ETV Bharat / business

ಸತತ 6ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: ಇಎಂಐನಲ್ಲೂ ಆಗಲ್ಲ ಯಾವುದೇ ಬದಲಾವಣೆ - repo rate

ಭಾರತೀಯ ರಿಸರ್ವ್ ಬ್ಯಾಂಕ್​ ಸತತ 6ನೇ ಬಾರಿಯೂ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಮನೆ ಸಾಲದ ಇಎಂಐನಲ್ಲಿ ಯಾವುದೇ ಬದಲಾವಣೆ ಆಗಲ್ಲ. ಆದರೆ ರೆಪೋ ದರ ಇಳಿಕೆ ಆಗದೇ ಇರುವುದರಿಂದ ಸಾಲಗಾರರು ನಿರಾಶಗೊಂಡಿದ್ದಾರೆ.

ರೆಪೋ ದರ
ರೆಪೋ ದರ
author img

By ETV Bharat Karnataka Team

Published : Feb 8, 2024, 10:34 AM IST

Updated : Feb 8, 2024, 12:46 PM IST

ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ ತನ್ನ ರೆಪೋ ದರದಲ್ಲಿ ಈ ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಮೊದಲಿದ್ದ ಶೇಕಡಾ 6.5 ರಷ್ಟನ್ನು ಕಾಯ್ದುಕೊಳ್ಳಲಾಗಿದೆ. ಈ ಬಗ್ಗೆ ಗುರುವಾರ ಮಾಹಿತಿ ನೀಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣದುಬ್ಬರ ಗಣನೀಯವಾಗಿ ಇಳಿಕೆ ಕಾಣುತ್ತಿದೆ. 2024 ರ ವರ್ಷವೂ ಮತ್ತಷ್ಟು ಇಳಿಮುಖವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು, ಮುಂದಿನ ಹಣಕಾಸು ವರ್ಷ 2024-25ಕ್ಕೆ ಭಾರತದ ಜಿಡಿಪಿ ಬೆಳವಣಿಗೆ ಶೇ 7 ರಷ್ಟು ಇರಲಿದೆ ಎಂದು ಅಂದಾಜಿಸಿದೆ. ಕ್ರಮವಾಗಿ ಮೊದಲ ತ್ರೈಮಾಸಿಕದಲ್ಲಿ ಶೇ 7.2, 2ನೇ ತ್ರೈಮಾಸಿಕದಲ್ಲಿ ಶೇ 6.8, ಮೂರನೇ ತ್ರೈಮಾಸಿಕದಲ್ಲಿ ಸುಮಾರು ಶೇ 7.0 ರಷ್ಟು ಹಾಗೂ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.9 ರಷ್ಟು ಬೆಳವಣಿಗೆ ಕಂಡುಬಂದಿದೆ ಎಂದು ಆರ್‌ಬಿಐ ಹೇಳಿದೆ. ಮಾರ್ಚ್ 2024 ರಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ನೈಜ GDP ಬೆಳವಣಿಗೆಯು ರಾಷ್ಟ್ರೀಯ ಅಂಕಿ - ಅಂಶಗಳ ಕಚೇರಿಯ ಮೊದಲ ಅಂದಾಜಿಗಿಂತ 30 ಬೇಸಿಸ್ ಪಾಯಿಂಟ್‌ಗಳಿಗಿಂತ ತುಸು ಕಡಿಮೆ ಆಗಿದೆ ಎಂದೂ ವರದಿಯಲ್ಲಿ ಸೇರಿಸಿದೆ.

