ETV Bharat / business

ವೈಯಕ್ತಿಕ ಸಾಲ ತೆಗೆದುಕೊಳ್ಳುವ ಯೋಚನೆಯಲ್ಲಿದ್ದೀರಾ?: ಹಾಗಾದರೆ ಈ ಅಂಶಗಳು ನಿಮ್ಮ ಗಮನದಲ್ಲಿರಲಿ - personal loan things

author img

By ETV Bharat Karnataka Team

Published : 3 hours ago

ವಾಹನ ಮತ್ತು ಗೃಹ ಸಾಲಗಳಿಗೆ ಹೋಲಿಕೆ ಮಾಡಿದರೆ ವೈಯಕ್ತಿಕ ಸಾಲಗಳು ತಕ್ಷಣಕ್ಕೆ ಹೆಚ್ಚಿನ ಸಮಸ್ಯೆಯಿಲ್ಲದೇ ಲಭ್ಯವಾಗುತ್ತವೆ.

points-to-keep-in-mind-before-applying-for-a-personal-loan
ವೈಯಕ್ತಿಕ ಸಾಲ ತೆಗೆದುಕೊಳ್ಳುವ ಯೋಚನೆಯಲ್ಲಿದ್ದರೆ, ಈ ಅಂಶ ಗಮನದಲ್ಲಿರಲಿ (IANS - ಸಾಂದರ್ಭಿಕ ಚಿತ್ರ)

ಹೈದರಾಬಾದ್​: ಅನಿರೀಕ್ಷಿತ ಆರ್ಥಿಕ ಸಮಸ್ಯೆ ಎದುರಾದಾಗ ಅನೇಕ ಜನರು ವೈಯಕ್ತಿಕ ಸಾಲದ ಕಡೆಗೆ ನೋಡುತ್ತಾರೆ. ಈ ವೇಳೆ, ಬ್ಯಾಂಕ್​ ಜೊತೆಗೆ ಬ್ಯಾಂಕೇತರ ಹಣಕಾಸಿನ ಸಂಸ್ಥೆಗಳು ಮತ್ತು ಡಿಜಿಟಲ್​ ಲೋನ್​ ಆ್ಯಪ್​ಗಳು ತಕ್ಷಣಕ್ಕೆ ಸಾಲದ ಭರವಸೆ ನೀಡುತ್ತವೆ. ಅನೇಕ ಜನರು ಈ ಸಾಲವನ್ನು ಆಸ್ಪತ್ರೆಗಳ​​ ಖರ್ಚು, ಪ್ರವಾಸ ರಜೆ, ಸಣ್ಣ ಸಾಲದಿಂದ ದೊಡ್ಡ ಸಾಲ ತೀರಿಸಲು ಬಳಕೆ ಮಾಡುತ್ತಾರೆ.

ತಕ್ಷಣದ ಅವಶ್ಯಕತೆ ಪೂರೈಸಲು ಇಂತಹ ಸಾಲಗಳು ಆಕರ್ಷಕವಾಗಿಯೂ ಕಾಣುತ್ತವೆ. ಅಷ್ಟಕ್ಕೂ ತಕ್ಷಣಕ್ಕೆ ಸಾಲ ಸಿಗುವುದರಿಂದ ಬಹುತೇಕರು ವೈಯಕ್ತಿಕ ಸಾಲದ ಮೊರೆ ಹೋಗುತ್ತಾರೆ. ಇವು ದೀರ್ಘ ಕಾಲದ ಆರ್ಥಿಕ ಪರಿಸ್ಥಿತಿಯಲ್ಲಿ ಗಂಭೀರ ಪರಿಣಾಮ ಒಡ್ಡುತ್ತವೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವ ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಿರ್ಧಾರ ಪಡೆಯುವುದು ಸೂಕ್ತ.

