ETV Bharat / business

ರಾಜಸ್ಥಾನದ 700 ಮೆಗಾವ್ಯಾಟ್ ಘಟಕದಲ್ಲಿ ಪರಮಾಣು ಇಂಧನ ಲೋಡಿಂಗ್​ ಪ್ರಾರಂಭ - Nuclear Power Project - NUCLEAR POWER PROJECT

ರಾಜಸ್ಥಾನ ಅಣು ವಿದ್ಯುತ್ ಯೋಜನೆಯ 700 ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರದಲ್ಲಿ ಇಂಧನ ಲೋಡಿಂಗ್ ಪ್ರಕ್ರಿಯೆ ಶುರುವಾಗಿದೆ.

nuclear power plant
ಅಣು ವಿದ್ಯುತ್ ಸ್ಥಾವರ (IANS)
author img

By ETV Bharat Karnataka Team

Published : Aug 2, 2024, 6:59 PM IST

ಚೆನ್ನೈ: ರಾಜಸ್ಥಾನ ಅಣು ವಿದ್ಯುತ್ ಯೋಜನೆಯ 700 ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರದಲ್ಲಿ ಪರಮಾಣು ಇಂಧನ ಲೋಡ್ ಮಾಡುವ ಪ್ರಕ್ರಿಯೆ ಮಂಗಳವಾರ ಆರಂಭವಾಗಿದೆ ಎಂದು ಅಣು ವಿದ್ಯುತ್ ನಿಗಮ ಲಿಮಿಟೆಡ್ (ಎನ್​​ಪಿಸಿಐಎಲ್) ಬುಧವಾರ ಪ್ರಕಟಿಸಿದೆ. ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್​ಬಿ) ಯಿಂದ ಅನುಮತಿ ಪಡೆದ ನಂತರ ಮತ್ತು ಇತರ ಎಲ್ಲಾ ಅವಶ್ಯಕತೆಗಳನ್ನು ಪೂರ್ಣಗೊಳಿಸಿದ ನಂತರ ಆರಂಭಿಕ ಇಂಧನ ಲೋಡ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಎನ್‌ಪಿಸಿಐಎಲ್ ತಿಳಿಸಿದೆ.

ಆರಂಭಿಕ ಇಂಧನ ಲೋಡಿಂಗ್ ಪ್ರಕ್ರಿಯೆಯ ನಂತರ ಕ್ರಿಟಿಕ್ಯಾಲಿಟಿಯ ಮೊದಲ ಹಂತ ಆರಂಭವಾಗುತ್ತದೆ (ಮೊದಲ ಬಾರಿಗೆ ಪರಮಾಣು ವಿದಳನದ ಪ್ರಾರಂಭ) ಮತ್ತು ನಂತರ ವಿದ್ಯುತ್ ಉತ್ಪಾದನೆ ಪ್ರಾರಂಭವಾಗುತ್ತದೆ. ಎನ್​​ಪಿಸಿಐಎಲ್ ಪ್ರಕಾರ, 7ನೇ ಘಟಕದಿಂದ ವಾಣಿಜ್ಯ ವಿದ್ಯುತ್ ಉತ್ಪಾದನೆ ಈ ವರ್ಷ ನಡೆಯಲಿದೆ.

ಮತ್ತೊಂದು 700 ಮೆಗಾವ್ಯಾಟ್ ಸ್ಥಾವರ (ಯುನಿಟ್ 8) ಮುಂದಿನ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಅಣು ವಿದ್ಯುತ್ ನಿಗಮ ತಿಳಿಸಿದೆ. ದೇಶದಲ್ಲಿ ನಿರ್ಮಿಸಲಾಗುತ್ತಿರುವ ಹದಿನಾರು 700 ಮೆಗಾವ್ಯಾಟ್ ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳ (ಪಿಎಚ್ ಡಬ್ಲ್ಯುಆರ್) ಸರಣಿಯಲ್ಲಿ ಆರ್‌ಎಪಿಪಿಯ 7ನೇ ಘಟಕ ಮೂರನೆಯದು ಎಂದು ಎನ್​ಪಿಸಿಐಎಲ್ ತಿಳಿಸಿದೆ.

