ETV Bharat / business

ನಿಮಗೆ ಇನ್‌ಕ್ರಿಮೆಂಟ್‌ ಸಿಕ್ಕಿದೆಯೇ?: ಹೆಚ್ಚುವರಿ ಸಂಬಳದ ಸರಿಯಾದ ವಿನಿಯೋಗ ಹೇಗೆ ಗೊತ್ತಾ? - Salary Management Tips

ನಿಮ್ಮ ಸಂಬಳದಲ್ಲಿ ಇನ್‌ಕ್ರಿಮೆಂಟ್‌ ಆದಾಗ ಆ ಹೆಚ್ಚುವರಿ ಹಣವನ್ನು ಹೇಗೆ ನಿರ್ವಹಣೆ ಮಾಡಬೇಕು ಮತ್ತು ಹೂಡಿಕೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

Etv Bharat
Etv Bharat
author img

By ETV Bharat Karnataka Team

Published : Apr 26, 2024, 9:08 PM IST

ಎಲ್ಲ ಉದ್ಯೋಗಿಗಳು ಭವಿಷ್ಯಕ್ಕಾಗಿ ಉಳಿಸಲು ಮತ್ತು ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ, ಸಂಬಳವು ಖರ್ಚು ಮತ್ತು ವೆಚ್ಚಗಳಿಗೆ ಸರಿ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ಸಂಬಳ ಹೆಚ್ಚಾದರೆ ಅವರ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಆದರೆ, ಅನೇಕರು ತಮ್ಮ ಸಂಬಳ ಹೆಚ್ಚಾದಾಗ ತಾತ್ಕಾಲಿಕ ಸಂತೋಷಕ್ಕಾಗಿ ಅನಗತ್ಯವಾಗಿ ಖರ್ಚು ಮಾಡುತ್ತಲೇ ಇರುತ್ತಾರೆ. ಇದು ಸರಿಯಾದ ಕ್ರಮವಲ್ಲ. ನಿಮ್ಮ ಭವಿಷ್ಯವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಲು ಬಯಸಿದರೆ, ನೀವು ಮೊದಲು ಉಳಿತಾಯ ಮತ್ತು ಹೂಡಿಕೆ ಮಾಡಲೇಬೇಕು. ಆ ನಂತರವೇ ಖರ್ಚಿನ ಬಗ್ಗೆ ಯೋಚಿಸಬೇಕು ಎಂಬುವುದು ಆರ್ಥಿಕ ತಜ್ಞರ ಸಲಹೆ.

ಇನ್‌ಕ್ರಿಮೆಂಟ್‌ ಏನು ಮಾಡಬೇಕು?: ನಿಮ್ಮ ಸಂಬಳ ಹೆಚ್ಚಾದಾಗ ಅಥವಾ ಇನ್‌ಕ್ರಿಮೆಂಟ್‌ ಬಂದಾಗ ಆ ಹೆಚ್ಚುವರಿ ಹಣವನ್ನು ಪರಿಣಾಮಕಾರಿಯಾಗಿ ಬಳಸಲು ನೀವು ಸ್ಪಷ್ಟವಾದ ಯೋಜನೆಯನ್ನು ಹಾಕಿಕೊಳ್ಳಬೇಕು. ಆರಾಮದಾಯಕ ಜೀವನಕ್ಕಾಗಿ, ಗೃಹೋಪಯೋಗಿ ವಸ್ತುಗಳು ಮತ್ತು ದಿನಸಿಗಳಂತಹ ಅಗತ್ಯ ವಸ್ತುಗಳಿಗೆ ನಿರ್ದಿಷ್ಟ ಮೊತ್ತವನ್ನು ಮೀಸಲಿಡಬೇಕು. ಯಾವುದೇ ಬಾಕಿಯನ್ನು ಪಾವತಿಸಲು ನಿರ್ದಿಷ್ಟ ಮೊತ್ತವನ್ನು ಬಳಸಬೇಕು. ಇದು ನಿಮ್ಮ ಮೇಲಿನ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಭವಿಷ್ಯದ ಆರ್ಥಿಕ ಭದ್ರತೆಗಾಗಿ ಉಳಿತಾಯ ಮತ್ತು ಹೂಡಿಕೆಗೆ ನಿರ್ದಿಷ್ಟ ಮೊತ್ತವನ್ನು ಮೀಸಲಿಡಬೇಕು.

ಹೂಡಿಕೆ ಮಾಡುವುದು ಹೇಗೆ?: ನೀವು ಪಡೆಯುವ ಇನ್‌ಕ್ರಿಮೆಂಟ್‌ನ ಒಂದು ಭಾಗವನ್ನು ಹೂಡಿಕೆ ಮಾಡಿ. ಹೆಚ್ಚುವರಿ ಆದಾಯದಲ್ಲಿ ಕನಿಷ್ಠ ಶೇ.75ರನ್ನು ಉಳಿತಾಯ ಯೋಜನೆಗಳಿಗೆ ವಿನಿಯೋಗಿಸಬೇಕು. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ ಮತ್ತು ಹೆಚ್ಚಾಗಿ ಉಳಿಸಲು ಪ್ರಯತ್ನಿಸಿ. ಇದು ದೀರ್ಘಾವಧಿಯಲ್ಲಿ ನಿಮ್ಮ ಹಣಕಾಸು ವ್ಯವಸ್ಥೆ ಸುಧಾರಿಸುತ್ತದೆ. ಇದು ಭವಿಷ್ಯದ ಭರವಸೆ ನೀಡುತ್ತದೆ.

