ಹೈದರಾಬಾದ್: ಮ್ಯೂಚುವಲ್ ಫಂಡ್‌ಗಳು ಈ ದಿನಗಳಲ್ಲಿ ಕಾನೂನುಬದ್ಧವಾಗಿ ಹಣ ಗಳಿಸಲು ಆಯ್ಕೆಮಾಡುವ ಮಾರ್ಗಗಳಾಗಿವೆ. ವ್ಯವಸ್ಥಿತ ಹೂಡಿಕೆ ಯೋಜನೆ SIP ನಿಮ್ಮನ್ನು ಸಣ್ಣ ಮೊತ್ತದ ಹೂಡಿಕೆಯಿಂದ ಮಿಲಿಯನೇರ್ ಆಗುವಂತೆ ಮಾಡುತ್ತವೆ. ಅದಕ್ಕಾಗಿಯೇ ಸಣ್ಣ ಹೂಡಿಕೆದಾರರು ಸಹ ಈ ರೀತಿಯ ಎಸ್‌ಐಪಿ ಬಗ್ಗೆ ಈಗಿಗ ಆಸಕ್ತಿ ತೋರಿಸುತ್ತಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಮ್ಯೂಚುವಲ್ ಫಂಡ್‌ಗಳ ದೀರ್ಘಾವಧಿ SIPಯಲ್ಲಿ ಹೂಡಿಕೆ ಮಾಡಬೇಕು. ನೀವು ಕೇವಲ ಒಂದು ಅಥವಾ ಎರಡು ವರ್ಷಗಳ ಕಾಲ ಹೂಡಿಕೆ ಮಾಡಿದರೆ, ನಿಮಗೆ ಹೆಚ್ಚಿನ ಆದಾಯವೆನೂ ಸಿಗುವುದಿಲ್ಲ. ನೀವು ಕನಿಷ್ಟ 15 ರಿಂದ 20 ವರ್ಷಗಳವರೆಗೆ ಹೂಡಿಕೆ ಮಾಡಲು ಸಿದ್ಧರಾಗಿರಬೇಕು. ಇದನ್ನು ಮಾಡಲು ಸಾಕಷ್ಟು ಪರಿಶ್ರಮ ಮತ್ತು ಶಿಸ್ತು ಬೇಕಾಗುತ್ತದೆ. ನೀವು ನಿಜವಾಗಿಯೂ ಈ ರೀತಿಯ ದೀರ್ಘಾವಧಿಯ ಹೂಡಿಕೆಗಳನ್ನು ಮಾಡಿದರೆ ಖಂಡಿತವಾಗಿಯೂ ಮಿಲಿಯನೇರ್ ಆಗಬಹುದು. ಆಗೇ ಆಗುತ್ತೀರಾ.
SIP ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ: ದೈನಂದಿನ, ಸಾಪ್ತಾಹಿಕ, ಮಾಸಿಕ ಹೀಗೆ ನಿಮ್ಮ ಅನಕೂಲಕ್ಕೆ ತಕ್ಕಂತೆ ನಿಯಮಿತವಾಗಿ ಎಸ್ಐಪಿಯಲ್ಲಿ ಹೂಡಿಕೆ ಮಾಡಬೇಕು. ಹೀಗೆ ಮಾಡುವುದರಿಂದ ಪ್ರತಿ ತಿಂಗಳು ತಮ್ಮ ಸಂಪೂರ್ಣ ಹೂಡಿಕೆಯ ಮೇಲೆ ಲಾಭ ಪಡೆಯುತ್ತಾರೆ. ವಾಸ್ತವವಾಗಿ ಚಕ್ರಬಡ್ಡಿಯನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಪಡೆಯಬಹುದು. ಹೀಗಾಗಿ ನಿಮ್ಮ ಹೂಡಿಕೆಯ ಮೊತ್ತವು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ.