ವಾಹನ ಮತ್ತು ಗೃಹ ಸಾಲಗಳಿಗೆ ಹೋಲಿಕೆ ಮಾಡಿದರೆ ವೈಯಕ್ತಿಕ ಸಾಲಗಳು ತಕ್ಷಣಕ್ಕೆ ಹೆಚ್ಚಿನ ಸಮಸ್ಯೆಯಿಲ್ಲದೇ ಲಭ್ಯವಾಗುತ್ತವೆ. ಅಲ್ಲದೇ ಅವುಗಳ ಬಡ್ಡಿ ಕೂಡ ಕೊಂಚ ಅಧಿಕ. ಬಹುತೇಕ ಸಾಲ ಸಂಸ್ಥೆಗಳು 750 ಅಂಕಗಳಿಗಿಂತ ಹೆಚ್ಚು ಕ್ರೆಡಿಟ್​​​​ ಸ್ಕೋರ್​ ಇದ್ದಾಗ ಸುಲಭವಾಗಿ ಸಾಲ ನೀಡುತ್ತದೆ. ಅದರಲ್ಲೂ ಹಬ್ಬದ ಸೀಸನ್​ ನಲ್ಲಿ ಇಂತಹ ಸಾಲವನ್ನು ಅತಿ ಹೆಚ್ಚು ಪಡೆಯಲಾಗುತ್ತದೆ. ಈ ಸಮಯದಲ್ಲಿ ಅನೇಕ ಮಂದಿ ಕೊಂಚ ಅಧಿಕ ಬಡ್ಡಿದರಕ್ಕೆ ಸಾಲ ಪಡೆದುಕೊಳ್ಳುತ್ತಾರೆ. ಬ್ಯಾಂಕ್​ಗಳು ಕೂಡ ಇದೀಗ ವಿಶೇಷ ಯೋಜನೆ ಅಡಿ ಸಾಲ ನೀಡಲು ಮುಂದಾಗುತ್ತವೆ. ಈ ನಿಟ್ಟಿನಲ್ಲೂ ಕೆಲವು ಅಂಶಗಳನ್ನು ಗಮನಿಸಬೇಕಾಗಿರುವುದು ಅಗತ್ಯ.

ಸಾಲದ ಮೌಲ್ಯ: ವೈಯಕ್ತಿಕ ಸಾಲ ತೆಗೆದಿಕೊಳ್ಳಬೇಕಾದರೆ ಎಷ್ಟು ಪಡೆಯಬೇಕು ಎಂಬುದರ ಬಗ್ಗೆ ಗಮನವಿರಲಿ. ಅಗತ್ಯವಿದ್ದಷ್ಟೇ ಮಾತ್ರ ಸಾಲ ಪಡೆದುಕೊಳ್ಳಿ. ಅಗತ್ಯಕ್ಕೆ ತಕ್ಕ ಸಾಲವನ್ನು ಪಡೆಯುವುದರಿಂದ ಹೆಚ್ಚಿನ ಬಡ್ಡಿಯ ಹೊರೆ ತಪ್ಪಲಿದೆ.

ಅವಧಿ: ಸಾಲವನ್ನು ತೆಗೆದುಕೊಂಡ ಬಳಿಕ ಅದನ್ನು ನಿಗದಿತ ಗಡುವಿನೊಳಗೆ ವಾಪಸ್​ ಮಾಡಿದರೆ ಮಾತ್ರ ನಿಮ್ಮ ಕ್ರೆಡಿಟ್​ ಸ್ಕೋರ್​ ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆರ್ಥಿಕ ಪರಿಣತರು ಹೇಳುವಂತೆ ವೈಯಕ್ತಿಕ ಸಾಲದ ಅವಧಿಯು 36 ತಿಂಗಳಿಗೆ ಮೀರಬಾರದು. ಕೊಂಚ ಇಎಂಐ ಹೆಚ್ಚಾದರೂ, ನಿಮ್ಮನ್ನು ಬೇಗ ಅದು ಸಾಲ ಮುಕ್ತಗೊಳಿಸುತ್ತದೆ.

