ಮುಂಬೈ,ಮಹಾರಾಷ್ಟ್ರ: ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳನ್ನು ಹೊರತುಪಡಿಸಿ ಎಲ್ಲಾ ವಲಯದ ಷೇರುಗಳಲ್ಲಿ ಭಾರಿ ಮಾರಾಟವಾದ ಒತ್ತಡ ಕಂಡು ಬಂದ ಕಾರಣ ಭಾರತೀಯ ಷೇರು ಮಾರುಕಟ್ಟೆ ಗುರುವಾರ ಕೆಂಪು ಬಣ್ಣದಲ್ಲಿ ಕೊನೆಗೊಂಡಿತು. ಕಳೆದೊಂದು ತಿಂಗಳಿಂದ ಭಾರತೀಯರ ಷೇರುಮಾರುಕಟ್ಟೆಯಲ್ಲಿ ಒತ್ತಡ ವಹಿವಾಟು ಕಂಡು ಬರುತ್ತಿದೆ. ಕಳೆದ ತಿಂಗಳಿಂದ ಇಲ್ಲಿವರೆಗೂ ಷೇರು ಮಾರುಕಟ್ಟೆ ಸುಮಾರು ಆರೇಳು ಸಾವಿರ ಅಂಕಗಳನ್ನು ಕಳೆದುಕೊಂಡಿದೆ.
ಒಂದು ತಿಂಗಳ ಹಿಂಜರಿತದ ಬಳಿಕ ದೀಪಾವಳಿ ಮುಹೂರ್ತದ ಟ್ರೇಡ್ ಹಾಗೂ ನಿನ್ನೆಯ ಅಮೆರಿಕ ರಿಜಸ್ಟ್ ದಿನ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ವ್ಯವಹಾರ ನಡೆದು ಷೇರು ಮಾರುಕಟ್ಟೆ ಚೇತರಿಕೆ ಕಾಣುತ್ತದೆ ಎಂದು ಹೂಡಿಕೆದಾರರು ಭಾವಿಸಿದ್ದರು. ಆದರೆ ಇಂದು ಅಮೆರಿಕದ ಫೆಡ್ ಮೀಟಿಂಗ್ ಭೀತಿಯಿಂದ ಸೆನ್ಸೆಕ್ಸ್ ಸುಮಾರು 836 ಅಂಕಗಳನ್ನು ಕಳೆದುಕೊಂಡು 79,541 ಅಂಕಗಳೊಂದಿಗೆ ಕೊನೆಗೊಂಡಿದೆ.
ಮತ್ತೊಂದೆಡೆ, ನಿಫ್ಟಿ 284.70 ಪಾಯಿಂಟ್‌ಗಳು ಅಥವಾ ಶೇಕಡಾ 1.16 ರಷ್ಟು ಕುಸಿದು 24,199.35 ಕ್ಕೆ ತಲುಪಿದೆ. ನಿಫ್ಟಿ ಬ್ಯಾಂಕ್ 400.90 ಪಾಯಿಂಟ್ ಅಥವಾ 0.77 ರಷ್ಟು ಕುಸಿದು 51,916.50 ಕ್ಕೆ ಬಂದು ನಿಂತಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕವು 246.65 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ. ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕವು 142.25 ಪಾಯಿಂಟ್‌ಗಳು ಅಥವಾ ಶೇಕಡಾ 0.75 ರಷ್ಟು ಕುಸಿದ ನಂತರ 18,763.85 ಕ್ಕೆ ಕೊನೆಗೊಂಡಿತು.
ನಿಫ್ಟಿ ಲೋಹದ ವಲಯದಲ್ಲಿ ಭಾರೀ ಮಾರಾಟ ಕಂಡು ಬಂದಿದೆ. ಇದಲ್ಲದೇ ಆಟೋ, ಫಾರ್ಮಾ, ರಿಯಾಲ್ಟಿ, ಇಂಧನ ಮತ್ತು ಇನ್‌ಫ್ರಾ ವಲಯಗಳು ಶೇ.1ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕುಸಿತ ಕಂಡಿವೆ.
