ETV Bharat / business

ಐಎಂಫ್​​​​​ ದೃಷ್ಟಿಕೋನವನ್ನು ತಿರಸ್ಕರಿದ ಆರ್​ಬಿಐ: ಏಕೆಂದರೆ? - ಆರ್​​ಬಿಐ

ಜಿಡಿಪಿ ಹಾಗೂ ಸಾಲದ ಅನುಪಾತದ ಬಗ್ಗೆ ಐಎಂಎಫ್​ ವ್ಯಕ್ತಪಡಿಸಿದ್ದ ಕಳವಳವನ್ನ ಆರ್​​ಬಿಐ ಅರ್ಥಶಾಸ್ತ್ರಜ್ಞರು ತಿರಸ್ಕರಿಸಿದ್ದಾರೆ.

RBI economists reject IMF views
ಐಎಂಫ್​​​​​ ದೃಷ್ಟಿಕೋನವನ್ನು ತಿರಸ್ಕರಿದ ಆರ್​ಬಿಐ: ಏಕೆಂದರೆ?
author img

By ETV Bharat Karnataka Team

Published : Feb 21, 2024, 7:16 AM IST

ಮುಂಬೈ: ಭವಿಷ್ಯದಲ್ಲಿ ಯಾವುದಾದರು ಗಂಡಾಂತರಗಳು ಸಂಭವಿಸಿದರೆ ಆಗ, ಭಾರತದ ಸಾಲ ಹಾಗೂ ಜಿಡಿಪಿ ನಡುವಣ ಅನುಪಾತ ಶೇ 100ರ ಗಡಿ ದಾಟಬೇಕಾಗುತ್ತದೆ. ಆಗ ಅನಿವಾರ್ಯವಾಗಿ ಭಾರತ ಸರ್ಕಾರ, ತನ್ನ ಸರ್ಕಾರಿ ವೆಚ್ಚಗಳನ್ನು ಅನಿವಾರ್ಯವಾಗಿ ಕಡಿತಗೊಳಿಸಬೇಕಾಗುತ್ತದೆ ಎಂದು ಐಎಂಎಫ್​ ಹೇಳಿತ್ತು. ಆದರೆ ಇಂಟರ್​ನಾಷನಲ್​ ಮಾನಿಟರ್​ ಫಂಡ್​​ನ ಅಭಿಪ್ರಾಯವನ್ನು ಆರ್​​​ಬಿಐ ತಳ್ಳಿಹಾಕಿದೆ.

ಆರ್‌ಬಿಐ ಬುಲೆಟಿನ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಆರ್‌ಬಿಐ ಡೆಪ್ಯೂಟಿ ಗವರ್ನರ್ ಮೈಕೆಲ್ ಪಾತ್ರಾ ಸೇರಿದಂತೆ ಅರ್ಥಶಾಸ್ತ್ರಜ್ಞರು ಐಎಂಎಫ್​ ನೋಟವನ್ನು ತಿರಸ್ಕರಿಸಿದ್ದಾರೆ. ಸಾಮಾನ್ಯ ಸರ್ಕಾರಿ ಸಾಲ ಮತ್ತು ಜಿಡಿಪಿ ಅನುಪಾತವು ಭಾರತ ತನ್ನ ಇತ್ತೀಚಿನ ಆರ್ಟಿಕಲ್ IV ಸಮಾಲೋಚನಾ ವರದಿಯಲ್ಲಿ IMF ನಿಗದಿಪಡಿಸಿದ ಯೋಜಿತ ಮಾರ್ಗಕ್ಕಿಂತ ಕೆಳಗಿದೆ ಎಂಬುದನ್ನು ನಮ್ಮ ಅಂಕಿ- ಅಂಶಗಳು ಹೇಳುತ್ತಿವೆ ಎಂದಿದ್ದಾರೆ. ಹೀಗಾಗಿ ಭಾರತಕ್ಕೆ ಅಂತಹ ಯಾವುದೇ ಪ್ರಮೇಯ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಅನಿರೀಕ್ಷಿತ ಗಂಡಂತರಗಳು ಬಂದರೆ, ಸರ್ಕಾರಿ ವೆಚ್ಚದ ಮರುಮಾಪನದೊಂದಿಗೆ ಸಾಮಾನ್ಯವಾಗಿ ಸರ್ಕಾರದ ಸಾಲ ಮತ್ತು ಜಿಡಿಪಿ ಅನುಪಾತವು 2030 - 31 ರ ವೇಳೆಗೆ ಶೇ 73.4 ಪ್ರತಿಶತಕ್ಕೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ. ಇದು IMF ನ ಯೋಜಿತ ಪಥದ 78.2 ಶೇಕಡಾಕ್ಕಿಂತ ಸುಮಾರು 5 ಶೇಕಡಾ ಕಡಿಮೆಯಾಗಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.

