ETV Bharat / business

ಭಾರತದಿಂದ ಬಾಳೆಹಣ್ಣು ತರಿಸಿಕೊಳ್ಳಲಾರಂಭಿಸಿದ ರಷ್ಯಾ: ಕಾರಣ ಏನು ಗೊತ್ತಾ?

author img

By ETV Bharat Karnataka Team

Published : Feb 7, 2024, 2:17 PM IST

ರಷ್ಯಾ ಭಾರತದಿಂದ ಬಾಳೆಹಣ್ಣು ತರಿಸಿಕೊಳ್ಳಲು ಆರಂಭಿಸಿದ್ದು, ಕಳೆದ ಜನವರಿಯಲ್ಲಿ ಮೊದಲನೇ ಬ್ಯಾಚಿನ ಹಣ್ಣುಗಳು ರಷ್ಯಾ ತಲುಪಿವೆ.

Russia starts exporting bananas to India after Moscow stops purchase from Ecuador

ನವದೆಹಲಿ: ಭಾರತವು ರಷ್ಯಾಕ್ಕೆ ಬಾಳೆಹಣ್ಣುಗಳನ್ನು ಪೂರೈಸಲು ಪ್ರಾರಂಭಿಸಿದ್ದು, ಭವಿಷ್ಯದಲ್ಲಿ ರಫ್ತು ಪ್ರಮಾಣವನ್ನು ಹೆಚ್ಚಿಸಲು ಯೋಜಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ರಷ್ಯಾ ಈ ಹಿಂದೆ ಈಕ್ವೆಡಾರ್​ನಿಂದ ದೊಡ್ಡ ಪ್ರಮಾಣದಲ್ಲಿ ಬಾಳೆಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಅಲ್ಲಿನ ಉತ್ಪನ್ನವು ಕಳಪೆ ದರ್ಜೆಯದಾಗಿದ್ದರಿಂದ ಆ ಹಣ್ಣುಗಳನ್ನು ಖರೀದಿಸುವುದನ್ನು ರಷ್ಯಾ ನಿಲ್ಲಿಸಿದೆ.

"ಭಾರತದಿಂದ ಬಾಳೆಹಣ್ಣುಗಳ ಮೊದಲ ಬ್ಯಾಚ್ 2024 ರ ಜನವರಿಯಲ್ಲಿ ರಷ್ಯಾಗೆ ಆಗಮಿಸಿದೆ. ಮುಂದಿನ ಬ್ಯಾಚ್​ ಅನ್ನು ಈ ಫೆಬ್ರವರಿ ಅಂತ್ಯದ ವೇಳೆಗೆ ಯೋಜಿಸಲಾಗಿದೆ. ಭವಿಷ್ಯದಲ್ಲಿ ರಷ್ಯಾದ ಮಾರುಕಟ್ಟೆಗೆ ಭಾರತೀಯ ಬಾಳೆಹಣ್ಣುಗಳನ್ನು ರಫ್ತು ಮಾಡುವ ಪ್ರಮಾಣವನ್ನು ಹೆಚ್ಚಿಸಲಾಗುವುದು" ಎಂದು ರಷ್ಯಾದ ಫೆಡರಲ್ ಸರ್ವಿಸ್ ಆಫ್ ವೆಟರ್ನರಿ ಅಂಡ್ ಫೈಟೊಸಾನಿಟರಿ ಕಚೇರಿಯನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ರಷ್ಯಾದಿಂದ ಖರೀದಿಸಿದ ಮಿಲಿಟರಿ ಉಪಕರಣಗಳನ್ನು ಈಕ್ವೆಡಾರ್ ಅಮೆರಿಕ ನೀಡುತ್ತಿದೆ ಹಾಗೂ ಯುಎಸ್​ ನಂತೆ ಅವುಗಳನ್ನು ಉಕ್ರೇನ್​ಗೆ ಪೂರೈಸುತ್ತಿದೆ ಎಂದು ಬಲವಾಗಿ ನಂಬಿರುವ ರಷ್ಯಾ ಈ ಬಗ್ಗೆ ಈಕ್ವೆಡಾರ್ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಈಕ್ವೆಡಾರ್​ನಿಂದ ರಷ್ಯಾ ಬಾಳೆಹಣ್ಣು ಆಮದು ನಿಲ್ಲಿಸಲು ಇದೇ ಮೂಲ ಕಾರಣವಾಗಿದೆ ಎಂದು ಕೆಲ ಮಾಧ್ಯಮ ವರದಿಗಳು ಹೇಳಿವೆ. ಆದಾಗ್ಯೂ, ಈಕ್ವೆಡಾರ್ ನೊಂದಿಗಿನ ರಾಜತಾಂತ್ರಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಆಮದು ನಿಲ್ಲಿಸಲಾಗಿದೆ ಎಂದು ರಷ್ಯಾ ಅಧಿಕಾರಿಗಳು ಹೇಳಿಲ್ಲ.

ರಷ್ಯಾದ ಆಹಾರ ಸುರಕ್ಷತಾ ಪರಿಶೀಲನಾ ಸಂಸ್ಥೆ ಭಾರತದಿಂದ ರಷ್ಯಾಕ್ಕೆ ಹಣ್ಣುಗಳ ಪೂರೈಕೆಗೆ ಸಂಬಂಧಿಸಿದಂತೆ ದೇಶದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಸ್ಯ ಸಂರಕ್ಷಣೆ, ಕ್ವಾರಂಟೈನ್ ಮತ್ತು ಸಂಗ್ರಹಣೆ ನಿರ್ದೇಶನಾಲಯದ ಪ್ರತಿನಿಧಿಗಳೊಂದಿಗೆ ಚರ್ಚಿಸಿದೆ. ರಷ್ಯಾದ ಮಾರುಕಟ್ಟೆಗೆ ಹಣ್ಣುಗಳ ಪೂರೈಕೆಯ ವ್ಯಾಪ್ತಿಯನ್ನು ವಿಸ್ತರಿಸಲು ಭಾರತ ಆಸಕ್ತಿ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ. ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ಪಾಶ್ಚಿಮಾತ್ಯ ದೇಶಗಳು 2022ರಲ್ಲಿ ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿದ ನಂತರ ಭಾರತದೊಂದಿಗಿನ ರಷ್ಯಾದ ವ್ಯಾಪಾರ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತಿವೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಪ್ರಕಾರ, ಭಾರತವು 2023 ರಲ್ಲಿ 33 ಮಿಲಿಯನ್ ಟನ್ ಬಾಳೆಹಣ್ಣುಗಳನ್ನು ಉತ್ಪಾದಿಸುವ ಮೂಲಕ ವಿಶ್ವದ ಅತಿದೊಡ್ಡ ಬಾಳೆಹಣ್ಣು ಉತ್ಪಾದಕನಾಗಿದೆ. 12 ಮಿಲಿಯನ್ ಟನ್ ಉತ್ಪಾದಿಸುವ ಚೀನಾ ಮತ್ತು 8.7 ಮಿಲಿಯನ್ ಟನ್ ಉತ್ಪಾದಿಸುವ ಇಂಡೋನೇಷ್ಯಾ ನಂತರದ ಸ್ಥಾನಗಳಲ್ಲಿವೆ.

ಇದನ್ನೂ ಓದಿ : ಆರ್​ಬಿಐ ಎಂಪಿಸಿ ಸಭೆ ಫೆ.8ಕ್ಕೆ: ಬಡ್ಡಿದರ ಯಥಾಸ್ಥಿತಿ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.