ETV Bharat / business

ಏಪ್ರಿಲ್​ನಲ್ಲಿ EPFOಗೆ ದಾಖಲೆಯ 20 ಲಕ್ಷ ಸದಸ್ಯರ ಸೇರ್ಪಡೆ: ಶೇ 31ರಷ್ಟು ಏರಿಕೆ - EPFO Data

author img

By ETV Bharat Karnataka Team

Published : Jun 20, 2024, 8:05 PM IST

ಈ ವರ್ಷದ ಏಪ್ರಿಲ್​ನಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಗೆ 18.92 ಲಕ್ಷ ನಿವ್ವಳ ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.

EPFO ಗೆ ದಾಖಲೆಯ 20 ಲಕ್ಷ ಸದಸ್ಯರ ಸೇರ್ಪಡೆ
EPFO ಗೆ ದಾಖಲೆಯ 20 ಲಕ್ಷ ಸದಸ್ಯರ ಸೇರ್ಪಡೆ (IANS)

ನವದೆಹಲಿ: ಈ ವರ್ಷದ ಏಪ್ರಿಲ್​ನಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಗೆ 18.92 ಲಕ್ಷ ನಿವ್ವಳ ಸದಸ್ಯರು ಸೇರ್ಪಡೆಯಾಗಿದ್ದಾರೆ. ಇದು 2018 ರ ಏಪ್ರಿಲ್​ನಲ್ಲಿ ಮೊದಲ ಬಾರಿಗೆ ವೇತನದಾರರ ಡೇಟಾ ಪ್ರಕಟವಾದ ನಂತರದ ಗರಿಷ್ಠ ಮಟ್ಟವಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ಮಾರ್ಚ್ 2024 ರ ಇದೇ ಅಂಕಿಅಂಶಕ್ಕೆ ಹೋಲಿಸಿದರೆ ನಿವ್ವಳ ಸದಸ್ಯರ ಸಂಖ್ಯೆ ಶೇಕಡಾ 31.29 ರಷ್ಟು ಹೆಚ್ಚಾಗಿದೆ ಎಂದು ತಾತ್ಕಾಲಿಕ ವೇತನದಾರರ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ವಾರ್ಷಿಕ ವಿಶ್ಲೇಷಣೆಯ ಪ್ರಕಾರ ಏಪ್ರಿಲ್ 2023 ಕ್ಕೆ ಹೋಲಿಸಿದರೆ ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ ಶೇಕಡಾ 10 ರಷ್ಟು ಬೆಳವಣಿಗೆಯಾಗಿದೆ. ಹೆಚ್ಚಿದ ಉದ್ಯೋಗಾವಕಾಶಗಳು, ಉದ್ಯೋಗಿಗಳ ಪ್ರಯೋಜನಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಮತ್ತು ಇಪಿಎಫ್ಒನ ಔಟ್ ರೀಚ್ ಕಾರ್ಯಕ್ರಮಗಳ ಕಾರಣದಿಂದ ಇಪಿಎಫ್​ ಸದಸ್ಯರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇನ್ನು ಏಪ್ರಿಲ್ 2024 ರಲ್ಲಿ ಸುಮಾರು 8.87 ಲಕ್ಷ ಹೊಸ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ ಎಂದು ದತ್ತಾಂಶದಿಂದ ತಿಳಿದು ಬಂದಿದೆ.

ದತ್ತಾಂಶದ ಗಮನಾರ್ಹ ಅಂಶವೆಂದರೆ- 18 ರಿಂದ 25 ವಯೋಮಾನದವರು ಅತ್ಯಧಿಕ ಸಂಖ್ಯೆಯಲ್ಲಿ ಇಪಿಎಫ್​ಗೆ ಸೇರಿರುವುದು. ಇದು ಏಪ್ರಿಲ್ 2024 ರಲ್ಲಿ ಸೇರ್ಪಡೆಯಾದ ಒಟ್ಟು ಹೊಸ ಸದಸ್ಯರ ಪೈಕಿ ಗಮನಾರ್ಹ ಶೇಕಡಾ 55.5 ರಷ್ಟಿದೆ. ಸಂಘಟಿತ ಉದ್ಯೋಗ ವಲಯಕ್ಕೆ ಸೇರುವ ಹೆಚ್ಚಿನ ವ್ಯಕ್ತಿಗಳು ಯುವಕರು ಅಥವಾ ಮೊದಲ ಬಾರಿಯ ಉದ್ಯೋಗಾಕಾಂಕ್ಷಿಗಳು ಎಂಬುದನ್ನು ಇದು ಸೂಚಿಸುತ್ತದೆ.

ವೇತನದಾರರ ಮಾಹಿತಿಯ ಪ್ರಕಾರ, ಸರಿಸುಮಾರು 14.53 ಲಕ್ಷ ಸದಸ್ಯರು ನಿರ್ಗಮಿಸಿದ್ದಾರೆ ಮತ್ತು ನಂತರ ಮತ್ತೆ ಇಪಿಎಫ್ಒಗೆ ಸೇರಿದ್ದಾರೆ. ಈ ಅಂಕಿ ಅಂಶವು 2024 ರ ಮಾರ್ಚ್ ತಿಂಗಳಿಗೆ ಹೋಲಿಸಿದರೆ ಶೇಕಡಾ 23.15 ರಷ್ಟು ಹೆಚ್ಚಳವಾಗಿದೆ. ಈ ಸದಸ್ಯರು ತಮ್ಮ ಉದ್ಯೋಗಗಳನ್ನು ಬದಲಾಯಿಸಿದ್ದಾರೆ ಹಾಗೂ ಇಪಿಎಫ್ಒ ವ್ಯಾಪ್ತಿಗೆ ಒಳಪಡುವ ಬೇರೊಂದು ಸಂಸ್ಥೆಗಳಿಗೆ ಮತ್ತೆ ನೌಕರಿಗೆ ಸೇರಿದ್ದಾರೆ ಎಂಬುದನ್ನು ಈ ಅಂಕಿ ಅಂಶಗಳು ಸೂಚಿಸುತ್ತವೆ.

ವೇತನದಾರರ ದತ್ತಾಂಶದ ಲಿಂಗವಾರು ವಿಶ್ಲೇಷಣೆಯ ಪ್ರಕಾರ- ಸೇರ್ಪಡೆಯಾದ 8.87 ಲಕ್ಷ ಹೊಸ ಸದಸ್ಯರಲ್ಲಿ ಸುಮಾರು 2.49 ಲಕ್ಷ ಹೊಸ ಮಹಿಳಾ ಸದಸ್ಯರಿದ್ದಾರೆ. ಅಲ್ಲದೆ, ಈ ತಿಂಗಳಲ್ಲಿ ನಿವ್ವಳ ಮಹಿಳಾ ಸದಸ್ಯರ ಸೇರ್ಪಡೆ ಸುಮಾರು 3.91 ಲಕ್ಷವಾಗಿದ್ದು, ಇದು ಹಿಂದಿನ ಮಾರ್ಚ್ 2024 ಕ್ಕೆ ಹೋಲಿಸಿದರೆ ಸುಮಾರು 35.06 ಪ್ರತಿಶತದಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ : ಹೊಸ ಗರಿಷ್ಠ ಮಟ್ಟದಲ್ಲಿ ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 141 & ನಿಫ್ಟಿ 51 ಅಂಕ ಏರಿಕೆ - Share Market

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.