700 ಮೆಗಾವ್ಯಾಟ್ ಪಿಎಚ್​ಡಬ್ಲ್ಯೂಆರ್​ಗಳಲ್ಲಿ ಮೊದಲ ಎರಡು 2023-24ರಲ್ಲಿ ಗುಜರಾತ್​ನ ಕಕ್ರಾಪರ್​ನಲ್ಲಿ (ಘಟಕಗಳು 3 ಮತ್ತು 4) ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಎನ್​ಪಿಸಿಐಎಲ್ ತಿಳಿಸಿದೆ. ಕಕ್ರಾಪರ್​ನಲ್ಲಿರುವ ಈ ಎರಡೂ ಘಟಕಗಳು ಉತ್ತಮ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಕಳೆದ ತಿಂಗಳ ಕೊನೆಯಲ್ಲಿ, ರಾಜಸ್ಥಾನ ಪರಮಾಣು ವಿದ್ಯುತ್ ಸ್ಥಾವರದ (ಆರ್​ಎಪಿಎಸ್) 220 ಮೆಗಾವ್ಯಾಟ್ ಘಟಕ 3 ಅನ್ನು ಕೂಲಂಟ್ ಚಾನೆಲ್, ಫೀಡರ್ ಮತ್ತು ಇತರ ನವೀಕರಣಗಳನ್ನು ಬದಲಾಯಿಸುವುದು ಸೇರಿದಂತೆ ಪ್ರಮುಖ ಬದಲಾವಣೆ ಮತ್ತು ಆಧುನೀಕರಣಕ್ಕೆ ಒಳಗಾದ ನಂತರ ಗ್ರಿಡ್​ಗೆ ಸಂಪರ್ಕಿಸಲಾಯಿತು. ಯುನಿಟ್ 3 ಅಥವಾ ಆರ್​ಎಪಿಎಸ್ 3 ಈಗ 30 ವರ್ಷಗಳ ವಿಸ್ತೃತ ಜೀವಿತಾವಧಿಯೊಂದಿಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಿದೆ ಎಂದು ಎನ್​​ಪಿಸಿಐಎಲ್ ತಿಳಿಸಿದೆ.

ಆರ್​ಎಪಿಎಸ್ 3 ಜೂನ್ 2000ರಲ್ಲಿ ವಾಣಿಜ್ಯ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಿತ್ತು. 2022ರಲ್ಲಿ ಇದರ ನವೀಕರಣ ಆರಂಭಿಸುವ ಮುನ್ನ 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ.

ಮಾರ್ಚ್ 2024ರಲ್ಲಿ, ಚೆನ್ನೈ ಬಳಿಯ ಕಲ್ಪಕ್ಕಂನಲ್ಲಿ ಸ್ಥಾಪಿಸಲಾದ ಮೊದಲ ಸ್ಥಳೀಯ 500 ಮೆಗಾವ್ಯಾಟ್ ಮೂಲಮಾದರಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಪಿಎಫ್​​ಬಿಆರ್) ನಲ್ಲಿ 'ಕೋರ್ ಲೋಡಿಂಗ್' ನೊಂದಿಗೆ ಭಾರತವು ಮೂರು ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮದ ಎರಡನೇ ಹಂತಕ್ಕೆ ಕಾಲಿಟ್ಟಿದೆ.

ಇದನ್ನೂ ಓದಿ: ಸ್ಮಾರ್ಟ್​ಫೋನ್​ ಮಾರಾಟ ಶೇ 8ರಷ್ಟು ಹೆಚ್ಚಳ: ಅಗ್ರಸ್ಥಾನದಲ್ಲಿ ಸ್ಯಾಮ್​ಸಂಗ್​ - Global Smartphone Market

ETV Bharat Logo

Copyright © 2024 Ushodaya Enterprises Pvt. Ltd., All Rights Reserved.