ಎಲ್ಲಿ ಸಾಲ ತೆಗೆದುಕೊಳ್ಳಬೇಕು?: ಸಾಲವನ್ನು ಪಡೆಯಬೇಕು ಎಂದು ನಿರ್ಧರಿಸಿದಾಗ ಎಲ್ಲಿಂದ ಪಡೆಯಬೇಕು ಎಂಬುದು ಮುಖ್ಯವಾಗುತ್ತದೆ. ಬ್ಯಾಂಕ್​ ಮತ್ತು ಆರ್​ಬಿಐ ಅನುಮೋದಿತ ಆರ್ಥಿಕ ಸಂಸ್ಥೆಗಳಲ್ಲಿ ಹೆಚ್ಚು ಸಮಸ್ಯೆ ಇರುವುದಿಲ್ಲ. ಆದರೆ, ಲೋನ್​ ಆ್ಯಪ್​ಗಳಿಂದ ಸಾಲ ಪಡೆದುಕೊಳ್ಳುವಾಗ ಎರಡು ಬಾರಿ ಯೋಚಿಸಿ, ಸಾಧ್ಯವಾದಲ್ಲಿ ಇವುಗಳಿಂದ ದೂರ ಇರುವುದೇ ಉತ್ತಮ.

ಕ್ರೆಡಿಟ್​ ಸ್ಕೋರ್​: ಉತ್ತಮ ಕ್ರೆಡಿಟ್​ ಸ್ಕೋರ್​ ಇದ್ದಾಗ ಸಾಲ ಪಡೆಯುವುದು ಸುಲಭವಾಗಲಿದೆ. ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಕ್ರೆಡಿಟ್​​ ಸ್ಕೋರ್​ ಅನ್ನು ಪರಿಶೀಲಿಸಿ. 750ಗಿಂತ ಕಡಿಮೆ ಸ್ಕೋರ್​ ಇರದಂತೆ ನೋಡಿಕೊಂಡಾಗ ಶೀಘ್ರದಲ್ಲೇ ಸಾಲ ಸಿಗುತ್ತದೆ.

ಬಡ್ಡಿದರ: ಸದ್ಯ ವೈಯಕ್ತಿಕ ಸಾಲದ ಬಡ್ಡಿದರ 12 ರಿಂದ 23ರ ರಷ್ಟಿದೆ. ಈ ಹಿನ್ನೆಲೆಯಲ್ಲಿ ಸಾಲ ಪಡೆಯುವ ಮುನ್ನ ಬಡ್ಡಿದರ ಎಷ್ಟಿದೆ ಎಂಬುದನ್ನು ಬೇರೆ ಬೇರೆ ಕಡೆ ವಿಚಾರಿಸಿ, ಎರಡು ಬ್ಯಾಂಕ್​ಗಳ ಬಡ್ಡಿದ ಹೋಲಿಕೆ ಮಾಡಿದ ಬಳಿಕ, ಯಾವ ಕಡೆ ಕಡಿಮೆ ಬಡ್ಡಿದರ ಇರುತ್ತದೋ ಅಲ್ಲಿ ಸಾಲ ಪಡೆದುಕೊಳ್ಳಿ.

ಸಾಲದ ಕಂತು​: ಸಾಲದ ಮೇಲೆ ಅದರ ಸಾಲದಕಂತು, ಬಡ್ಡಿದರ ಮತ್ತು ಅವಧಿ ಅವಲಂಬಿತವಾಗಿರುತ್ತದೆ. ನಿಯಮಿತ ಸಾಲದ ಕಂತುಗಳು ತೊಂದರೆಯಿಂದ ಕೂಡಿರಬಾರದು. ಸರಿಯಾದ ಸಮಯಕ್ಕೆ ಸಾಲದ ಕಂತು ಕಟ್ಟದಿದ್ದರೆ ಅದು ಕ್ರೆಡಿಟ್​ ಸ್ಕೋರ್​ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬೇಡಿ.