ಈ ಎಲ್ಲ ಷೇರುಗಳಲ್ಲಿ ಇಳಿಕೆ: ಐಟಿ, ಹಣಕಾಸು ಸೇವೆಗಳು, ಎಫ್‌ಎಂಸಿಜಿ, ಮಾಧ್ಯಮ, ಖಾಸಗಿ ಬ್ಯಾಂಕ್‌ಗಳು, ಸರಕುಗಳು, ಪಿಎಸ್‌ಇ ಮತ್ತು ಹೆಲ್ತ್‌ಕೇರ್ ವಲಯಗಳು ಸಹ ವಹಿವಾಟನ್ನು ಕೆಂಪು ಬಣ್ಣದಲ್ಲಿ ಮುಚ್ಚಿದವು. ಟೆಕ್ ಮಹೀಂದ್ರಾ, ಟಾಟಾ ಮೋಟಾರ್ಸ್, ಅಲ್ಟ್ರಾ ಟೆಕ್ ಸಿಮೆಂಟ್, ಜೆಎಸ್‌ಡಬ್ಲ್ಯೂ ಸ್ಟೀಲ್, ಸನ್ ಫಾರ್ಮಾ, ಏಷ್ಯನ್ ಪೇಂಟ್ಸ್, ಇಂಡಸ್‌ಇಂಡ್ ಬ್ಯಾಂಕ್, ಟೈಟಾನ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್ ಮತ್ತು ಪವರ್ ಗ್ರಿಡ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಟಾಪ್ ಲೂಸರ್‌ಗಳಾಗಿವೆ. ಎಸ್‌ಬಿಐ ಟಾಪ್ ಗೇನರ್‌ಗಳ ಪಟ್ಟಿಯಲ್ಲಿತ್ತು.
ಮಾರುಕಟ್ಟೆಯ ಟ್ರೆಂಡ್ ಇಂದು ಕೂಡಾ ನಕಾರಾತ್ಮಕವಾಗಿಯೇ ಉಳಿದಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 1,825 ಷೇರುಗಳು ಹಸಿರು, 2,129 ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದು, 99 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇದನ್ನು ಓದಿ:ಜಿಯೋ, ಏರ್‌ಟೆಲ್‌ಗೆ ಠಕ್ಕರ್ ನೀಡಲು ಸಿದ್ಧವಾಗುತ್ತಿದೆ ಬಿಎಸ್ಎನ್ಎಲ್; ಸಂಕ್ರಾಂತಿಗೆ 5ಜಿ ಸೇವೆ ಆರಂಭ?
ಮಾರುಕಟ್ಟೆ ತಜ್ಞರ ಪ್ರಕಾರ, ಬುಧವಾರದ ವಹಿವಾಟಿನ ಲಾಭವನ್ನು ;ಪಡೆಯಲು ಹೂಡಿಕೆದಾರರು ಇಂದು ಷೇರುಗಳ ಮಾರಾಟದಲ್ಲಿ ತೊಡಗಿಸಿಕೊಂಡರು ಎನ್ನಲಾಗಿದೆ. ಮತ್ತೊಂದು ಕಡೆ ಪ್ರಮುಖ ಕಂಪನಿಗಳ ನಿರಾಶಾದಾಯಕ Q2 ಮತ್ತು ಎಫ್‌ಐಐಗಳ ನಿರಂತರ ಮಾರಾಟವು ಮಾರುಕಟ್ಟೆಯ ಭಾವನೆಯನ್ನು ಕುಗ್ಗಿಸುವುದನ್ನು ಮುಂದುವರೆಸಿದೆ. ಆದಾಗ್ಯೂ, ಹೂಡಿಕೆದಾರರು ಮುಂಬರುವ ಫೆಡ್ ನೀತಿ ಸಭೆ ಮತ್ತು ದೇಶೀಯ ಸಾರ್ವಜನಿಕ ವೆಚ್ಚಗಳತ್ತ ತಮ್ಮ ಗಮನವನ್ನು ನೆಟ್ಟಿದ್ದಾರೆ. ಹೀಗಾಗಿ ಹೊಸ ಹೂಡಿಕೆ ಮಾಡಲು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಹೀಗಾಗಿ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿದೆ.
ಏತನ್ಮಧ್ಯೆ, ರೂಪಾಯಿ ಸಾರ್ವಕಾಲಿಕ ಇಳಿಕೆ ದಾಖಲಿಸಿ 84.36 ನಲ್ಲಿ ದುರ್ಬಲವಾಗಿ ವಹಿವಾಟು ನಡೆಸಿತು. ಡಾಲರ್ ಸೂಚ್ಯಂಕವು 104.50 ಬಳಿ ಸ್ಥಿರವಾಗಿ ಉಳಿಯಿತು, ಪ್ರಮುಖ ಫೆಡರಲ್ ರಿಸರ್ವ್ ಸಭೆಯ ಮುಂದೆ ಹೂಡಿಕೆದಾರರು ತಮ್ಮನ್ನು ತಾವು ಇರಿಸಿಕೊಳ್ಳುವ ಮೂಲಕ ಅದರ ಬಲವನ್ನು ಉಳಿಸಿಕೊಂಡರು.
ಇದನ್ನು ಓದಿ:ಮಹಿಳೆಯರಿಗೆ ಖುಷಿ ವಿಚಾರ: ಚಿನ್ನದ ಬೆಲೆಯಲ್ಲಿ 2100 ರೂ ಕುಸಿತ, ಬೆಳ್ಳಿ 4 ಸಾವಿರ ರೂ. ಇಳಿಕೆ