ETV Bharat / business

ನಿಮ್ಮ ಕ್ರೆಡಿಟ್ ವರದಿಯಿಂದ ’ಲೇಟ್​ ಪೇಮಂಟ್‘​ ತಪ್ಪಾದ ದಾಖಲಿಸುವಿಕೆ ಸರಿಪಡಿಸುವುದು ಹೇಗೆ?: ಇದನ್ನು ಮಾಡಿ ಸಾಕು! - REMOVE LATE PAYMENTS CREDIT REPORT

author img

By ETV Bharat Karnataka Team

Published : Aug 1, 2024, 7:55 AM IST

ನಿಮ್ಮ ಕ್ರೆಡಿಟ್ ವರದಿಯಲ್ಲಿ ತಪ್ಪುಗಳಿವೆಯೇ? ನಿಮ್ಮ ಲೋನ್/ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ನೀವು ಸಮಯಕ್ಕೆ ಸರಿಯಾಗಿ ಪಾವತಿಸಿದ್ದೀರಿ. ಆದರೆ, ನಿಮ್ಮ ಕ್ರೆಡಿಟ್ ಬ್ಯೂರೋ ವರದಿಯಲ್ಲಿ 'ಲೇಟ್ ಪೇಮೆಂಟ್' ಎಂದು ಏನಾದರೂ ತೋರಿಸುತ್ತಿದ್ದರೆ ಆ ಬಗ್ಗೆ ಎಚ್ಚರವಹಿಸಿ. ಅಷ್ಟೇ ಅಲ್ಲ ಈ ತಪ್ಪು ಮಾಹಿತಿಯನ್ನು ಬದಲಾಯಿಸಬಹುದು. ಅದು ಹೇಗೆ ಎಂಬುದನ್ನು ನಾವು ಈ ವರದಿಯಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ.

remove-late-payments-in-credit-report-how-to-correct-a-late-payment-record-on-your-credit-report-
ನಿಮ್ಮ ಕ್ರೆಡಿಟ್ ವರದಿಯಿಂದ ಲೇಟ್​ ಪೇಮಂಟ್​ ವರದಿ ತೆಗೆದುಹಾಕುವುದು ಹೇಗೆ? ಇದನ್ನು ಮಾಡಿ ಸಾಕು! (ETV Bharat)

ಉತ್ತಮ ಕ್ರೆಡಿಟ್ ಸ್ಕೋರ್ ಯಾರಿಗೆ ಬೇಡ ಹೇಳಿ. ಈ ಕ್ರೆಡಿಟ್ ಸ್ಕೋರ್ ನಿಮ್ಮ ಮುಂದಿನ ವ್ಯವಹಾರಗಳಿಗೆ ಉಪಯೋಗ ಆಗಲಿದೆ. ಉತ್ತಮ ಕ್ರೆಡಿಟ್ ಇತಿಹಾಸ ಇದ್ದರೆ ಸಾಲ ಪಡೆಯುವುದು ಸುಲಭ. ನಾವು ತೆಗೆದುಕೊಂಡ ಸಾಲಗಳು ಮತ್ತು ನಾವು ಬಳಸಿದ ಕ್ರೆಡಿಟ್ ಕಾರ್ಡ್ ಹಣವನ್ನು ಸಮಯಕ್ಕೆ ಮರುಪಾವತಿ ಮಾಡಿದರೆ ಮಾತ್ರವೇ ನಮಗೆ ಉತ್ತಮ ಕ್ರೆಡಿಟ್ ಸ್ಕೋರ್ ಲಭ್ಯವಾಗುತ್ತದೆ. ಸಕಾಲಿಕ ಪಾವತಿಗಳನ್ನು ಮಾಡಲು ವಿಫಲವಾದರೆ ಕ್ರೆಡಿಟ್ ಬ್ಯೂರೋಗಳು ಖಂಡಿತವಾಗಿ ನಿಮ್ಮ ಸ್ಕೋರ್​​​​ ಅನ್ನು ಋಣಾತ್ಮಕ ಎಂದು ಪರಿಗಣಿಸುತ್ತವೆ. ಆದರೆ, ಕೆಲವೊಮ್ಮೆ ಕ್ರೆಡಿಟ್ ಬ್ಯೂರೋಗಳು ನಾವು ಸರಿಯಾದ ವೇಳೆಗೆ ಹಣ ಪಾವತಿಸಿದ್ದರೂ ಅದನ್ನು ತೋರಿಸುವುದಿಲ್ಲ. ತಾಂತ್ರಿಕ ಕಾರಣಗಳಿಂದ ಹೀಗಾಗುವ ಸಂಭವ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಈ ದೋಷಗಳನ್ನು ಸರಿಪಡಿಸಲು ನಾವು ಏನು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಉತ್ತಮ.

