ETV Bharat / business

2024ರ ಫೆಬ್ರವರಿಯಲ್ಲಿ 14.8 ಕೋಟಿಗೆ ಏರಿದ ಡಿಮ್ಯಾಟ್ ಖಾತೆಗಳ ಸಂಖ್ಯೆ - NSE active clients

ಫೆಬ್ರವರಿ ಹೊತ್ತಿಗೆ ದೇಶದಲ್ಲಿ ಡಿಮ್ಯಾಟ್ ಖಾತೆಗಳ ಸಂಖ್ಯೆ 14.8 ಕೋಟಿಗೆ ಹೆಚ್ಚಳವಾಗಿದೆ.

New demat accounts surged to 4.3 million in February

author img

By ETV Bharat Karnataka Team

Published : Mar 14, 2024, 4:01 PM IST

ನವದೆಹಲಿ: ಫೆಬ್ರವರಿ 2024ರ ಹೊತ್ತಿಗೆ ಭಾರತದಲ್ಲಿನ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ 148 ಮಿಲಿಯನ್​​ಗೆ (14.8 ಕೋಟಿ) ಏರಿಕೆಯಾಗಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ತಿಳಿಸಿದೆ. ಫೆಬ್ರವರಿ 2024 ರಲ್ಲಿ 4.3 ಮಿಲಿಯನ್ ಹೊಸ ಡಿಮ್ಯಾಟ್ ಖಾತೆಗಳು ಸೇರ್ಪಡೆಯಾಗಿದ್ದು, ಹಣಕಾಸು ವರ್ಷ 2023 ರಲ್ಲಿ ಮಾಸಿಕ ಸರಾಸರಿ 2.1 ಮಿಲಿಯನ್ ಹೊಸ ಡಿಮ್ಯಾಟ್ ಖಾತೆಗಳು ಸೃಷ್ಟಿಯಾಗಿವೆ.

ಫೆಬ್ರವರಿ 2024 ರಲ್ಲಿ, ಸಿಡಿಎಸ್ಎಲ್​​ನಲ್ಲಿ ಅತ್ಯಧಿಕ ಡಿಮ್ಯಾಟ್ ಖಾತೆಗಳು ಸೇರ್ಪಡೆಯಾಗಿವೆ ಮತ್ತು ಎಂಒಎಂ ಆಧಾರದ ಮೇಲೆ ಸಿಡಿಎಸ್ಎಲ್ ತನ್ನ ಮಾರುಕಟ್ಟೆ ಪಾಲು ಹೆಚ್ಚಿಸಿಕೊಂಡಿದೆ. ವಾರ್ಷಿಕ ಆಧಾರದ ಮೇಲೆ, ಎನ್ಎಸ್​ಡಿಎಲ್ ಒಟ್ಟು ಅಥವಾ ಹೊಸದಾಗಿ ಸೇರ್ಪಡೆಯಾದ ಖಾತೆಗಳ ಪೈಕಿ 380 ಬಿಪಿ / 920 ಬಿಪಿ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ ಎಂದು ವರದಿ ತಿಳಿಸಿದೆ.

ಎನ್ಎಸ್ಇಯಲ್ಲಿ ಸಕ್ರಿಯ ಗ್ರಾಹಕರ ಸಂಖ್ಯೆ ಫೆಬ್ರವರಿ 2024 ರಲ್ಲಿ ಶೇಕಡಾ 4.8 ರಷ್ಟು ಏರಿಕೆಯಾಗಿ 40.05 ಮಿಲಿಯನ್​ಗೆ ತಲುಪಿದೆ. ಪ್ರಸ್ತುತ, ಅಗ್ರ ಐದು ಡಿಸ್ಕೌಂಟ್ ಬ್ರೋಕರ್​ಗಳು ಒಟ್ಟು ಎನ್ಎಸ್ಇ ಸಕ್ರಿಯ ಗ್ರಾಹಕರ ಪೈಕಿ ಶೇಕಡಾ 63.5 ರಷ್ಟು ಗ್ರಾಹಕರನ್ನು ಹೊಂದಿದ್ದಾರೆ. ಇದು ಫೆಬ್ರವರಿ 2023 ರಲ್ಲಿ ಶೇಕಡಾ 59.6 ರಷ್ಟಿತ್ತು.

ಡಿಸ್ಕೌಂಟ್ ಬ್ರೋಕರ್​ಗಳ ಪೈಕಿ ಜೆರೋಧಾ ಗ್ರಾಹಕರ ಸಂಖ್ಯೆಯಲ್ಲಿ ಶೇಕಡಾ 3.3 ರಷ್ಟು ಅಥವಾ 7.2 ಮಿಲಿಯನ್ ಹೆಚ್ಚಾಗಿದೆ ಮತ್ತು ಮಾರುಕಟ್ಟೆ ಪಾಲು 30 ಬಿಪಿಯಿಂದ 18 ಶೇಕಡಾಕ್ಕೆ ಇಳಿದಿದೆ. ಏಂಜೆಲ್ ಒನ್ ಗ್ರಾಹಕರ ಸಂಖ್ಯೆ ಶೇಕಡಾ 5.2 ರಷ್ಟು ಅಥವಾ 5.9 ಮಿಲಿಯನ್ ಹೆಚ್ಚಾಗಿದ್ದು, ಮಾರುಕಟ್ಟೆ ಪಾಲು ಶೇಕಡಾ 14.9 ರಷ್ಟಿದೆ. ಅಪ್ ಸ್ಟಾಕ್ಸ್ ಗ್ರಾಹಕರ ಸಂಖ್ಯೆ ಶೇಕಡಾ 4.1 ರಷ್ಟು ಅಥವಾ 2.5 ಮಿಲಿಯನ್ ಹೆಚ್ಚಾಗಿದ್ದು, ಮಾರುಕಟ್ಟೆ ಪಾಲು ಶೇಕಡಾ 6.2 ಕ್ಕೆ ಇಳಿಕೆಯಾಗಿದೆ. ಗ್ರೋವ್ ಗ್ರಾಹಕರ ಸಂಖ್ಯೆ ಶೇಕಡಾ 9.1 ರಷ್ಟು ಅಥವಾ 9.2 ಮಿಲಿಯನ್ ಹೆಚ್ಚಾಗಿದ್ದು, ಮಾರುಕಟ್ಟೆ ಪಾಲು ಶೇಕಡಾ 22.9 ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.

ಡಿಮ್ಯಾಟ್ ಖಾತೆ ಇದು ಬ್ಯಾಂಕ್ ಖಾತೆಯ ರೀತಿಯಲ್ಲಿಯೇ ಇದ್ದು, ಇದರಲ್ಲಿ ನಿಮ್ಮ ಷೇರು ಪ್ರಮಾಣಪತ್ರಗಳು ಮತ್ತು ಎಲೆಕ್ಟ್ರಾನಿಕ್ ಸ್ವರೂಪದಲ್ಲಿರುವ ಇತರ ಸೆಕ್ಯುರಿಟಿಗಳನ್ನು ಸಂಗ್ರಹಿಸಲಾಗಿರುತ್ತದೆ.

ಇದನ್ನೂ ಓದಿ : ಫೆಬ್ರವರಿಯಲ್ಲಿ ಭಾರತದ ಸಗಟು ಹಣದುಬ್ಬರ ಶೇ 0.2ಕ್ಕೆ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.