ETV Bharat / business

ಜೂನ್ ತ್ರೈಮಾಸಿಕದಲ್ಲಿ ಚಿಲ್ಲರೆ ಸಾಲಗಳ ಬೆಳವಣಿಗೆ ಕುಂಠಿತ: ಸಿಬಿಲ್ ವರದಿ, ಕುಸಿತಕ್ಕೆ ಕಾರಣವೇನು ? - RETAIL CREDIT GROWTH - RETAIL CREDIT GROWTH

ಜೂನ್ ತ್ರೈಮಾಸಿಕದಲ್ಲಿ ಚಿಲ್ಲರೆ ಸಾಲಗಳ ಪ್ರಮಾಣ ಇಳಿಕೆಯಾಗಿದೆ ಎಂದು ಸಿಬಿಲ್ ವರದಿ ಹೇಳಿದೆ.

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ (IANS)
author img

By ETV Bharat Karnataka Team

Published : Sep 23, 2024, 4:01 PM IST

ಮುಂಬೈ: ಜೂನ್ ತ್ರೈಮಾಸಿಕದಲ್ಲಿ ಚಿಲ್ಲರೆ ಸಾಲ (retail credit) ಬಟವಾಡೆಗಳು ನಿಧಾನಗತಿಯಲ್ಲಿ ಬೆಳವಣಿಗೆಯಾಗಿವೆ ಎಂದು ವರದಿಯೊಂದು ಸೋಮವಾರ ತಿಳಿಸಿದೆ. ಹಣಕಾಸು ಸಂಸ್ಥೆಗಳು ಸಾಲದ ಪೂರೈಕೆಯನ್ನು ಬಿಗಿಗೊಳಿಸಿದ್ದರಿಂದ, ವಿಶೇಷವಾಗಿ ಕ್ರೆಡಿಟ್ ಕಾರ್ಡ್ ಗಳು, ಗ್ರಾಹಕ ಬಾಳಿಕೆ ಬರುವ ವಸ್ತುಗಳ ಮೇಲಿನ ಸಾಲಗಳು ಮತ್ತು ವೈಯಕ್ತಿಕ ಸಾಲಗಳಂತಹ ಬಳಕೆ ಆಧಾರಿತ ಉತ್ಪನ್ನಗಳ ಚಿಲ್ಲರೆ ಸಾಲದ ಬೆಳವಣಿಗೆಯು ಜೂನ್ ತ್ರೈಮಾಸಿಕದಲ್ಲಿ ಇಳಿಮುಖವಾಗಿದೆ ಎಂದು ವರದಿ ಹೇಳಿದೆ.

ನಿರಂತರ ಕುಸಿತ: ಟ್ರಾನ್ಸ್ ಯೂನಿಯನ್ ಸಿಬಿಲ್ ಕ್ರೆಡಿಟ್ ಮಾರ್ಕೆಟ್ ಇಂಡಿಕೇಟರ್ (ಸಿಎಂಐ) 1 ವರದಿಯು "ವಿಶೇಷವಾಗಿ ಯುವ ಗ್ರಾಹಕರು ಮೊದಲ ಬಾರಿಗೆ ಸಾಲ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ನ್ಯೂ-ಟು-ಕ್ರೆಡಿಟ್ (ಎನ್ ಟಿಸಿ) ಪರಿಮಾಣಗಳಲ್ಲಿ ನಿರಂತರ ಕುಸಿತ ಕಂಡುಬಂದಿದೆ" ಎಂದು ಹೇಳಿದೆ.

ಕಳೆದ ಐದು ವರ್ಷಗಳಲ್ಲಿ ಎನ್ ಟಿಸಿ ಗ್ರಾಹಕರಿಗೆ ನೀಡಲಾದ ಸಾಲಗಳ ಪ್ರಮಾಣ ಸ್ಥಿರವಾಗಿ ಕುಸಿದಿದೆ. ಚಿಲ್ಲರೆ ಸಾಲಗಳಲ್ಲಿ ಎನ್​ಟಿಸಿ ಗ್ರಾಹಕರ ಪಾಲು ಜೂನ್ 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 16 ರಿಂದ ಜೂನ್ ತ್ರೈಮಾಸಿಕದಲ್ಲಿ ಶೇಕಡಾ 12ಕ್ಕೆ ಇಳಿದಿದೆ. ಒಟ್ಟಾರೆ ಸಾಲ ಬಟವಾಡೆ ಪ್ರಮಾಣವು ಮಧ್ಯಮ ದರದಲ್ಲಿ ಬೆಳೆಯುತ್ತಿದೆ. ಗೃಹ ಸಾಲಗಳು ಶೇಕಡಾ 9ರಷ್ಟು ಕುಸಿದಿದೆ ಮತ್ತು ಕ್ರೆಡಿಟ್ ಕಾರ್ಡ್ ಸಾಲಗಳು ಶೇಕಡಾ 30 ರಷ್ಟು ಕುಸಿದಿವೆ ಎಂದು ವರದಿ ತೋರಿಸಿದೆ. ದ್ವಿಚಕ್ರ ವಾಹನ ಸಾಲವು ಪರಿಮಾಣ ಮತ್ತು ಮೌಲ್ಯದಲ್ಲಿ ಎರಡಂಕಿ ಬೆಳವಣಿಗೆಯನ್ನು ಹೊಂದಿರುವ ಏಕೈಕ ಸಾಲ ಉತ್ಪನ್ನವಾಗಿದೆ.

