ETV Bharat / business

ಸೆಮಿಕಂಡಕ್ಟರ್ ಉದ್ಯಮ ಸ್ಥಾಪನೆಗೆ ₹2.5 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆ: ಕೇಂದ್ರ ಸರ್ಕಾರ

author img

By ETV Bharat Karnataka Team

Published : Feb 29, 2024, 6:48 PM IST

ಸೆಮಿಕಂಡಕ್ಟರ್​ ಉದ್ಯಮ ಸ್ಥಾಪನೆಗೆ 2.5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಪ್ರಸ್ತಾವನೆ ಬಂದಿವೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

setting up semiconductor industry Investment proposal

ನವದೆಹಲಿ: ಸೆಮಿಕಂಡಕ್ಟರ್ ವಲಯದಲ್ಲಿ ಪ್ಯಾಕೇಜಿಂಗ್, ವಿನ್ಯಾಸ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಮುಂತಾದ ಉದ್ಯಮಗಳ ಸ್ಥಾಪನೆಗೆ 2.5 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಬಂಡವಾಳ ಹೂಡಿಕೆ ಪ್ರಸ್ತಾಪಗಳನ್ನು ಭಾರತ ಸ್ವೀಕರಿಸಿದೆ ಎಂದು ಕೇಂದ್ರ ಸರಕಾರ ಗುರುವಾರ ತಿಳಿಸಿದೆ.

ಎಸ್​ಸಿಎಲ್ ಮೊಹಾಲಿಯಲ್ಲಿ ನಡೆದ 'ಇಂಡಿಯಾ ಸೆಮಿಕಂಡಕ್ಟರ್ ಮತ್ತು ಪ್ಯಾಕೇಜಿಂಗ್ ಇಕೋಸಿಸ್ಟಮ್ ಕಾನ್ಫರೆನ್ಸ್' (ಐಎಸ್​ಪಿಇಸಿ) ಸಮಾವೇಶದಲ್ಲಿ ವರ್ಚುವಲ್ ಮೋಡ್ ಮೂಲಕ ಭಾಗವಹಿಸಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸೆಮಿಕಂಡಕ್ಟರ್ ವಿಷಯದಲ್ಲಿ ಭಾರತ ಅಗ್ರಗಣ್ಯ ದೇಶವಾಗುತ್ತಿದೆ ಎಂದು ಹೇಳಿದರು.

"ವಿವಿಧ ವಲಯಗಳಲ್ಲಿ ಭಾರತ ಸರ್ಕಾರವು 2.5 ಲಕ್ಷ ಕೋಟಿ ರೂ.ಗಳ ಹೂಡಿಕೆ ಪ್ರಸ್ತಾಪಗಳನ್ನು ಸ್ವೀಕರಿಸಿದ್ದು, ನಾವು ಒಂದು ಮಹತ್ವದ ಮೈಲಿಗಲ್ಲನ್ನು ತಲುಪುತ್ತಿದ್ದೇವೆ" ಎಂದು ಸಚಿವ ಚಂದ್ರಶೇಖರ್ ಸಭೆಗೆ ತಿಳಿಸಿದರು.

"ಸೆಮಿಕಂಡಕ್ಟರ್ ತಯಾರಿಕಾ ಉದ್ಯಮದಲ್ಲಿ ನಾವು ಏನೂ ಇಲ್ಲದ ಸ್ಥಿತಿಯಿಂದ ಹೊರಬಂದಿದ್ದು, ಜಾಗತಿಕ ಸೆಮಿಕಂಡಕ್ಟರ್ ಕಂಪನಿಗಳಿಗೆ ಪ್ರತಿಭಾವಂತರನ್ನು ಒದಗಿಸುವುದು ಮಾತ್ರವಲ್ಲದೆ ಈಗ ಸೆಮಿಕಂಡಕ್ಟರ್ ತಯಾರಿಕೆ, ವಿನ್ಯಾಸ ಮುಂತಾದ ವಲಯಗಳಲ್ಲಿ ಬಂಡವಾಳ ಹೂಡಿಕೆ ಪಡೆಯುವ ಮಟ್ಟಕ್ಕೆ ತಲುಪಿದ್ದೇವೆ" ಎಂದು ಅವರು ಹೇಳಿದರು.

"ಸೆಮಿ ಕಂಡಕ್ಟರ್ ಉದ್ಯಮದಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಘಟಕಗಳ ಸ್ಥಾಪನೆಯ ಮೇಲೆ ನಾವು ನಮ್ಮ ಗಮನ ಕೇಂದ್ರೀಕರಿಸಿದ್ದೇವೆ. ಪ್ಯಾಕೇಜಿಂಗ್ ನಾವೀನ್ಯತೆ, ಸೆಮಿಕಂಡಕ್ಟರ್ ಸಂಶೋಧನೆ, ಚಿಪ್ ವಿನ್ಯಾಸ ಮತ್ತು ಸಿಸ್ಟಮ್ ವಿನ್ಯಾಸ ನಾವೀನ್ಯತೆಯನ್ನು ಕೇಂದ್ರೀಕರಿಸಿದ ದೃಢವಾದ ಮತ್ತು ಸ್ಪರ್ಧಾತ್ಮಕ ಉದ್ಯಮ ವ್ಯವಸ್ಥೆಯನ್ನು ಸೃಷ್ಟಿಸುವ ನಮ್ಮ ಗುರಿಯನ್ನು ಈ ಸಮ್ಮೇಳನವು ಎತ್ತಿ ತೋರಿಸುತ್ತದೆ" ಎಂದು ಸಚಿವರು ನುಡಿದರು.

"ಒಟ್ಟಾರೆ ಸೆಮಿಕಂಡಕ್ಟರ್ ಉದ್ಯಮ ವ್ಯವಸ್ಥೆ, ಜಾಗತಿಕ ಉದ್ಯಮ ವ್ಯವಸ್ಥೆ ಮತ್ತು ಮೌಲ್ಯ ಸರಪಳಿಯಲ್ಲಿ ಭಾರತದ ಉಪಸ್ಥಿತಿಯು ಕೇವಲ ಎರಡು ವರ್ಷಗಳ ಹಿಂದೆ ಇದ್ದಕ್ಕಿಂತ ಗಮನಾರ್ಹವಾಗಿ ವಿಸ್ತಾರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯಲ್ಲಿ ಇನ್ನೂ ಏನೇನು ಅಭಿವೃದ್ಧಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ" ಎಂದು ಸಚಿವರು ಹೇಳಿದರು.

ಅಸ್ಸಾಂನಲ್ಲಿ ರಾಜ್ಯ ಸರ್ಕಾರ ಮತ್ತು ಟಾಟಾ ಗ್ರೂಪ್ ಜಂಟಿಯಾಗಿ ಶೀಘ್ರದಲ್ಲೇ ಸುಮಾರು 25,000 ಕೋಟಿ ರೂ.ಗಳ ಮೌಲ್ಯದ ಮೊದಲ ಸೆಮಿಕಂಡಕ್ಟರ್​ ಪ್ಯಾಕೇಜಿಂಗ್ ಕಾರ್ಖಾನೆಯನ್ನು ನಿರ್ಮಿಸಲಿವೆ ಎಂದು ಅವರು ಈ ತಿಂಗಳ ಆರಂಭದಲ್ಲಿ ಘೋಷಿಸಿದ್ದರು.

ಇದನ್ನೂ ಓದಿ: ಹೈದರಾಬಾದ್​ನ ಮೈಕ್ರೋಸಾಫ್ಟ್ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಬಿಲ್ ಗೇಟ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.