ಮುಂಬೈ(ಮಹಾರಾಷ್ಟ್ರ): ಇಂದು ಭಾರತದ ಷೇರು ಮಾರುಕಟ್ಟೆಗಳು ಉತ್ತಮ ಲಾಭದೊಂದಿಗೆ ವಹಿವಾಟು ಶುರುಮಾಡಿವೆ. ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಬರುತ್ತಿರುವ ಸಕಾರಾತ್ಮಕ ಸಂಕೇತಗಳು ಹಾಗು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಹೂಡಿಕೆದಾರರು ಆಶಾಭಾವನೆ ಹೊಂದಿರುವುದು ಈ ಬೆಳವಣಿಗೆಗೆ ಕಾರಣವಾದ ಅಂಶಗಳು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಪ್ರಸ್ತುತ, ಸೆನ್ಸೆಕ್ಸ್ 168 ಅಂಕಗಳಷ್ಟು ಏರಿಕೆ ಕಂಡು 75,561ರಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ ಪ್ರಸ್ತುತ 40 ಅಂಕ ಏರಿಕೆಯೊಂದಿಗೆ 22,997ಕ್ಕೆ ತಲುಪಿದೆ.
ಯಾರಿಗೆ ಲಾಭ?: JSW ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ಎಸ್‌ಬಿಐ.
ಯಾರಿಗೆ ನಷ್ಟ?: ವಿಪ್ರೋ, ಮಾರುತಿ ಸುಜುಕಿ, ರಿಲಯನ್ಸ್, ಏಷ್ಯನ್ ಪೇಂಟ್ಸ್, ಪವರ್‌ಗ್ರಿಡ್, ಟೈಟಾನ್, ಇನ್ಫೋಸಿಸ್ ಮತ್ತು ಎಚ್‌ಸಿಎಲ್ ಟೆಕ್
ಎಫ್‌ಐಐ ಹೂಡಿಕೆಗಳು: ಸ್ಟಾಕ್ ಎಕ್ಸ್‌ಚೇಂಜ್ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 944.83 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ವಹಿವಾಟು ಹೇಗಿದೆ?: ಏಷ್ಯಾದ ಮಾರುಕಟ್ಟೆಗಳ ಪೈಕಿ ಸಿಯೋಲ್, ಟೋಕಿಯೊ, ಶಾಂಘೈ, ಹಾಂಗ್ ಕಾಂಗ್ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸುತ್ತಿವೆ. ಶುಕ್ರವಾರ ಅಮೆರಿಕದ ಮಾರುಕಟ್ಟೆಗಳು ಗಳಿಕೆಯೊಂದಿಗೆ ವ್ಯವಹಾರ ಮುಗಿಸಿದ್ದವು.
ರೂಪಾಯಿ ಮೌಲ್ಯ ಏರಿಕೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 4 ಪೈಸೆ ಹೆಚ್ಚಾಗಿದೆ. ಪ್ರಸ್ತುತ, ಪ್ರತಿ ಡಾಲರ್‌ಗೆ 83.06 ರೂ ನೀಡಬೇಕಿದೆ.
ಪೆಟ್ರೋಲ್, ಡೀಸೆಲ್ ಬೆಲೆ: ಕರ್ನಾಟಕ ಮತ್ತು ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 99.49 ಇದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 85.93 ರೂಪಾಯಿ ಇದೆ.
ಇನ್ನುಳಿದಂತೆ, ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಮತ್ತು ಡೀಸೆಲ್ ಬೆಲೆ 95.63 ರೂ., ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ. ಮತ್ತು ಡೀಸೆಲ್ ಬೆಲೆ 96.16 ರೂಪಾಯಿ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಇದೆ.
ಕಚ್ಚಾ ತೈಲ ಬೆಲೆಗಳು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಶೇಕಡಾ 0.21ರಷ್ಟು ಹೆಚ್ಚಾಗಿದೆ. ಪ್ರಸ್ತುತ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 82.29 ಡಾಲರ್ ಆಗಿದೆ.
ಇದನ್ನೂ ಓದಿ: ತುರ್ತಾಗಿ ರೈಲಿನಲ್ಲಿ ಸಂಚರಿಸಬೇಕೇ? ರೈಲು ಹೊರಡುವ 5 ನಿಮಿಷ ಮುನ್ನ ಟಿಕೆಟ್ ಬುಕ್ ಮಾಡಬಹುದು! - Train Ticket Booking