ಕಾಂಪೌಂಡಿಂಗ್ ಎಫೆಕ್ಟ್‌ಗೆ ಉದಾಹರಣೆ ನೀಡುವುದಾದರೆ, ನೀವು ತಿಂಗಳಿಗೆ 9500 ಹೂಡಿಕೆ ಮಾಡುತ್ತಿದ್ದೀರಿ ಎಂದು ಭಾವಿಸೋಣ. ಆಗ ನಿಮಗೆ 25 ವರ್ಷಗಳಲ್ಲಿ 4.6 ಕೋಟಿ ರಿಟರ್ನ್ ಸಿಗುತ್ತದೆ. ಅಂದರೆ ಕೇವಲ 25 ವರ್ಷಗಳಲ್ಲಿ ನೀವು ಕೋಟ್ಯಾಧೀಶರಾಗಬಹುದು.
ನೀವು ಇಲ್ಲಿ ನೆನಪಿಟ್ಟುಕೊಳ್ಳಬೇಕಾಗಿರುವುದು:
- ನಿಮ್ಮ ಹೂಡಿಕೆ ಕೇವಲ 28,50,000 (ರೂ.28.5 ಲಕ್ಷಗಳು)
- ಮ್ಯೂಚುವಲ್ ಫಂಡ್ ಮೆಚ್ಯೂರಿಟಿ: 4,55,96,882 ( 4.55 ಕೋಟಿ ರೂ.)
- ನೀವು ಪಡೆಯುವ ಒಟ್ಟು ಲಾಭ : 4,27,46,882 ರೂ. ( 4.27 ಕೋಟಿ ರೂ.)
ಇತರ ಹೂಡಿಕೆಗಳಿಗೆ ಹೋಲಿಸಿದರೆ!
- ಸುಕನ್ಯಾ ಸಮೃದ್ಧಿ ಯೋಜನೆ - 8.2 ಶೇಕಡಾ ಬಡ್ಡಿ ದರ
- ಹಿರಿಯ ನಾಗರಿಕರ ಉಳಿತಾಯ ಯೋಜನೆ - ಶೇಕಡಾ 8.2 ಬಡ್ಡಿ ದರ
- ರಾಷ್ಟ್ರೀಯ ಉಳಿತಾಯ ಯೋಜನೆ - 7.7 ಶೇಕಡಾ ಬಡ್ಡಿ ದರ
- ಕಿಸಾನ್ ವಿಕಾಸ್ ಪತ್ರ - ಶೇಕಡಾ 7.5 ಬಡ್ಡಿ ದರ
- ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ - 7.5 ಶೇಕಡಾ ಬಡ್ಡಿ ದರ
ಈ ಎಲ್ಲ ಉಳಿತಾಯ ಯೋಜನೆಗಳು ಸುರಕ್ಷಿತ ಆದಾಯವನ್ನು ನೀಡುತ್ತವೆ. ಆದರೆ ಮ್ಯೂಚುವಲ್ ಫಂಡ್‌ಗಳಿಗೆ ಹೋಲಿಸಿದರೆ ಇವುಗಳಿಂದ ಬರುವ ಆದಾಯ ತುಂಬಾ ಕಡಿಮೆ. ಅದಕ್ಕಾಗಿಯೇ ಸ್ವಲ್ಪ ರಿಸ್ಕ್ ತೆಗೆದುಕೊಳ್ಳುವವರು SIP ಅಡಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಸಹಜವಾಗಿ ಇದು ಮಾರುಕಟ್ಟೆಯ ರಿಸ್ಕ್ಗಳನ್ನು ಹೊಂದಿರುತ್ತದೆ. ಆದರೆ ದೀರ್ಘಾವಧಿಯಲ್ಲಿ ಉತ್ತಮ ಆದಾಯದ ಸಾಧ್ಯತೆಗಳು ಹೆಚ್ಚು
ಇದನ್ನು ಓದಿ: ನಿಮಗೆ ಇನ್‌ಕ್ರಿಮೆಂಟ್ ಸಿಕ್ಕಿದೆಯೇ?: ಹೆಚ್ಚುವರಿ ಸಂಬಳದ ಸರಿಯಾದ ವಿನಿಯೋಗ ಹೇಗೆ ಗೊತ್ತಾ? - Salary Management Tips