕ ಗಳಿಸಿ ಹೊಸ ಅಧ್ಯಾಯ ಬರೆದಿದೆ. ಇಂಟ್ರಾ ಡೇ ಸೂಚ್ಯಂಕವು 168.6 ಪಾಯಿಂಟ್‌ ಏರಿಕೆಯಾಗಿ 23,889.90 ಅಂಕದೊಂದಿಗೆ ಗರಿಷ್ಠ ಮಟ್ಟಕ್ಕೆ ಬಂದು ನಿಂತಿದೆ.

ಇಂದಿನ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ಅದಾನಿ ಪೋರ್ಟ್ಸ್, ಆಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ ಮತ್ತು ಬಜಾಜ್ ಫೈನಾನ್ಸ್ ಕಂಪನಿಗಳ ಷೇರುಗಳು ಹೆಚ್ಚು ಲಾಭ ಗಳಿಸಿದವು. ಮಹೀಂದ್ರಾ ಅಂಡ್ ಮಹೀಂದ್ರಾ, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ತುಸು ನಷ್ಟಕ್ಕೀಡಾದವು.

ಏಷ್ಯಾ ಮಾರುಕಟ್ಟೆಯಲ್ಲೂ ಜಪ್ಪಿಂಗ್​: ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಸೂಚ್ಯಂಕಗಳು ಕೂಡ ಉತ್ತಮ ಏರಿಕೆ ಕಂಡಿವೆ. ಇದು ಭಾರತದ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿದವು. ಇತ್ತ ಯುರೋಪಿಯನ್​ ಮಾರುಕಟ್ಟೆಯಲ್ಲಿ ಏರಿಳಿಕೆ ದಾಖಲಾಗಿದೆ. ಅಮೆರಿಕದ ಮಾರುಕಟ್ಟೆಗಳು ಉತ್ತಮ ವಹಿವಾಟು ನಡೆಸಿವೆ.

ಕಚ್ಚಾ ತೈರ ದರ: ಜಾಗತಿಕ ಕಚ್ಚಾ ತೈಲ ದರ ಶೇಕಡಾ 0.80 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 85.69 ಅಮೆರಿಕನ್​ ಡಾಲರ್​ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 1,175.91 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.

ರೂಪಾಯಿ ಮೌಲ್ಯ ಕುಸಿತ: ಇತ್ತ ಅಮೆರಿಕನ್​ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬುಧವಾರದ ವಹಿವಾಟಿನಲ್ಲಿ ಡಾಲರ್​ ಎದುರು ರೂಪಾಯಿ ಮೌಲ್ಯ 17 ಪೈಸೆ ಕುಸಿದು 83.60ಕ್ಕೆ ತಲುಪಿದೆ. ವಿದೇಶಿ ಮಾರುಕಟ್ಟೆಯಲ್ಲಿ ಅಮೆರಿಕದ ಕರೆನ್ಸಿಯ ಬೇಡಿಕೆ ಹೆಚ್ಚಳ, ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ರೂಪಾಯಿ ಮೌಲ್ಯ ಕುಸಿಯುತ್ತಿದೆ.

ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 83.45 ಪೈಸೆಯಿಂದ ವಹಿವಾಟು ನಡೆಸಿದ ರೂಪಾಯಿ ಒಂದು ಹಂತದಲ್ಲಿ 83.43 ಪೈಸೆಯಲ್ಲಿತ್ತು. ಬಳಿಕ ಗರಿಷ್ಠ 83.61 ಕ್ಕೆ ತಲುಪಿತ್ತು. ದಿನದ ಅಂತಿಮ ವಹಿವಾಟಿನಲ್ಲಿ ಡಾಲರ್ ವಿರುದ್ಧ 83.60 ಕ್ಕೆ ಬಂದು ನಿಂತಿದೆ.

ಇದನ್ನೂ ಓದಿ: ಚಿನ್ನ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ: ಇಂದಿನ ಚಿನ್ನದ ದರ ಇಷ್ಟು - Gold Rate Today

ETV Bharat Logo

Copyright © 2024 Ushodaya Enterprises Pvt. Ltd., All Rights Reserved.