ETV Bharat / business

5 ದಿನದಿಂದ ಬಿದ್ದು ಪುಟಿದೆದ್ದ ಷೇರು ಮಾರುಕಟ್ಟೆ: ಇಂದು ಲಾಭಗಳಿಸಿದ ಷೇರುಗಳಿವು - STOCK MARKET

ಸೋಮವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಏರಿಕೆಯೊಂದಿಗೆ ಕೊನೆಗೊಂಡಿದೆ.

ಬಾಂಬೆ ಸ್ಟಾಕ್ ಎಕ್ಸ್ ಚೇಂಜ್
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (IANS)
author img

By ETV Bharat Karnataka Team

Published : Oct 28, 2024, 5:13 PM IST

ಮುಂಬೈ: ಸತತ ಐದು ದಿನಗಳ ಕುಸಿತದ ನಂತರ ಭಾರತೀಯ ಷೇರು ಮಾರುಕಟ್ಟೆಗಳು ಸೋಮವಾರದ ವಹಿವಾಟಿನಲ್ಲಿ ಗಮನಾರ್ಹ ಚೇತರಿಕೆ ಕಂಡಿವೆ. ಸೆನ್ಸೆಕ್ಸ್ 602 ಪಾಯಿಂಟ್ ಏರಿಕೆಯಾಗಿ 80,005 ರಲ್ಲಿ ಕೊನೆಗೊಂಡರೆ, ನಿಫ್ಟಿ 158 ಪಾಯಿಂಟ್ ಏರಿಕೆಯಾಗಿ 24,339 ರಲ್ಲಿ ಕೊನೆಗೊಂಡಿದೆ. ಇಂದಿನ ಏರಿಕೆ ಇಡೀ ತಿಂಗಳಲ್ಲಿ ದಾಖಲಾದ ಅತ್ಯುತ್ತಮ ಏರಿಕೆಯಾಗಿದೆ.

ಬ್ಯಾಂಕ್ ಷೇರುಗಳು ಇಂದು ಅತ್ಯುತ್ತಮ ಲಾಭ ಮಾಡಿದವು. ನಿಫ್ಟಿ ಬ್ಯಾಂಕ್ 471 ಪಾಯಿಂಟ್ ಅಥವಾ ಶೇಕಡಾ 0.93 ರಷ್ಟು ಏರಿಕೆಯಾಗಿ 51,259 ರಲ್ಲಿ ಕೊನೆಗೊಂಡಿದೆ.

ಐಸಿಐಸಿಐ ಬ್ಯಾಂಕ್, ವಿಪ್ರೋ, ಟಾಟಾ ಸ್ಟೀಲ್, ಜೆಎಸ್ ಡಬ್ಲ್ಯೂ ಸ್ಟೀಲ್, ಎಂ & ಮಹೀಂದ್ರಾ, ಸನ್ ಫಾರ್ಮಾ, ಎಚ್ ಯುಎಲ್, ಎಸ್​ಬಿಐ, ಟಾಟಾ ಮೋಟಾರ್ಸ್, ಬಜಾಜ್ ಫಿನ್ ಸರ್ವ್, ಏಷ್ಯನ್ ಪೇಂಟ್ಸ್, ಇಂಡಸ್ಇಂಡ್ ಬ್ಯಾಂಕ್, ಎನ್​ಟಿಪಿಸಿ ಮತ್ತು ಎಚ್​ಸಿಎಲ್ ಟೆಕ್ ಸೆನ್ಸೆಕ್ಸ್​ನಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ.

ಆಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಟೆಕ್ ಮಹೀಂದ್ರಾ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಭಾರ್ತಿ ಏರ್ಟೆಲ್ ನಷ್ಟ ಅನುಭವಿಸಿದವು.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ಬಹುತೇಕ ಎಲ್ಲಾ ಸೂಚ್ಯಂಕಗಳು ಲಾಭದೊಂದಿಗೆ ಕೊನೆಗೊಂಡವು. ಪಿಎಸ್​ಯು ಬ್ಯಾಂಕ್, ಫಾರ್ಮಾ, ಎಫ್ಎಂಸಿಜಿ, ರಿಯಾಲ್ಟಿ, ಆಟೋ, ಐಟಿ ಮತ್ತು ಮಾಧ್ಯಮ ಕಂಪನಿಗಳ ಷೇರುಗಳು ಲಾಭ ಗಳಿಸಿದವು.

ಲಾರ್ಜ್ ಕ್ಯಾಪ್ ಜೊತೆಗೆ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್‌ಗಳಲ್ಲಿಯೂ ಖರೀದಿ ಕಂಡುಬಂದಿದೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು 458 ಪಾಯಿಂಟ್ ಅಥವಾ ಶೇಕಡಾ 0.83 ರಷ್ಟು ಏರಿಕೆಯಾಗಿ 55,736 ಕ್ಕೆ ತಲುಪಿದೆ ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು 214 ಪಾಯಿಂಟ್ ಅಥವಾ ಶೇಕಡಾ 1.20 ರಷ್ಟು ಏರಿಕೆಯಾಗಿ 18,062 ಕ್ಕೆ ತಲುಪಿದೆ.

ಸಕಾರಾತ್ಮಕ ದೇಶೀಯ ಮಾರುಕಟ್ಟೆಗಳು ಮತ್ತು ಕಚ್ಚಾ ತೈಲ ಬೆಲೆಗಳಲ್ಲಿ ತೀವ್ರ ಕುಸಿತದ ಹಿನ್ನೆಲೆಯಲ್ಲಿ ರೂಪಾಯಿ ಸೋಮವಾರ ಯುಎಸ್ ಡಾಲರ್ ವಿರುದ್ಧ 1 ಪೈಸೆ ಏರಿಕೆಯಾಗಿ 84.07 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ವಿರುದ್ಧ ರೂಪಾಯಿ 84.08 ಕ್ಕೆ ಪ್ರಾರಂಭವಾಯಿತು. ಸೀಮಿತ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿದ ರೂಪಾಯಿ 84.07 ರಲ್ಲಿ ಕೊನೆಗೊಳಿಸಿತು. ಇದು ಹಿಂದಿನ ಮುಕ್ತಾಯಕ್ಕಿಂತ 1 ಪೈಸೆ ಏರಿಕೆಯಾಗಿದೆ.

ಇದನ್ನೂ ಓದಿ : ಹೊಸ ಫೀಚರ್​ ಪರಿಚಯಿಸಿದ ಜೊಮ್ಯಾಟೊ: ಇನ್ಮುಂದೆ ನಿಮ್ಮ ಇಷ್ಟದ ಸಮಯಕ್ಕೆ ಹೀಗೆ ಆರ್ಡರ್​ ಶೆಡ್ಯೂಲ್​ ಮಾಡಿಕೊಳ್ಳಿ!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.