ಮುಂಬೈ: ಭಾರತೀಯ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತದೊಂದಿಗೆ ಕೊನೆಗೊಂಡವು. ಬಿಎಸ್ಇ ಸೆನ್ಸೆಕ್ಸ್ 1,017 ಪಾಯಿಂಟ್ಸ್ ಅಥವಾ ಶೇಕಡಾ 1.24 ರಷ್ಟು ಕುಸಿದು 81,183.93 ರಲ್ಲಿ ಕೊನೆಗೊಂಡಿದ್ದರೆ, ವಿಶಾಲ ನಿಫ್ಟಿ 50 292.95 ಪಾಯಿಂಟ್ಸ್ ಅಥವಾ ಶೇಕಡಾ 1.17 ರಷ್ಟು ಕುಸಿದು 24,852.15 ರಲ್ಲಿ ಕೊನೆಗೊಂಡಿದೆ.
30 ಷೇರುಗಳ ಸೆನ್ಸೆಕ್ಸ್ನಲ್ಲಿ ಎಸ್ ಬಿಐ, ಎನ್ಟಿಪಿಸಿ, ಐಸಿಐಸಿಐ ಬ್ಯಾಂಕ್, ಎಚ್ಸಿಎಲ್ ಟೆಕ್ ಮತ್ತು ರಿಲಯನ್ಸ್ ಶೇಕಡಾ 4.4 ರಷ್ಟು ನಷ್ಟಕ್ಕೀಡಾಗಿ ಒಟ್ಟಾರೆಯಾಗಿ ಸೂಚ್ಯಂಕದ 23 ಷೇರುಗಳು ಇಳಿಕೆಯಲ್ಲಿ ಕೊನೆಗೊಂಡವು. ಏತನ್ಮಧ್ಯೆ, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಜೆಎಸ್ಡಬ್ಲ್ಯೂ ಸ್ಟೀಲ್, ಸನ್ ಫಾರ್ಮಾ ಮತ್ತು ಮಾರುತಿ ಸುಜುಕಿ ಇಂಡಿಯಾ ಸೂಚ್ಯಂಕದಲ್ಲಿ ಶೇಕಡಾ 1.22 ರಷ್ಟು ಲಾಭ ಗಳಿಸಿದವು.
ನಿಫ್ಟಿ 50 ಸೂಚ್ಯಂಕದಲ್ಲಿ, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಜೆಎಸ್ಡಬ್ಲ್ಯೂ ಸ್ಟೀಲ್, ಎಲ್ಟಿಐ ಮತ್ತು ನೆಸ್ಲೆ ಇಂಡಿಯಾ ನೇತೃತ್ವದ ಎಂಟು ಷೇರುಗಳು ಶೇ1ರ ವರೆಗೆ ಲಾಭ ಗಳಿಸಿದರೆ, 42 ಷೇರುಗಳು ಇಳಿಕೆಯಲ್ಲಿ ಕೊನೆಗೊಂಡವು. ಎಸ್ಬಿಐ, ಬಿಪಿಸಿಎಲ್, ಐಸಿಐಸಿಐ ಬ್ಯಾಂಕ್, ಎನ್ಟಿಪಿಸಿ ಮತ್ತು ಎಚ್ಸಿಎಲ್ಟೆಕ್ ನಷ್ಟ ಅನುಭವಿಸಿದವು.
ಇದಲ್ಲದೆ, ಎನ್ಎಸ್ಇಯ ಎಲ್ಲಾ ವಲಯದ ಸೂಚ್ಯಂಕಗಳು ಕುಸಿತದೊಂದಿಗೆ ಕೊನೆಗೊಂಡವು. ಪಿಎಸ್ಯು ಬ್ಯಾಂಕ್ ಸೂಚ್ಯಂಕವು ಶೇಕಡಾ 3.57 ರಷ್ಟು ಕುಸಿದರೆ, ತೈಲ ಮತ್ತು ಅನಿಲ ಸೂಚ್ಯಂಕ ಶೇಕಡಾ 2.16 ರಷ್ಟು ಕುಸಿದು ನಂತರದ ಸ್ಥಾನದಲ್ಲಿದೆ. ಇದಲ್ಲದೇ, ಆಟೋ ಸೇರಿದಂತೆ ಬ್ಯಾಂಕ್ ಮತ್ತು ಹಣಕಾಸು ಸೇವೆ ಸೂಚ್ಯಂಕಗಳು ತಲಾ ಶೇಕಡಾ 1 ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದರೆ, ಉಳಿದವು ಶೇಕಡಾ 1 ರಷ್ಟು ಕುಸಿದವು. ಬಿಎಸ್ಇ ಸ್ಮಾಲ್ ಕ್ಯಾಪ್ ಶೇಕಡಾ 0.96 ರಷ್ಟು ನಷ್ಟ ಅನುಭವಿಸಿದರೆ, ಬಿಎಸ್ಇ ಮಿಡ್ ಕ್ಯಾಪ್ ಶೇಕಡಾ 1.41 ರಷ್ಟು ಕುಸಿದಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ದುರ್ಬಲ ಡಾಲರ್ ಮಧ್ಯೆ ಯುಎಸ್ ಡಾಲರ್ ವಿರುದ್ಧ ರೂಪಾಯಿ ಶುಕ್ರವಾರ 2 ಪೈಸೆ ಏರಿಕೆಯಾಗಿ 83.95 ಕ್ಕೆ ತಲುಪಿದೆ. ಇಂಟರ್ ಬ್ಯಾಂಕ್ ಕರೆನ್ಸಿ ಮಾರುಕಟ್ಟೆಯಲ್ಲಿ, ರೂಪಾಯಿ 83.97 ರಲ್ಲಿ ಪ್ರಾರಂಭವಾಯಿತು ಮತ್ತು ಅಮೆರಿಕನ್ ಕರೆನ್ಸಿಯ ವಿರುದ್ಧ ಇಂಟ್ರಾ-ಡೇ ಗರಿಷ್ಠ 83.91 ರಲ್ಲಿ ವಹಿವಾಟು ನಡೆಸಿತು. 83.91-83.97 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿದ ರೂಪಾಯಿ ಅಂತಿಮವಾಗಿ 83.95 (ತಾತ್ಕಾಲಿಕ) ರಲ್ಲಿ ಅಂದರೆ 2 ಪೈಸೆ ಲಾಭದೊಂದಿಗೆ ಸ್ಥಿರವಾಯಿತು. ಮಂಗಳವಾರ ರೂಪಾಯಿ 83.97 ರಲ್ಲಿ ಕೊನೆಗೊಂಡಿತ್ತು.
ಇದನ್ನೂ ಓದಿ : ಅಮೆರಿಕ ಹಿಂದಿಕ್ಕಿ ವಿಶ್ವದ 2ನೇ ಅತಿದೊಡ್ಡ 5ಜಿ ಹ್ಯಾಂಡ್ಸೆಟ್ ಮಾರುಕಟ್ಟೆಯಾದ ಭಾರತ - 5G Handset Market