ಸಾಲ ಮತ್ತು ಜಿಡಿಪಿ ಅನುಪಾತವು 2023 ರಲ್ಲಿ 112.1 ಶೇಕಡಾದಿಂದ 2028 ರಲ್ಲಿ 116.3 ಶೇಕಡಾಕ್ಕೆ ಏರಿಕೆಯಾಗಿದೆ ಎಂದೂ ಲೇಖನದಲ್ಲಿ ಹೇಳಲಾಗಿದೆ. ಐತಿಹಾಸಿಕ ಗಂಡಾಂತರಗಳು ಸಂಭವಿಸಿದರೆ, ಭಾರತದ ಸಾಮಾನ್ಯ ಸರ್ಕಾರದ ಸಾಲವು ಮಧ್ಯಮಾವಧಿಯಲ್ಲಿ GDP 100 ಪ್ರತಿಶತವನ್ನು ಮೀರುತ್ತದೆ ಮತ್ತು ಆದ್ದರಿಂದ ವೆಚ್ಚಗಳ ಮೇಲೆ ಬಿಗಿ ಹಿಡಿತ ಸಾಧಿಸಬೇಕು ಎಂಬ IMF ವಾದವನ್ನು ನಾವು ತಿರಸ್ಕರಿಸುತ್ತೇವೆ ಎಂದು RBI ಅರ್ಥಶಾಸ್ತ್ರಜ್ಞರು ತಮ್ಮ ಲೇಖನದಲ್ಲಿ ಹೇಳಿದ್ದಾರೆ.

ಪ್ರಾಯೋಗಿಕ ಸಂಶೋಧನೆಗಳು, ವಿವೇಚನಾಶೀಲ ಹಣಕಾಸಿನ ಬಲವರ್ಧನೆ ಮತ್ತು ಬೆಳವಣಿಗೆಯ ನಡುವಿನ ಮಧ್ಯಮ - ಅವಧಿಯ ಪೂರಕತೆ ಹಾಗೂ ಅಲ್ಪಾವಧಿಯ ವೆಚ್ಚಗಳನ್ನು ಮೀರಿಸುತ್ತದೆ ಎಂದು ತೋರಿಸುತ್ತಿದೆ. ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯ, ಹವಾಮಾನ ತಗ್ಗಿಸುವಿಕೆ, ಡಿಜಿಟಲೀಕರಣ ಮತ್ತು ಕಾರ್ಮಿಕ ಬಲದ ಕೌಶಲ್ಯಗಳ ಮೇಲೆ ಖರ್ಚು ಮಾಡುವುದರಿಂದ ದೀರ್ಘಕಾಲೀನ ಬೆಳವಣಿಗೆಯ ಲಾಭಾಂಶಗಳನ್ನು ದೇಶ ಪಡೆಯಬಹುದು ಎಂದು ಲೇಖನದಲ್ಲಿ ವಿಷದೀಕರಿಸಲಾಗಿದೆ.

ಡೈನಾಮಿಕ್ ಸ್ಟೋಕಾಸ್ಟಿಕ್ ಸಾಮಾನ್ಯ ಸಮತೋಲನ ಮಾದರಿ ಬಳಸಿಕೊಂಡು, ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಲಾಗುವುದು. ಮೇಲೆ ತಿಳಿಸಿದ ವಿಭಾಗಗಳಲ್ಲಿ ಸರಿಯಾಗಿ ಬಳಸಿಕೊಂಡರೆ ಸರ್ಕಾರದ ಸಾಲ ಮತ್ತು ಜಿಡಿಪಿ ಅನುಪಾತವು 2030-31 ರ ವೇಳೆಗೆ ಜಿಡಿಪಿಯ 73.4 ಪ್ರತಿಶತಕ್ಕೆ ಗಣನೀಯವಾಗಿ ಕುಸಿಯಬಹುದು ಎಂದು ನಾವು ಕಂಡುಕೊಂಡಿದ್ದೇವೆ ಎಂದು ಲೇಖನದಲ್ಲಿ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

2024-25 ರ ಮಧ್ಯಂತರ ಬಜೆಟ್ ಕೇಂದ್ರ ಸರ್ಕಾರದ ಒಟ್ಟು ವಿತ್ತೀಯ ಕೊರತೆಯನ್ನು 2025-26 ರ ವೇಳೆಗೆ ಜಿಡಿಪಿಯ ಶೇಕಡಾ 4.5 ಇಳಿಕೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಮತ್ತು 2024-25 ರಲ್ಲಿ ಜಿಡಿಪಿಯ ಶೇಕಡಾ 5.1 ಕ್ಕೆ ಇಳಿಸುವ ಉದ್ದೇಶ ಹೊಂದಲಾಗಿದೆ ಎಂಬುದನ್ನು ಆರ್​​​​​​ಬಿಐ ಬುಲೆಟಿನ್ಸ್​ನಲ್ಲಿ ಪ್ರಕಟವಾದ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನು ಓದಿ: ವಿಮಾ ವಲಯಕ್ಕೆ ಬೇಕಿದೆ ಕಾಯಕಲ್ಪ: ಸುಧಾರಣಾ ಕ್ರಮ ಜಾರಿಗೆ ಇದು ಸಕಾಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.