ಹೈದರಾಬಾದ್: ಸ್ಯಾಮ್‌ಸಂಗ್ ಶೀಘ್ರದಲ್ಲೇ ಭಾರತದಲ್ಲಿ ಅಗ್ಗದ 5G ಸ್ಮಾರ್ಟ್ ಫೋನ್ ಬಿಡುಗಡೆಗೆ ಸಿದ್ದವಾಗಿದೆ. ಈ ವರ್ಷದಲ್ಲಿ ಗ್ಯಾಲಕ್ಸಿ M-ಸರಣಿಯ ಎರಡು ಫೋನ್ಗಳ ಬಿಡುಗಡೆಗೆ ಸಿದ್ದವಾಗಿರುವ ಸ್ಯಾಮ್‌ಸಂಗ್ ಮೊದಲಿಗೆ ಏಪ್ರಿಲ್ 8ರಂದು Galaxy M15 5G ಬಿಡುಗಡೆಗೊಳಿಸುತ್ತಿದೆ. ಈಗಾಗಲೇ ಈ ಫೋನ್‌ನ ಮುಂಗಡ ಕಾಯ್ದಿರಿಸುವಿಕೆ ಪ್ರಾರಂಭಿಸಿದೆ.
Amazon ಮೂಲಕ ಮುಂಗಡ ಬುಕಿಂಗ್ ಮಾಡುವ ಗ್ರಾಹಕರಿಗೆ ಸ್ಯಾಮ್‌ಸಂಗ್ ಕೆಲವು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. 1,699 ರೂ ಬೆಲೆಯ 25W ಟ್ರಾವೆಲ್ ಅಡಾಪ್ಟರ್ ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ರೂ. 299ಕ್ಕೆ ನೀಡಲಾಗುತ್ತದೆ. ಇದರೊಂದಿಗೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಮೊಬೈಲ್ ಖರೀದಿಸಿದರೆ ಮೂರು ತಿಂಗಳ ಕಾಲ ನೋ - ಕಾಸ್ಟ್ EMI ಆಯ್ಕೆಯನ್ನು ಸಹ ಪಡೆಯಬಹುದಾಗಿದೆ. ಮುಂಗಡ ಬುಕ್ಕಿಂಗ್ಗಾಗಿ ಗ್ರಾಹಕರು ರೂ. 999 ಪಾವತಿಸಬೇಕಿದೆ.
Galaxy M15 5G ವೈಶಿಷ್ಟ್ಯಗಳು
- Galaxy M15 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು 50-MP, 5-MP ಜೊತೆಗೆ 2-MP ಕ್ಯಾಮೆರಾ ಒಳಗೊಂಡಿದೆ. 13 MP ಸೆಲ್ಫಿ ಕ್ಯಾಮೆರಾ ಕೂಡಾ ಹೊಂದಿದೆ.
- 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿ ಹೊಂದಿದೆ.
- ಇದು 4GB RAM + 128GB ಮತ್ತು 6GB RAM + 128GB ಸ್ಟೋರೇಜ್ ಕಾನ್ಫಿಗರೇಶನ್‌ಗಳನ್ನು ಒಳಗೊಂಡಿದೆ
- Galaxy M15 5G ಬ್ಲೂ ಟೋಪಾಜ್, ಸೆಲೆಸ್ಟಿಯಲ್ ಬ್ಲೂ ಮತ್ತು ಸ್ಟೋನ್ ಗ್ರೇ ಬಣ್ಣಗಳಲ್ಲಿ ಲಭ್ಯವಿಲಿದೆ.
- 6.5-ಇಂಚಿನ HD+ (1,080x2,340 ಪಿಕ್ಸೆಲ್‌ಗಳು) ಸೂಪರ್ AMOLED ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಹೊಂದಿದೆ.
- Galaxy M15 ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಚಿಪ್‌ಸೆಟ್‌ನ್ನು 4GB RAM ನೊಂದಿಗೆ ಜೋಡಿಸಲಾಗಿದೆ.
ದರ: ಈ ಫೋನ್‌ನ ಬೆಲೆಯನ್ನು ಕಂಪನಿ ಪ್ರಕಟಿಸಿಲ್ಲ. ಆದರೆ, 15 ಸಾವಿರ ಬಜೆಟ್‌ನಲ್ಲಿ ಈ ಹ್ಯಾಂಡ್‌ಸೆಟ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ಕೆಲವು ಬ್ಯಾಂಕ್ ರಿಯಾಯಿತಿಗಳನ್ನು ಸಹ ನೀಡಬಹುದಾಗಿದೆ.
ಇದನ್ನೂ ಓದಿ: 1 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಉತ್ತಮ ಬೈಕ್ ಖರೀದಿಸಬೇಕೇ? ಇಲ್ಲಿವೆ ಟಾಪ್ 10 ಬೈಕ್ಗಳು! - Best Bikes Under Rs1 Lakh