ಸಂಬಳ ನಿರ್ವಹಣೆ ಸಲಹೆಗಳು: ಸಂಬಳ ಹೆಚ್ಚಳದ ನಂತರ, ಅದನ್ನು ಸರಿಯಾಗಿ ನಿರ್ವಹಿಸಬೇಕು. ಅದು ಹೇಗೆಂದು ನೋಡೋಣ...

  • ತುರ್ತು ನಿಧಿ: ಅನಿರೀಕ್ಷಿತ ವೆಚ್ಚಗಳು ಮತ್ತು ಹಣಕಾಸಿನ ತುರ್ತು ಸ್ಥಿತಿಗಳನ್ನು ಪೂರೈಸಲು ತುರ್ತು ನಿಧಿ ಸ್ಥಾಪಿಸಬೇಕು. ಕನಿಷ್ಠ 3ರಿಂದ 6 ತಿಂಗಳವರೆಗೆ ಸಾಕಷ್ಟು ಹಣ ತೆಗೆದಿರಿಸಿ. ಅಂದರೆ, ಲಿಕ್ವಿಡಿಟಿ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಳ್ಳುವುದು.
  • ಪಾವತಿಸಬೇಕಾದ ಸಾಲಗಳು: ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಪಾವತಿಸಿ. ಇದು ನಿಮ್ಮ ಮೇಲಿನ ಹೆಚ್ಚಿನ ಬಡ್ಡಿಯ ಹೊರೆ ಕಡಿಮೆ ಮಾಡುತ್ತದೆ. ಇದಲ್ಲದೆ, ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಹೆಚ್ಚಾಗುತ್ತದೆ.
  • ಹೂಡಿಕೆಗಳು: ದೀರ್ಘಾವಧಿಯ ಬೆಳವಣಿಗೆಯನ್ನು ಸಾಧಿಸಲು ಈಕ್ವಿಟಿಗಳು, ಸ್ಥಿರ ಠೇವಣಿಗಳು, ರಿಯಲ್ ಎಸ್ಟೇಟ್ ಮತ್ತು ಚಿನ್ನದಂತಹ ವಿವಿಧ ಹೂಡಿಕೆ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಬೇಕು. ಇದರರ್ಥ ಪೋರ್ಟ್ಫೋಲಿಯೊ ವೈವಿಧ್ಯೀಕರಣ. ಇದು ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ. ದೀರ್ಘಾವಧಿಯಲ್ಲಿ ಉತ್ತಮ ಲಾಭ ಉಂಟು ಮಾಡುತ್ತದೆ.
  • ನಿವೃತ್ತಿ ಯೋಜನೆ: ನಿಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಲು ಉದ್ಯೋಗಿಗಳ ಭವಿಷ್ಯ ನಿಧಿ (EPF), ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಇತ್ಯಾದಿಗಳನ್ನು ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು.
  • ಜೀವನಶೈಲಿಯಲ್ಲಿ ಬದಲಾವಣೆ: ಸಂಬಳ ಹೆಚ್ಚಾದಾಗ ಅನೇಕ ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸುತ್ತಾರೆ. ಐಷಾರಾಮಿ ವಸ್ತುಗಳನ್ನು ಖರೀದಿಸುತ್ತಾರೆ. ಅನಗತ್ಯ ಮತ್ತು ದುಂದು ವೆಚ್ಚಗಳನ್ನು ಖರ್ಚು ಮಾಡುತ್ತಾರೆ. ಇದರಿಂದ ಭವಿಷ್ಯದಲ್ಲಿ ಆರ್ಥಿಕ ಹಾನಿಯಾಗುವ ಸಂಭವವಿದೆ. ಆದ್ದರಿಂದ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಬೇಕು. ಆರಾಮವಾಗಿ ಬದುಕುತ್ತಿರುವಾಗ ಭವಿಷ್ಯಕ್ಕಾಗಿ ಉಳಿತಾಯ ಮತ್ತು ಹೂಡಿಕೆ ಮಾಡಬೇಕು.

ಇದನ್ನೂ ಓದಿ: ಪೋಷಕರೇ, ಮಕ್ಕಳಿಗಾಗಿ ಫಿಕ್ಸೆಡ್ ಡೆಪಾಸಿಟ್(FD) ಮಾಡುವಾಗ ಈ ಸಂಗತಿಗಳನ್ನು ತಿಳಿಯಿರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.