ETV Bharat / business

ಷೇರು ಮಾರುಕಟ್ಟೆ: ಸೆನ್ಸೆಕ್ಸ್ 1,200, ನಿಫ್ಟಿ 361 ಅಂಕ ಜಿಗಿತ - ನಿಫ್ಟಿ

ಇಂದಿನ ಷೇರು ಮಾರುಕಟ್ಟೆ ಟ್ರೆಂಡ್: ಸೆನ್ಸೆಕ್ಸ್ 1,200 ಅಂಕ ಜಿಗಿತ ಕಂಡು 72,834ಕ್ಕೇರಿತು. ನಿಫ್ಟಿ 361 ಪಾಯಿಂಟ್ ಏರಿಕೆಯಾಗಿ 22,032ಕ್ಕೆ ತಲುಪಿದೆ.

Stock market  Sensex  Nifty  ಷೇರು ಮಾರುಕಟ್ಟೆ  ಸೆನ್ಸೆಕ್ಸ್​ ನಿಫ್ಟಿ  ದೇಶಿಯ ಷೇರುಪೇಟೆ ಸೂಚ್ಯಂಕಗಳು
ಷೇರು ಮಾರುಕಟ್ಟೆ: ಸೆನ್ಸೆಕ್ಸ್​ನ 1,200 ಅಂಕ ಜಿಗತ, ನಿಫ್ಟಿ 361 ಪಾಯಿಂಟ್ ಏರಿಕೆ
author img

By ETV Bharat Karnataka Team

Published : Feb 2, 2024, 1:27 PM IST

ಮುಂಬೈ(ಮಹಾರಾಷ್ಟ್ರ): ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಸಕಾರಾತ್ಮಕ ಸಂಕೇತಗಳ ನಡುವೆ ಶುಕ್ರವಾರ ದೇಶಿಯ ಷೇರುಪೇಟೆ ಸೂಚ್ಯಂಕಗಳು ಭಾರಿ ಏರಿಕೆಯೊಂದಿಗೆ ಆರಂಭಗೊಂಡಿವೆ. ಸೆನ್ಸೆಕ್ಸ್ 1,200 ಪಾಯಿಂಟ್‌ಗಳ ಏರಿಕೆಯೊಂದಿಗೆ 72,488ಕ್ಕೇರಿ ವಹಿವಾಟು ನಡೆಸುತ್ತಿದೆ. ನಿಫ್ಟಿ 361 ಪಾಯಿಂಟ್ ಏರಿಕೆ ಕಂಡು 22,032ಕ್ಕೆ ತಲುಪಿದೆ.

ಷೇರು ಮಾರುಕಟ್ಟೆಯ ಆರಂಭದಲ್ಲಿ (9:26ರ ಹೊತ್ತಿಗೆ) ಸೆನ್ಸೆಕ್ಸ್ 843 ಪಾಯಿಂಟ್‌ಗಳ ಏರಿಕೆಯೊಂದಿಗೆ 72,488ರಲ್ಲಿ ವಹಿವಾಟು ನಡೆಸಿತು. ನಿಫ್ಟಿ 248 ಪಾಯಿಂಟ್ ಏರಿಕೆ ಕಂಡು 21,946ಕ್ಕೆ ತಲುಪಿದೆ. ಡಾಲರ್ ಎದುರು ರೂಪಾಯಿ 82.91ಕ್ಕೆ ಪ್ರಾರಂಭವಾಯಿತು.

ಸೆನ್ಸೆಕ್ಸ್-30 ಸೂಚ್ಯಂಕದಲ್ಲಿ L&T ಮತ್ತು ಮಾರುತಿ ಷೇರುಗಳು ಮಾತ್ರ ನಷ್ಟದಲ್ಲಿವೆ. ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಪವರ್‌ಗ್ರಿಡ್, ಟೆಕ್ ಮಹೀಂದ್ರಾ, ರಿಲಯನ್ಸ್, ಎನ್‌ಟಿಪಿಸಿ, ವಿಪ್ರೋ, ಟಿಸಿಎಸ್, ಎಸ್​ಜೆವಿಎನ್​ಎಲ್​, ಎಚ್‌ಸಿಎಲ್ ಟೆಕ್, ಅಲ್ಟ್ರಾಟೆಕ್ ಸಿಮೆಂಟ್ಸ್, ಭಾರ್ತಿ ಏರ್‌ಟೆಲ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಟಾಪ್ ಗೇನರ್‌ಗಳಾಗಿವೆ.

ಅಮೆರಿಕದ ಮಾರುಕಟ್ಟೆಗಳು (ಸ್ಟಾಕ್ ಮಾರುಕಟ್ಟೆ) ಗುರುವಾರ ಲಾಭದೊಂದಿಗೆ ಕೊನೆಗೊಂಡಿದ್ದವು. ಏಷ್ಯಾ ಪೆಸಿಫಿಕ್‌ನ ಪ್ರಮುಖ ಸೂಚ್ಯಂಕಗಳು ಇಂದು ಧನಾತ್ಮಕವಾಗಿ ವಹಿವಾಟು ನಡೆಸುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ 24 ಗಂಟೆಗಳಲ್ಲಿ ಬ್ಯಾರೆಲ್ ಬ್ರೆಂಟ್ ತೈಲದ ಬೆಲೆ ಶೇ.0.70ರಷ್ಟು ಏರಿಕೆಯಾಗಿ 79.25 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 1,879.58 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು 872.49 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಕೇಂದ್ರ ಬಜೆಟ್ 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭಾಷಣದ ನಂತರ ಬಜೆಟ್‌ನಲ್ಲಿ ಹೆಚ್ಚಿನ ಸ್ಪಷ್ಟತೆ ಬಂದಿದ್ದರಿಂದ ಷೇರು ಮಾರುಕಟ್ಟೆ ಬಜೆಟ್ ಘೋಷಣೆಗಳಿಗೆ ಪ್ರತಿಕ್ರಿಯಿಸಿದೆ. 2026ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ. 4.5ಕ್ಕೆ ಇಳಿಸುವ ಬಗ್ಗೆ ಸರ್ಕಾರ ಮಾತನಾಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ಸರ್ಕಾರವು ನಿವ್ವಳ ಸಾಲವನ್ನು ಕಡಿಮೆ ಮಾಡಲು ಚಿಂತಿಸಿದೆ.

ಇದನ್ನೂ ಓದಿ: ಸರ್ಕಾರಗಳು ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು, ಉಚಿತ ಕೊಡುಗೆಗಳಿಗೆ ಅಲ್ಲ: ರಘುರಾಮ್ ರಾಜನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.