ETV Bharat / business

ರೈಲು ಪ್ರಯಾಣಿಕರಿಗಾಗಿ ಬಂದಿದೆ ಸೂಪರ್ ಅಪ್ಲಿಕೇಶನ್: ಟಿಕೆಟ್ ಬುಕಿಂಗ್ ಈಗ ತುಂಬಾ ಸುಲಭ

ರೈಲ್ವೆ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ. ವೇಯ್ಟ್​​ ಲಿಸ್ಟ್ ಟಿಕೆಟ್‌ಗಳ ರದ್ದತಿಗೆ ಇನ್ಮುಂದೆ ಕ್ಲರ್ಕೇಜ್ ಶುಲ್ಕ ವಿಧಿಸಲಾಗುತ್ತದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

railways-developing-new-app-for-passenger-services-vaishnaw
ರೈಲು ಪ್ರಯಾಣಿಕರಿಗಾಗಿ ಬಂದಿದೆ ಸೂಪರ್ ಅಪ್ಲಿಕೇಶನ್: ಟಿಕೆಟ್ ಬುಕಿಂಗ್ ಈಗ ತುಂಬಾ ಸುಲಭ (ETV Bharat)
author img

By ETV Bharat Karnataka Team

Published : 2 hours ago

ನವದೆಹಲಿ: ರೈಲು ಪ್ರಯಾಣಿಕರಿಗಾಗಿ ವಿಶೇಷ ಮೊಬೈಲ್ ಆ್ಯಪ್ ರಚಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಕಾಯ್ದಿರಿಸದ ರೈಲು ಟಿಕೆಟ್‌ಗಳ ಬುಕ್ಕಿಂಗ್, ರೈಲ್ವೆ ಟ್ರ್ಯಾಕಿಂಗ್ ಸೇರಿದಂತೆ ದೂರುಗಳನ್ನು ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ. ಮೇಲಾಗಿ ಈ ಆ್ಯಪ್​ ಮೂಲಕ ಹಲವು ಸೇವೆಗಳನ್ನು ಪಡೆಯಬಹುದು ಎಂದು ಲೋಕಸಭೆ ಸಚಿವರು ಮಾಹಿತಿ ನೀಡಿದ್ದಾರೆ.

ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ರದ್ದುಪಡಿಸಿದ ಟಿಕೆಟ್‌ಗಳಿಗೆ ಮತ್ತು ವೇಟ್‌ಲಿಸ್ಟ್ ಟಿಕೆಟ್‌ಗಳ ರದ್ದತಿಗೆ ಶುಲ್ಕ ವಿಧಿಸಲಾಗುವುದು ಎಂದು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಎಲ್ಲ ಮೂಲಗಳಿಂದ ಬರುವ ಆದಾಯವನ್ನು ರೈಲ್ವೆಯ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ವೆಚ್ಚಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಲೋಕಸಭೆಗೆ ಲಿಖಿತ ಹೇಳಿಕೆ ಮೂಲಕ ತಿಳಿಸಿದ್ದಾರೆ.

ರೈಲ್ವೆ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ: ಕೇಂದ್ರ ಸರ್ಕಾರ ತಂದಿದ್ದ ರೈಲ್ವೆ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ. ಲೋಕಸಭೆಯಲ್ಲಿ ಬುಧವಾರ ಧ್ವನಿ ಮತದ ಮೂಲಕ ಮಸೂದೆ ಅಂಗೀಕರಿಸಲಾಯಿತು. ಚರ್ಚೆಯ ವೇಳೆ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಈ ಮಸೂದೆ ರೈಲ್ವೆಯ ಖಾಸಗೀಕರಣಕ್ಕೆ ಕಾರಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ತಿದ್ದುಪಡಿ ಮೂಲಕ ರೈಲ್ವೆಯನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಪ್ರತಿಪಕ್ಷಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಪ್ರತಿಪಕ್ಷಗಳ ಆರೋಪವನ್ನು ಅವರು ತಳ್ಳಿ ಹಾಕಿದರು. ರೈಲ್ವೆ ತಿದ್ದುಪಡಿ ವಿಧೇಯಕದಿಂದ ಅಂಥದ್ದೇನೂ ಆಗುವುದಿಲ್ಲ ಎಂದು ಅವರು ದೇಶದ ಜನರಿಗೆ ಅಭಯ ನೀಡಿದರು. ರೈಲ್ವೆ ಮಂಡಳಿಯ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ಮತ್ತು ಅದರ ಸ್ವಾತಂತ್ರ್ಯವನ್ನು ಹೆಚ್ಚಿಸಲು ರೈಲ್ವೆ ತಿದ್ದುಪಡಿ ಮಸೂದೆ ಇದೆ ಎಂದು ರೈಲ್ವೆ ಸಚಿವರು ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 9 ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಈ ಮಸೂದೆ ಮಂಡಿಸಿದ್ದರು.

ಇದನ್ನು ಓದಿ:ಕೈಗೆಟುಕುವ ದರದಲ್ಲಿ ಗೇಮಿಂಗ್​ ಫೋನ್; ಪವರ್​ಫುಲ್​ ಚಿಪ್​ಸೆಟ್​ ಸೇರಿದಂತೆ ಅನೇಕ ವೈಶಿಷ್ಟ್ಯಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.