ETV Bharat / business

ಮಾರಾಟದ ಭರಾಟೆ: ಸೆನ್ಸೆಕ್ಸ್​ 820 ಅಂಕ ಕುಸಿತ, 24,000 ಪಾಯಿಂಟ್ಸ್​​ಗಳಿಂದ ಕೆಳಗಿಳಿದ ನಿಫ್ಟಿ

ಮಂಗಳವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಕುಸಿತ ಕಂಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Nov 12, 2024, 5:31 PM IST

ಮುಂಬೈ, ಮಹಾರಾಷ್ಟ್ರ: ಐಟಿ ಮತ್ತು ರಿಯಾಲ್ಟಿ ಹೊರತುಪಡಿಸಿ ಎಲ್ಲಾ ವಲಯದ ಷೇರುಗಳಲ್ಲಿ ಭಾರಿ ಮಾರಾಟ ಕಂಡು ಬಂದಿದ್ದರಿಂದ ಭಾರತೀಯ ಷೇರು ಮಾರುಕಟ್ಟೆ ಮಂಗಳವಾರ ಇಳಿಕೆಯೊಂದಿಗೆ ಕೊನೆಗೊಂಡಿತು.

ಭಾರತದ ಪ್ರಮುಖ ಬೆಂಚ್ ಮಾರ್ಕ್ ಸೂಚ್ಯಂಕಗಳು ವಹಿವಾಟಿನ ಕೊನೆಯಲ್ಲಿ ಶೇಕಡಾ 1 ಕ್ಕಿಂತ ಹೆಚ್ಚು ಕುಸಿದವು. ಸೆನ್ಸೆಕ್ಸ್ 820.97 ಪಾಯಿಂಟ್ ಅಥವಾ ಶೇಕಡಾ 1.03 ರಷ್ಟು ಕುಸಿದು 78,675.18 ರಲ್ಲಿ ಕೊನೆಗೊಂಡಿದೆ ಮತ್ತು ನಿಫ್ಟಿ 257.85 ಪಾಯಿಂಟ್ ಅಥವಾ ಶೇಕಡಾ 1.07 ರಷ್ಟು ಕುಸಿದು 23,883.45 ರಲ್ಲಿ ಕೊನೆಗೊಂಡಿದೆ.

ಪ್ರಮುಖವಾಗಿ ಬ್ಯಾಂಕಿಂಗ್ ಷೇರುಗಳಲ್ಲಿ ಅತ್ಯಧಿಕ ಮಾರಾಟದ ಒತ್ತಡ ಅನುಭವಿಸಿದವು. ನಿಫ್ಟಿ ಬ್ಯಾಂಕ್ 718.95 ಪಾಯಿಂಟ್ ಅಥವಾ ಶೇಕಡಾ 1.39 ರಷ್ಟು ಕುಸಿದು 51,157.80 ಕ್ಕೆ ತಲುಪಿದೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು ವಹಿವಾಟಿನ ಅಂತ್ಯದಲ್ಲಿ 596.25 ಪಾಯಿಂಟ್ ಅಥವಾ ಶೇಕಡಾ 1.07 ರಷ್ಟು ಕುಸಿದು 55,257.50 ಕ್ಕೆ ಕೊನೆಗೊಂಡಿತು. ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು 233.55 ಪಾಯಿಂಟ್ ಅಥವಾ ಶೇಕಡಾ 1.28 ರಷ್ಟು ಕುಸಿದು 17,991.60 ರಲ್ಲಿ ಕೊನೆಗೊಂಡಿತು.

ಪ್ರಮುಖ ವಲಯಗಳಲ್ಲಿ ಮಾರಾಟ ಭರಾಟೆ: ವಲಯ ಸೂಚ್ಯಂಕಗಳಲ್ಲಿ ಪಿಎಸ್ಇ, ಆಟೋ, ಪಿಎಸ್ ಯು ಬ್ಯಾಂಕ್, ಹಣಕಾಸು ಸೇವೆ, ಫಾರ್ಮಾ, ಎಫ್ಎಂಸಿಜಿ, ಲೋಹ, ಮಾಧ್ಯಮ, ಇಂಧನ, ಖಾಸಗಿ ಬ್ಯಾಂಕ್ ಮತ್ತು ಇನ್ ಫ್ರಾ ಪ್ರಮುಖವಾಗಿ ನಷ್ಟ ಅನುಭವಿಸಿದವು.

ಎನ್​ಟಿಪಿಸಿ, ಎಚ್​ಡಿಎಫ್​ಸಿ ಬ್ಯಾಂಕ್, ಏಷ್ಯನ್ ಪೇಂಟ್ಸ್, ಎಸ್​ಬಿಐ, ಟಾಟಾ ಮೋಟಾರ್ಸ್, ಜೆಎಸ್ ಡಬ್ಲ್ಯೂ ಸ್ಟೀಲ್, ಮಾರುತಿ, ಪವರ್ ಗ್ರಿಡ್, ಬಜಾಜ್ ಫೈನಾನ್ಸ್, ಎಂ & ಎಂ, ಬಜಾಜ್ ಫಿನ್ ಸರ್ವ್, ನೆಸ್ಲೆ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಅತಿಹೆಚ್ಚು ನಷ್ಟ ಅನುಭವಿಸಿದವು.

ಈ ಷೇರುಗಳಲ್ಲಿ ಕೊಂಚ ನಿಟ್ಟುಸಿರು, ಲಾಭ: ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಹೆಚ್ಚು ಲಾಭ ಗಳಿಸಿದವು.

ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (ಬಿಎಸ್ಇ) ನಲ್ಲಿ 1,236 ಷೇರುಗಳು ಹಸಿರು ಬಣ್ಣದಲ್ಲಿ, 2,234 ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸಿದವು ಮತ್ತು 91 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.

ಭಾರತದ ರೂಪಾಯಿ ಮಂಗಳವಾರ ಯುಎಸ್ ಡಾಲರ್ ವಿರುದ್ಧ 1 ಪೈಸೆ ಕುಸಿದು 84.39 ಕ್ಕೆ (ತಾತ್ಕಾಲಿಕ) ಹೊಸ ಜೀವಮಾನದ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಅಮೆರಿಕದ ಡಾಲರ್ ವಿರುದ್ಧ ರೂಪಾಯಿ 84.39 ರಲ್ಲಿ ಪ್ರಾರಂಭವಾಯಿತು. ದಿನದ ವಹಿವಾಟಿನಲ್ಲಿ ಇದು ಗರಿಷ್ಠ 84.39 ಮತ್ತು ಕನಿಷ್ಠ 84.41 ರ ಮಧ್ಯೆ ಹೊಯ್ದಾಡಿತು. ಅಂತಿಮವಾಗಿ ರೂಪಾಯಿ 84.40 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಇದು ಯುಎಸ್ ಕರೆನ್ಸಿಯ ವಿರುದ್ಧ 1 ಪೈಸೆ ಕುಸಿತವಾಗಿದೆ.

ಇದನ್ನೂ ಓದಿ : 12 ಲಕ್ಷ ಕೋಟಿಗೆ ತಲುಪಿದ ನಿವ್ವಳ ನೇರ ತೆರಿಗೆ ಸಂಗ್ರಹ: ಶೇ 15.4 ರಷ್ಟು ಏರಿಕೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.