ಪ್ರಮುಖ ಮೂರು ಕ್ರೆಡಿಟ್ ಬ್ಯೂರೋಗಳು: ಕ್ರೆಡಿಟ್ ಬ್ಯೂರೋಗಳು ನಮ್ಮ ಕ್ರೆಡಿಟ್ ಇತಿಹಾಸವನ್ನು ಮೌಲ್ಯಮಾಪನ ಮಾಡುತ್ತವೆ. ಅವರು ನಮ್ಮ ವಹಿವಾಟುಗಳು ಮತ್ತು ಆರ್ಥಿಕ ಶಿಸ್ತಿನ ಕುರಿತು ವರದಿಗಳನ್ನು ಬಿಲ್ಡ್​ ಮಾಡುತ್ತವೆ ಮತ್ತು ಅದನ್ನು ದಾಖಲಿಸುತ್ತವೆ. ನಮ್ಮ ದೇಶದಲ್ಲಿ ಮುಖ್ಯವಾಗಿ ಮೂರು ಕ್ರೆಡಿಟ್ ಬ್ಯೂರೋಗಳಿವೆ. ಅವುಗಳೆಂದರೆ CIBIL, Experian, Equifax. ಇವುಗಳಲ್ಲಿ ಸಿಬಿಲ್ ಅತ್ಯಂತ ಪ್ರಸಿದ್ಧವಾಗಿದೆ. ಇದು ಎಲ್ಲರಿಗೂ ಚಿರಪರಿಚಿತ. ಅನೇಕ ಬ್ಯಾಂಕುಗಳು CIBIL ಸ್ಕೋರ್ ಅನ್ನು ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಆಧಾರವಾಗಿ ಬಳಸುತ್ತವೆ. ಇತರ ಹಣಕಾಸು ಸಂಸ್ಥೆಗಳು ಎಕ್ಸ್‌ಪೀರಿಯನ್ ಮತ್ತು ಈಕ್ವಿಫ್ಯಾಕ್ಸ್‌ನಿಂದ ವರದಿಗಳನ್ನೂ ಕೂಡಾ ಪರಿಗಣಿಸುತ್ತವೆ.

ಕ್ರೆಡಿಟ್ ಬ್ಯೂರೋಗಳಿಗೆ ದೂರು ನೀಡುವುದು ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಪಾವತಿಸಿದ್ದರೂ, ಯಾವುದೇ ಕ್ರೆಡಿಟ್ ಬ್ಯೂರೋ ವರದಿಯಲ್ಲಿ 'ಲೇಟ್ ಪೇಮೆಂಟ್' ಎಂದು ತೋರಿಸಿದರೆ ತಕ್ಷಣವೇ ನಾವು ಆ ಬ್ಯೂರೋಗಳಿಗೆ ಮೇಲ್​ ಮೂಲಕ ದೂರು ಸಲ್ಲಿಸಬೇಕು. ಸರಿ ಪಡಿಸಲು ಮನವಿ ಮಾಡಿಕೊಳ್ಳಬೇಕು. ಇದಕ್ಕಾಗಿ ನಾವು ಕೆಲವು ದಾಖಲೆಗಳನ್ನು ಸಿದ್ಧಪಡಿಸಬೇಕು. ಸಮಯಕ್ಕೆ ಪಾವತಿಯನ್ನು ಪಾವತಿಸಿದ್ದೇವೆ ಎಂಬುದಕ್ಕೆ ಪುರಾವೆಯಾಗಿ ಬ್ಯಾಂಕ್ ಸ್ಟೇಟ್‌ಮೆಂಟ್, ಲೋನ್ ಸ್ಟೇಟ್‌ಮೆಂಟ್ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಸ್ಟೇಟ್‌ಮೆಂಟ್ ನಮ್ಮ ಬಳಿ ಇಟ್ಟುಕೊಂಡಿರಬೇಕು. ಯಾವ ದಿನ ಮತ್ತು ಯಾವ ಸಮಯದಲ್ಲಿ ನಾವು ಮರುಪಾವತಿ ಮಾಡುತ್ತೇವೆ? ಬ್ಯಾಂಕ್‌ನಿಂದ ಹಣ ಕಡಿತಗೊಂಡಿದ್ದು ಯಾವಾಗ? ದೂರವಾಣಿ ಸಂದೇಶಗಳು, ಬ್ಯಾಂಕ್ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಸ್ಟೇಟ್‌ಮೆಂಟ್ ಪಿಡಿಎಫ್ ದಾಖಲೆಗಳ ವಿವರಗಳೊಂದಿಗೆ ಸಂಬಂಧಿಸಿದ ಕ್ರೆಡಿಟ್ ಬ್ಯೂರೋಗೆ ಇ-ಮೇಲ್​ ಮೂಲಕ ದೂರು ದಾಖಲಿಸಬೇಕು. ತಪ್ಪನ್ನು ಸರಿ ಮಾಡುವಂತೆ ದಾಖಲೆ ಸಮೇತ ಮನವಿ ಮಾಡಬೇಕು.

