ETV Bharat / business

ಸೆನ್ಸೆಕ್ಸ್​ 440 ಪಾಯಿಂಟ್​ ಜಿಗಿತ, 21,853ಕ್ಕೆ ತಲುಪಿದ ನಿಫ್ಟಿ - ಸೆನ್ಸೆಕ್ಸ್

Closing bell: ಭಾರತದ ಷೇರು ಮಾರುಕಟ್ಟೆಗಳು ಉತ್ತಮ ಏರಿಕೆಯೊಂದಿಗೆ ಶುಕ್ರವಾರದ ವಹಿವಾಟು ಕೊನೆಗೊಳಿಸಿವೆ.

Closing bell: Sensex off day's high, up 400 points; Nifty above 21,850

author img

By ETV Bharat Karnataka Team

Published : Feb 2, 2024, 4:59 PM IST

ಮುಂಬೈ: ಭಾರತೀಯ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಶುಕ್ರವಾರದ ವಹಿವಾಟಿನಲ್ಲಿ ಉತ್ತಮ ಏರಿಕೆ ಕಂಡವು. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಟಿ ಷೇರುಗಳಲ್ಲಿನ ಹೆಚ್ಚಿನ ಖರೀದಿಯ ಕಾರಣದಿಂದ ಷೇರು ಮಾರುಕಟ್ಟೆ ಏರಿಕೆ ದಾಖಲಿಸಿದೆ.

ನಿಫ್ಟಿ- 50 ಶುಕ್ರವಾರ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಸೂಚ್ಯಂಕವು ಮಧ್ಯಾಹ್ನ 22,126.80 ರ ಗರಿಷ್ಠ ಮಟ್ಟವನ್ನು ತಲುಪಿ 21,853.80 ರಲ್ಲಿ ಕೊನೆಗೊಂಡಿತು. ಇದು 156.35 ಪಾಯಿಂಟ್ ಅಥವಾ ಶೇಕಡಾ 0.72 ರಷ್ಟು ಹೆಚ್ಚಳವಾಗಿದೆ. ಬಿಎಸ್ಇ ಸೆನ್ಸೆಕ್ಸ್ ಕೂಡ ದಿನದ ವಹಿವಾಟಿನಲ್ಲಿ 1,440 ಪಾಯಿಂಟ್​ಗಳಷ್ಟು ಏರಿಕೆ ಕಂಡಿತ್ತು. ನಂತರ ದಿನದ ಕೊನೆಗೆ 440 ಪಾಯಿಂಟ್ಸ್ ಅಥವಾ ಶೇಕಡಾ 0.61 ರಷ್ಟು ಏರಿಕೆಯಾಗಿ 72,086 ರಲ್ಲಿ ಕೊನೆಗೊಂಡಿದೆ.

ಶುಕ್ರವಾರದ ವಹಿವಾಟಿನಲ್ಲಿ 38 ಷೇರುಗಳು ಏರಿಕೆಯಾದರೆ, ಕೇವಲ 12 ಷೇರುಗಳು ಇಳಿಕೆ ಕಂಡವು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಪವರ್ ಗ್ರಿಡ್ ಕಾರ್ಪೊರೇಷನ್, ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಮಿಷನ್, ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಇಕನಾಮಿಕ್ ಜೋನ್ ಮತ್ತು ಎನ್​ಟಿಪಿಸಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಐಷರ್ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್, ಎಚ್​​ಡಿಎಫ್​ಸಿ ಲೈಫ್ ಇನ್ಶೂರೆನ್ಸ್ ಕಂಪನಿ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

ನಿಫ್ಟಿ ಬ್ಯಾಂಕ್ ಕೂಡ ಗಮನಾರ್ಹ ಹೆಚ್ಚಳ ಕಂಡಿದ್ದು, ಶೇಕಡಾ 1 ಅಥವಾ 490 ಪಾಯಿಂಟ್ ಗಳ ಏರಿಕೆಯೊಂದಿಗೆ 46,680.75 ರಲ್ಲಿ ವಹಿವಾಟು ನಡೆಸಿತು. ಈ ವಲಯದಲ್ಲಿ ಐಸಿಐಸಿಐ ಬ್ಯಾಂಕ್ ಹೆಚ್ಚು ಲಾಭ ಗಳಿಸಿದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರದ ಸ್ಥಾನದಲ್ಲಿದೆ. ನಿಫ್ಟಿ ಕನ್ಸ್ಯೂಮರ್ ಡ್ಯೂರೇಬಲ್ಸ್ ಹೊರತುಪಡಿಸಿ, ಇತರ ಎಲ್ಲಾ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿವೆ. ನಿಫ್ಟಿ ಐಟಿ ಶೇಕಡಾ 1.43 ಏರಿಕೆಯೊಂದಿಗೆ 37,057.70 ಕ್ಕೆ ವಹಿವಾಟು ನಡೆಸುತ್ತಿದ್ದರೆ, ಪಿಎಸ್​ಯು ಬ್ಯಾಂಕುಗಳು ಸಹ ಲಾಭ ಕಂಡವು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಬ್ಯಾಂಕಿಂಗ್ ಸೇವೆಗಳನ್ನು ನಿರ್ಬಂಧಿಸಿದ ನಂತರ ಪೇಟಿಎಂನ ಮಾತೃ ಕಂಪನಿಯಾದ ಒನ್ 97 ಕಮ್ಯುನಿಕೇಷನ್ಸ್ ಸತತ ಎರಡನೇ ದಿನವೂ ತನ್ನ ಷೇರುಗಳಲ್ಲಿ ಶೇಕಡಾ 20 ರಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ : ಶೇ 97.5ರಷ್ಟು 2 ಸಾವಿರ ಮುಖಬೆಲೆಯ ನೋಟುಗಳು ಮರಳಿವೆ: ಆರ್​ಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.