RBI 2024-25 ರ ಭಾರತದ ಚಿಲ್ಲರೆ ಹಣದುಬ್ಬರದ ಪ್ರಮಾಣವನ್ನು ಶೇಕಡಾ 4.5 ಕ್ಕೆ ನಿಗದಿಪಡಿಸಿದೆ. ಮೊದಲ ತ್ರೈಮಾಸಿಕದಲ್ಲಿ ಶೇ 5.0, ತ್ರೈಮಾಸಿಕ Q2ನಲ್ಲಿ ಶೇ 4.0, Q3 ನಲ್ಲಿ ಶೇ 4.6 ಮತ್ತು Q4 ನಲ್ಲಿ ಶೇ 4.7 ರಷ್ಟು ಹಣದುಬ್ಬರ ದಾಖಲಾಗಿದ್ದು, ಸಮತೋಲನ ಕಂಡುಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಏತನ್ಮಧ್ಯೆ, ಆರ್‌ಬಿಐನ ವಿತ್ತೀಯ ನೀತಿ ಸಮಿತಿಯು ತನ್ನ ಫೆಬ್ರವರಿ ಪರಿಶೀಲನಾ ಸಭೆಯಲ್ಲಿ ರೆಪೊ ದರವನ್ನು ಶೇಕಡಾ 6.5 ಕ್ಕೆ ಯಥಾಸ್ಥಿತಿಯಲ್ಲಿ ಇರಿಸಲು ಸರ್ವಾನುಮತದಿಂದ ನಿರ್ಧರಿಸಿತು. ಈ ಮೂಲಕ ಸತತ ಆರನೇ ಬಾರಿಗೆ ರೆಪೋದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ರೆಪೊ ದರವು RBI ಇತರ ಬ್ಯಾಂಕ್‌ಗಳಿಗೆ ಸಾಲ ನೀಡುವ ಬಡ್ಡಿ ದರವಾಗಿದೆ.

ಮೂರು ದಿನಗಳ ಆರ್​​ಬಿಐನ ಪರಿಶೀಲನಾ ಸಭೆಯ ನಂತರ ಶುಕ್ರವಾರ ಬೆಳಗ್ಗೆ ಆರ್ಥಿಕ ನೀತಿಗಳ ಬಗ್ಗೆ ಚರ್ಚಿಸಿದ ಬಳಿಕ ಗವರ್ನರ್ ಶಕ್ತಿಕಾಂತ ದಾಸ್ ಬಳಿಕ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಆರಾಮದಾಯಕ ಹಣದುಬ್ಬರ ಮತ್ತು ದೃಢವಾದ ಬೆಳವಣಿಗೆಯಿಂದಾಗಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇಡಲು ಕಾರಣ ಎಂದು ವಿವರಿಸಿದರು.

ಇನ್ನು ಭಾರತದಲ್ಲಿನ ಚಿಲ್ಲರೆ ಹಣದುಬ್ಬರವು ಆರ್‌ಬಿಐನ ಅಂದಾಜಿನಂತೆ ಶೇ 2-6ರ ಪ್ರತಿಶತದಲ್ಲೇ ಇದೆ. ಆದರೆ, ವಾಸ್ತವದಲ್ಲಿ 4 ಶೇಕಡಾ ಸನ್ನಿವೇಶಕ್ಕಿಂತ ಮೇಲಿದೆ ಎಂದು ಅಂದಾಜಿಸಲಾಗಿದೆ. ಡಿಸೆಂಬರ್ ನಲ್ಲಿ ಈ ಪ್ರಮಾಣ ಶೇ.5.69ರಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದ 2023-24 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 7.6 ರಷ್ಟು ಬೆಳವಣಿಗೆ ಹೊಂದಿದೆ. ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತ ಹೊರ ಹೊಮ್ಮಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 7.8 ರಷ್ಟು ಬೆಳವಣಿಗೆಯಾಗಿದೆ ಎಂದು ಶಕ್ತಿಕಾಂತ್ ದಾಸ್​ ಹೇಳಿದರು.

ಇದನ್ನು ಓದಿ:ಸರ್ಕಾರಗಳು ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು, ಉಚಿತ ಕೊಡುಗೆಗಳಿಗೆ ಅಲ್ಲ: ರಘುರಾಮ್ ರಾಜನ್

Last Updated : Feb 8, 2024, 12:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.