ನಾವು ಕಳುಹಿಸಿದ ದೂರನ್ನು ಆಯಾ ಕ್ರೆಡಿಟ್ ಬ್ಯೂರೋಗಳು ಪರಿಶೀಲನೆ ಮಾಡುತ್ತದೆ. ನಾವು ನಿಮಗೆ ಹೇಳುತ್ತಿರುವ ದಿನಾಂಕಗಳಲ್ಲಿ ಮರುಪಾವತಿಯನ್ನು ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಬ್ಯಾಂಕ್ ನಿರ್ಧರಿಸುತ್ತದೆ. ಅವರ ಕಡೆಯಿಂದ ಕ್ರೆಡಿಟ್ ವರದಿಯಲ್ಲಿ ತಪ್ಪು ಕಂಡುಬಂದರೆ, ಅವರು ಖಂಡಿತವಾಗಿಯೂ ಕ್ರೆಡಿಟ್ ವರದಿಯಲ್ಲಿ ಬದಲಾವಣೆಗಳನ್ನು ಮಾಡುತ್ತಾರೆ. ನೀವು ಸೂಚಿಸಿದ ಭಾಗಕ್ಕೆ ತಿದ್ದುಪಡಿಗಳನ್ನು ಮಾಡುತ್ತದೆ. ಈ ಬಗ್ಗೆ ದೂರುದಾರರಿಗೆ ಮಾಹಿತಿ ಕೂಡಾ ನೀಡುತ್ತವೆ.

ಇದನ್ನು ಓದಿ:ಭಾರತ ಈಗ ವಿಶ್ವದ 4ನೇ ಅತಿದೊಡ್ಡ ಷೇರು ಮಾರುಕಟ್ಟೆ: 462 ಲಕ್ಷ ಕೋಟಿ ರೂ.ಗೆ ತಲುಪಿದ ಬಂಡವಾಳ - best performing stock market

ಸಾಫ್ಟ್​ ಬ್ಯಾಂಕ್ ಬೆಂಬಲಿತ ಯುನಿಕಾಮರ್ಸ್​ ಐಪಿಒ ಆಗಸ್ಟ್​ 6ರಂದು ಬಿಡುಗಡೆ - Stock Market

ಟಿಕೆಟ್ ರದ್ದತಿಯಿಂದ ಇಲಾಖೆಗೆ 1,229 ಕೋಟಿ ಭರ್ಜರಿ ಆದಾಯ: ರೈಲ್ವೆ ಟಿಕೆಟ್​ ರದ್ದತಿ ಬಗ್ಗೆ ನಿಮಗೆಷ್ಟು ಗೊತ್ತು? - TRAIN TICKET CANCELLATION RULES

ETV Bharat Logo

Copyright © 2024 Ushodaya Enterprises Pvt. Ltd., All Rights Reserved.