ಸಣ್ಣಸಾಲಗಳ ಬೆಳವಣಿಗೆಯಲ್ಲಿ ನಿಧಾನ: ಕ್ರೆಡಿಟ್ ಕಾರ್ಡ್​ಗಳನ್ನು ಹೊರತುಪಡಿಸಿ, ಬಹುತೇಕ ಸಾಲ ಉತ್ಪನ್ನಗಳ ಸಾಲ ಕಾರ್ಯಕ್ಷಮತೆ ಸುಧಾರಿಸುತ್ತಲೇ ಇದೆ. ಆದಾಗ್ಯೂ, ಎಲ್ಲಾ ಸಾಲ ಉತ್ಪನ್ನಗಳ ಪೈಕಿ ವಿಶೇಷವಾಗಿ ಸಣ್ಣ-ಪ್ರಮಾಣದ ಸಾಲಗಳ ಬೆಳವಣಿಗೆಯು ನಿಧಾನವಾಗಿದೆ.

ಟ್ರಾನ್ಸ್ ಯೂನಿಯನ್ ಸಿಬಿಲ್​​​ನ ಎಂಡಿ ಮತ್ತು ಸಿಇಒ ರಾಜೇಶ್ ಕುಮಾರ್ ಮಾತನಾಡಿ, "ಸಮಯೋಚಿತ ನಿಯಂತ್ರಕ ಮಾರ್ಗದರ್ಶನ ಮತ್ತು ತುಲನಾತ್ಮಕವಾಗಿ ಹೆಚ್ಚಿನ ಕ್ರೆಡಿಟ್ - ಠೇವಣಿ ಅನುಪಾತವನ್ನು ಗಮನಿಸಿದರೆ, ಚಿಲ್ಲರೆ ಸಾಲದ ಬೆಳವಣಿಗೆಯು ನಿಧಾನವಾಗಿರುವುದು ಕಂಡು ಬರುತ್ತಿದೆ" ಎಂದು ಹೇಳಿದರು.

"ಮಾಹಿತಿ ವಿಶ್ಲೇಷಣೆ ಮತ್ತು ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಬಳಸಿಕೊಂಡು ಈ ನ್ಯೂ-ಟು-ಕ್ರೆಡಿಟ್ ಗ್ರಾಹಕರಿಗೆ ಸಾಲಗಳನ್ನು ನೀಡುವ ಮೂಲಕ ಸುಸ್ಥಿರ ಸಾಲ ಬೆಳವಣಿಗೆಯನ್ನು ಸಾಧಿಸಬಹುದು. ಸಾಲ ಪಡೆಯಲು ಅರ್ಹವಾದ ಗ್ರಾಹಕರ ಹೊಸ ಮೂಲಗಳು ಭಾರತದ ಸಾಮಾಜಿಕ-ಆರ್ಥಿಕ ವರ್ಗಗಳು ಮತ್ತು ಭೌಗೋಳಿಕತೆಗಳಲ್ಲಿ ಅಸ್ತಿತ್ವದಲ್ಲಿವೆ ಮತ್ತು ಇವು ಲಾಭದಾಯಕ ಬೆಳವಣಿಗೆ ಮತ್ತು ಆರ್ಥಿಕ ಸೇರ್ಪಡೆಯ ಮಾರ್ಗಗಳಾಗಿವೆ" ಎಂದು ಅವರು ಹೇಳಿದರು.

ಇದನ್ನೂ ಓದಿ : ಈ ಸೀಸನ್​ನಲ್ಲಿ ಎಷ್ಟು ಲಕ್ಷ ವಿವಾಹಗಳು ನಡೆಯಲಿವೆ ಗೊತ್ತಾ?: ಖರ್ಚು ಕೇಳಿದರೆ ದಂಗಾಗುವಿರಿ! - Weddings Season

ETV Bharat Logo

Copyright © 2024 Ushodaya Enterprises Pvt. Ltd., All Rights Reserved.