ETV Bharat / business

ಮುಂಬೈ ಷೇರು ಮಾರುಕಟ್ಟೆ ಇಂದು: ಇಳಿಕೆಯಲ್ಲಿ ದಿನದ ವಹಿವಾಟು ಮುಗಿಸಿದ ಸೆನ್ಸೆಕ್ಸ್,​ ನಿಫ್ಟಿ - Mumbai Share Market - MUMBAI SHARE MARKET

ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ ಮತ್ತು ನಿಫ್ಟಿ ಇಳಿಕೆಯೊಂದಿಗೆ ಕೊನೆಗೊಂಡಿವೆ.

Sensex down 27 points Nifty down 19 points

author img

By ETV Bharat Karnataka Team

Published : Apr 3, 2024, 5:48 PM IST

ಮುಂಬೈ: ಬುಧವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಚಂಚಲತೆಯೊಂದಿಗೆ ವಹಿವಾಟು ನಡೆಸಿ, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕುಸಿತದೊಂದಿಗೆ ಕೊನೆಗೊಂಡವು. ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ವಿಳಂಬಕ್ಕೆ ಪ್ರತಿಕ್ರಿಯೆಯಾಗಿ ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಕುಸಿತವನ್ನು ಗಮನಿಸಿದ ಹೂಡಿಕೆದಾರರು ಇಂದು ಜಾಗರೂಕರಾಗಿದ್ದರು. ಫೆಡರಲ್ ರಿಸರ್ವ್​ನ ನಿರ್ಧಾರ ತೆಗೆದುಕೊಳ್ಳುವಿಕೆಯ ಬಗೆಗಿನ ಕಳವಳಗಳಿಂದ ಮಾರುಕಟ್ಟೆಯ ಭಾವನೆಯು ಪ್ರಭಾವಿತವಾಯಿತು ಮತ್ತು ಇದು ದಿನವಿಡೀ ವ್ಯಾಪಾರ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು.

ಎನ್ಎಸ್ಇ ನಿಫ್ಟಿ-50 18.65 ಪಾಯಿಂಟ್ಸ್ ಅಥವಾ ಶೇ 0.08ರಷ್ಟು ಕುಸಿದು 22,434.65 ರಲ್ಲಿ ಕೊನೆಗೊಂಡರೆ, ಬಿಎಸ್ಇ ಸೆನ್ಸೆಕ್ಸ್ 27.09 ಪಾಯಿಂಟ್ಸ್ ಅಥವಾ ಶೇ 0.04ರಷ್ಟು ಕುಸಿದು 73,876.82 ರಲ್ಲಿ ಕೊನೆಗೊಂಡಿದೆ.

ಏಷ್ಯಾದ ಮಾರುಕಟ್ಟೆಗಳು ಶೇ 1ರಷ್ಟು ಕುಸಿತವಾದರೆ, ಯುರೋಪಿಯನ್ ಮಾರುಕಟ್ಟೆಗಳು ಯುಎಸ್ ಆರ್ಥಿಕ ದತ್ತಾಂಶದಿಂದ ಪ್ರಭಾವಿತವಾದ ಮಿಶ್ರ ಪ್ರದರ್ಶನವನ್ನು ತೋರಿಸಿವೆ.

ಒಟ್ಟಾರೆ ಮಾರುಕಟ್ಟೆಯ ಭಾವನೆಯ ಹೊರತಾಗಿಯೂ 13 ಪ್ರಮುಖ ವಲಯಗಳ ಪೈಕಿ 8 ವಲಯ ಷೇರುಗಳು ಲಾಭ ಕಂಡವು. ಟಿಸಿಎಸ್, ಎಚ್​ಸಿಎಲ್ ಟೆಕ್ ಮತ್ತು ಟೆಕ್ ಮಹೀಂದ್ರಾದಂತಹ ಪ್ರಮುಖ ಕಂಪನಿಗಳ ಷೇರುಗಳನ್ನು ಒಳಗೊಂಡ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಶೇ 0.73 ರಷ್ಟು ಹೆಚ್ಚಳವನ್ನು ದಾಖಲಿಸಿದೆ.

ಕಚ್ಚಾ ತೈಲ ಬೆಲೆ ಏರಿಕೆ: ಬುಧವಾರದ ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಶೇಕಡಾ 0.09 ರಷ್ಟು ಏರಿಕೆಯಾಗಿ 89.00 ಕ್ಕೆ ತಲುಪಿದ್ದರೆ, ಡಬ್ಲ್ಯುಟಿಐ ಬೆಲೆ ಶೇಕಡಾ 0.02 ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 85.16 ಡಾಲರ್​ಗೆ ತಲುಪಿದೆ.

ರೂಪಾಯಿ 3 ಪೈಸೆ ಇಳಿಕೆ: ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ (ಫಾರೆಕ್ಸ್) ಮಾರುಕಟ್ಟೆಯಲ್ಲಿ, ಯುಎಸ್ ಡಾಲರ್ ವಿರುದ್ಧ ರೂಪಾಯಿ 3 ಪೈಸೆ ಕುಸಿದು 83.45 ಕ್ಕೆ (ತಾತ್ಕಾಲಿಕ) ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ವಿದೇಶಿ ನಿಧಿಯ ಹೊರಹರಿವು ರೂಪಾಯಿ ಕುಸಿತಕ್ಕೆ ಕಾರಣವಾಯಿತು.

ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಯುಎಸ್ ಡಾಲರ್ ವಿರುದ್ಧ ರೂಪಾಯಿ 83.36 ರಲ್ಲಿ ಪ್ರಾರಂಭವಾಯಿತು. ದಿನದ ಗರಿಷ್ಠ 83.36 ಮತ್ತು ಕನಿಷ್ಠ 83.45 ರ ನಡುವೆ ಏರಿಳಿತದ ನಂತರ, ಇದು ಅಂತಿಮವಾಗಿ 83.45 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 4 ಪೈಸೆ ಕಡಿಮೆಯಾಗಿದೆ.

ಇದನ್ನೂ ಓದಿ : ಯುಪಿಐ ವಹಿವಾಟುಗಳ ಸಂಖ್ಯೆ ಶೇ 56ರಷ್ಟು ಹೆಚ್ಚಳ: ಕಾರ್ಡ್​ಗಳ ಸಂಖ್ಯೆಯೂ ಏರಿಕೆ - UPI TRANSACTIONS

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.