ಪ್ರಿಪೇಮೆಂಟ್​​: ಕೆಲವು ಬ್ಯಾಂಕ್​ ಮತ್ತು ಹಣಕಾಸಿನ ಸಂಸ್ಥೆಗಳು ಅವಧಿಗಿಂತ ಮುನ್ನವಾಗಿ ಪ್ರಿನ್ಸಿಪಲ್​ ಅಮೌಂಟ್​ ಕಟ್ಟಿದಾಗ 3-6ರಷ್ಟು ಪ್ರಿಪೇಮಂಟ್​ ಚಾರ್ಚ್​ ಮಾಡುತ್ತವೆ. ಈ ಕುರಿತು ಮೊದಲೇ ತಿಳಿಯುವುದು ಉತ್ತಮ.

40 ಪರ್ಸೆಂಟ್​ಗಿಂತ ಹೆಚ್ಚು ಬೇಡ: ನೀವು ತೆಗೆದುಕೊಳ್ಳುವ ಸಾಲವು ನಿಮ್ಮ ಒಟ್ಟಾರೆ ಆದಾಯದ ಶೇ 40ರಷ್ಟನ್ನು ಮೀರಬಾರದು. ಜವಾಬ್ದಾರಿ ಹೆಚ್ಚಾದಾಗ ಸಾಲದ ಕಂತು ಕಟ್ಟುವುದು ಕಷ್ಟವಾಗುತ್ತದೆ.

ಪರ್ಯಾಯಗಳು: ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವಾಗ ಪರ್ಯಾಯವಾಗಿ ಲಭ್ಯವಿರುವ ಇತರ ಸಾಲವನ್ನು ನೋಡಿ. ತುರ್ತು ನಿಧಿಯನ್ನು ತಾತ್ಕಲಿಕ ಆರ್ಥಿಕ ಹೊಂದಾಣಿಕೆ ಬಳಕೆ ಮಾಡಬಹುದು. ಚಿನ್ನವನ್ನು ಕೂಡ ಪರ್ಯಾಯವಾಗಿ ಬಳಕೆ ಮಾಡಬಹುದು. ಎಲ್ಲವನ್ನೂ ಪರಿಶೀಲಿಸಿದ ಬಳಿಕವೇ ವೈಯಕ್ತಿಕ ಸಾಲ ಮಾಡುವುದಕ್ಕೆ ಮುಂದಾಗಿ. ಇಲ್ಲದಿದ್ದರೆ ನೀವು ಸಾಲದ ಸುಳಿಯಲ್ಲಿ ಸಿಲುಕುತ್ತೀರಿ ಎಚ್ಚರ.

ನಿಮ್ಮ ಗಮನಕ್ಕೆ: ಈಟಿವಿ ಭಾರತದಲ್ಲಿ ನಾವು ನೀಡುವ ಈ ಮಾಹಿತಿಯು ವಿವಿಧ ಆರ್ಥಿಕ ತಜ್ಞರ ಸಲಹೆ ಆಧರಿಸಿ ನೀಡಿರುತ್ತೇವೆ. ಇವು ಕೇವಲ ಸಲಹೆಗಳು ಮಾತ್ರ, ಉತ್ಪನ್ನಗಳು ಅಥವಾ ಸೇವೆಗಳ ಬಗ್ಗೆ ಸರಿಯಾಗಿ ವಿಚಾರಣೆ ಮಾಡಿ ಖರೀದಿಸಬೇಕು. ಆಯಾ ಉತ್ಪನ್ನಗಳು / ಗುಣಮಟ್ಟ ಅಥವಾ ಲೋಪಗಳಿಗೆ ಈ ಟಿವಿ ಭಾರತ ಜವಾಬ್ದಾರಿ ವಹಿಸುವುದಿಲ್ಲ.

ಇದನ್ನೂ ಓದಿ: ಅವಸರವೇ ಅಪಾಯ, ಎಡವಿದ್ರೆ ಹಣ ಮಾಯ: ಆನ್​ಲೈನ್​ ಶಾಪಿಂಗ್‌ಗೂ ಮುನ್ನ ಎಚ್ಚರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.